ಕಳೆದ ವರ್ಷ ಭೀಮ್ಲಾ ನಾಯಕ್ ಸಿನಿಮಾದ ಮೂಲಕ ಪ್ರೇಕ್ಷಕರ ರಂಜಿಸಿದ್ದ ಪವನ್ ಕಲ್ಯಾಣ್ ಸದ್ಯ ಕ್ರಿಶ್ ನಿರ್ದೇಶನದ ‘ಹರಿ ಹರ ವೀರಮಲ್ಲು’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಎರಡು ಭಾಗಗಳಲ್ಲಿ ಸೆಟ್ಟೇರಲಿದೆ. ಇನ್ನೊಂದೆಡೆ ಸುಜಿತ್ ನಿರ್ದೇಶನದ ‘ಒಜಿ’ (ಒರಿಜಿನಲ್ ಗ್ಯಾಂಗ್ ಸ್ಟರ್) ಚಿತ್ರಕ್ಕೆ ಓಕೆ ಅಂದಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾ ಪೂಜಾ ಕಾರ್ಯಕ್ರಮಗಳೊಂದಿಗೆ ಶುರುವಾಗಿದೆ.