Pawan Kalyan: ವರಾಹಿಗೆ ಭಕ್ತಿಯ ಪೂಜೆ, ಭರ್ಜರಿ ಪ್ರಚಾರ ಶುರು ಮಾಡಿದ ಪವನ್ ಕಲ್ಯಾಣ್
ಕಾಲಿವುಡ್ ಪವರ್ಸ್ಟಾರ್ ಪವನ್ ಕಲ್ಯಾಣ್ ಅವರು ಭರ್ಜರಿಯಾಗಿ ಚುನಾವಣಾ ಪ್ರಚಾರ ಶುರು ಮಾಡಿದ್ದಾರೆ. ಅವರ ಚುನಾವಣಾ ಪ್ರಚಾರ ವಾಹನ ವರಾಹಿಗೆ ಭಕ್ತಿಯಿಂದ ಪೂಜೆ ಮಾಡಿ ಪ್ರಚಾರ ಆರಂಭಿಸಲಾಗಿದೆ.
ಪವನ್ ಕಲ್ಯಾಣ್ ಅವರು ತಮ್ಮ ಚುನಾವಣಾ ಪ್ರಚಾರ ವಾಹನ ವರಾಹಿಗೆ ಪೂಜೆ ಮಾಡಿ ಚುನಾವಣಾ ಪ್ರಚಾರವನ್ನು ಭರ್ಜರಿಯಾಗಿ ಆರಂಭಿಸಿದ್ದಾರೆ. ಚುನಾವಣಾ ಪ್ರಚಾರಕ್ಕೆಂದೇ ಸಿದ್ಧಪಡಿಸಲಾದ ವಾಹನಕ್ಕೆ ಭಕ್ತಿಯಿಂದ ಪೂಜೆ ಮಾಡಲಾಗಿದೆ.
2/ 11
ಆಂಧ್ರದಲ್ಲಿ ರಾಕ್ಷಸ ಆಳ್ವಿಕೆ ಕೊನೆಗೊಳ್ಳಬೇಕು ಎಂದು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಹೇಳಿದ್ದಾರೆ. ವಿಜಯವಾಡ ಇಂದ್ರಕೀಲಾದ್ರಿಯಲ್ಲಿ ವಾರಾಹಿ ವಾಹನಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಪವನ್ ಕಲ್ಯಾಣ್ ಸರ್ಕಾರವನ್ನು ಕಟುವಾಗಿ ಟೀಕಿಸಿದರು.
3/ 11
ನಟ ಹಾಗೂ ರಾಜಕಾರಣಿ ಪವನ್ ಕಲ್ಯಾಣ್ ಅವರ ವಿಶೇಷ ಚುನಾವಣಾ ಪ್ರಚಾರ ವಾಹನ ಪೂಜೆ ಪಡೆದು ಪ್ರಯಾಣ ಶುರುಮಾಡಿದೆ. ಆಂಧ್ರದಾದ್ಯಂತ ಓಡಾಡಿ ಪ್ರಚಾರ ನಡೆಸಲಿದೆ ಈ ವಾಹನ.
4/ 11
ಎರಡು ತೆಲುಗು ರಾಜ್ಯಗಳು ಒಂದಾಗುವ ಅವಶ್ಯಕತೆ ಇದೆ. ಅಲ್ಲದೆ ಎರಡೂ ರಾಜ್ಯಗಳು ಅಭಿವೃದ್ಧಿಯಲ್ಲಿ ಮುಂದಾಳುತ್ವ ವಹಿಸಬೇಕು ಎಂದು ಪವನ್ ಹೇಳಿದ್ದಾರೆ. ಜಗಿತ್ಯಾಲ ಜಿಲ್ಲೆಯ ಕೊಂಡಗಟ್ಟು ಎಂಬಲ್ಲಿ ಪವನ್ ಕಲ್ಯಾಣ್ ವಾರಾಹಿಗೆ ಪೂಜೆ ಸಲ್ಲಿಸಿದ್ದಾರೆ.
5/ 11
ವಿಜಯವಾಡದ ದುರ್ಗಾ ದೇವಲಯಕ್ಕೆ ಭೇಟಿ ಕೊಟ್ಟ ನಟ ಕನಕ ದುರ್ಗಾ ದೇವರಿಗೆ ಸೀರೆ ಹಾಗೂ ಬಳೆಗಳನ್ನು ಅರ್ಪಿಸಿದರು. ವರಾಹಿಗೂ ಪೂಜೆ ಸಲ್ಲಿಸಲಾಗಿದೆ.
6/ 11
ಕೊಂಡಗಟ್ಟುವಿನಲ್ಲಿ ಪೂಜೆ ಸಲ್ಲಿಸಿದ ನಂತರ ಪವನ್ 31 ನರಸಿಂಹ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ. ಅದರ ಭಾಗವಾಗಿ ವಿಜಯವಾಡದ ಕನಕದುರ್ಗಾ ಅಮ್ಮಾವರಿ ದೇವಸ್ಥಾನಕ್ಕೆ ಬಂದ ಪವನ್ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
7/ 11
ಚುನಾವಣಾ ಪ್ರಚಾರ ವಾಹನ ವರಾಹಿಯಲ್ಲಿಯೇ ಪವನ್ ಕಲ್ಯಾಣ್ ಸಂಪೂಣ್ ಪ್ರಚಾರ ಮಾಡಲಿದ್ದಾರೆ. ಅದರ ಮೇಲೆ ಹತ್ತಿ ನಿಂತು ಮಾತನಾಡುತ್ತಿರುವ ನಟ.
8/ 11
ಹೂವಿನ ಹಾರಗಳನ್ನು ಹಾಕಿ ಸಿಂಗಾರ ಮಾಡಿ ವರಾಹಿಗೆ ಪೂಜೆ ಸಲ್ಲಿಸುತ್ತಿರುವ ದೃಶ್ಯ. ಈ ವಾಹನವನ್ನು ವಿಶೇಷವಾಗಿ ಸಿದ್ಧಪಡಿಸಲಾಗಿದ್ದು ಈ ಹಿಂದೆಯೇ ವರಾಹಿ ಸುದ್ದಿ ಮಾಡಿತ್ತು.
9/ 11
ಚುನಾವಣಾ ಪ್ರಚಾರದ ಸಂದರ್ಭ ಓಪನ್ ವ್ಯಾನ್ನಲ್ಲಿ ಪ್ರಚಾರ ಮಾಡುವುದನ್ನು ಕಾಣಬಹುದು. ಆದರೆ ಈ ವರಾಹಿಯಲ್ಲಿ ಎಲ್ಲ ವ್ಯವಸ್ಥೆಗಳನ್ನೂ ಮಾಡಲಾಗಿದ್ದು ಕಷ್ಟಪಟ್ಟು ಕಾರು ಹತ್ತಿ ಸರ್ಕಸ್ ಮಾಡುವ ಅಗತ್ಯವಿಲ್ಲ.
10/ 11
ಭರ್ಜರಿ ಫ್ಯಾನ್ ಫಾಲೋಯಿಂಗ್ ಇರುವ ಪವನ್ ಕಲ್ಯಾಣ್ ಅವರು ಈ ಬಾರಿ ಗೆಲುವು ಸಾಧಿಸಿ ಸಿಎಂ ಪಟ್ಟಕ್ಕೇರಲಿದ್ದಾರೆ ಎನ್ನುವುದು ಎಲ್ಲರ ನಿರೀಕ್ಷೆ. ಇದರಂತೆಯೇ ನಟ ಕೂಡಾ ಚುನಾವಣಾ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದಾರೆ.
11/ 11
ನಟ ಪ್ರಚಾರದ ಸಂದರ್ಭ ಕೈಯಲ್ಲಿ ಗದೆ ಹಿಡಿದು ನಿಂತಿರುವ ಫೋಟೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಅಂತೂ ಪವನ್ ಕಲ್ಯಾಣ್ ಅವರ ಚುನಾವಣಾ ಪ್ರಚಾರ ಅಭಿಯಾನ ಅದ್ಧೂರಿಯಾಗಿಯೇ ಶುರುವಾಗಿದೆ.