Pawan Kalyan Varahi: ಟಾಲಿವುಡ್ನ ಪ್ರಸಿದ್ಧ ನಟ ಹಾಗೂ ಜನಸೇನಾ ಪಕ್ಷದ ಅಧ್ಯಕ್ಷ ಪವರ್ಸ್ಟಾರ್ ಪವನ್ ಕಲ್ಯಾಣ್ ಅವರು ತಮ್ಮ ಚುನಾವಣಾ ಪ್ರಚಾರ ರಥವನ್ನು ಪರಿಚಯಿಸಿದ್ದಾರೆ. ಹೇಗಿದೆ ನೋಡಿ ಈ ಅದ್ಧೂರಿ ವಾಹನ.
ನಟ ಪವನ್ ಕಲ್ಯಾಣ್ ಈ ವಾಹನದ ಫೋಟೋಗಳು ಮತ್ತು ವೀಡಿಯೊಗಳನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಚುನಾವಣಾ ಪ್ರಚಾರಕ್ಕೆ ವಾರಾಹಿ ಸಜ್ಜಾಗಿದೆ ಎಂದಿದ್ದಾರೆ. ಮುಂಬರುವ ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಶಕ್ತಿ ಪ್ರದರ್ಶನ ಮಾಡಲು ನಿರ್ಧರಿಸಿರುವ ಪವನ್ ಕಲ್ಯಾಣ್ ಅದಕ್ಕೆ ತಕ್ಕಂತೆ ತಯಾರಿ ನಡೆಸಿದ್ದಾರೆ.
2/ 9
ಪವನ್ ಕಲ್ಯಾಣ್ ಆದಷ್ಟು ಬೇಗ ಉಳಿದ ಚಿತ್ರಗಳನ್ನು ಮುಗಿಸಿ ಚುನಾವಣಾ ಪ್ರಚಾರಕ್ಕೆ ಇಳಿಯುವ ನಿರೀಕ್ಷೆಯಿದೆ. ಈ ಕ್ರಮದಲ್ಲಿ ಮುಂದಿನ ಚುನಾವಣೆಯ ಪ್ರಚಾರಕ್ಕೆ ಅವರ ಪ್ರಚಾರ ವಾಹನವೂ ಸಿದ್ಧಗೊಂಡಿದೆ. ಇದಕ್ಕೆ ವಾರಾಹಿ ಎಂದೂ ಹೆಸರಿಡಲಾಗಿದೆ.
3/ 9
ಅವರು ಈ ವಾಹನದ ಫೋಟೋಗಳು ಮತ್ತು ವೀಡಿಯೊಗಳನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಚುನಾವಣಾ ಪ್ರಚಾರಕ್ಕೆ ಸಿದ್ಧ ಎಂದು ಹೇಳಿದ್ದು ವಾಹನ ನಿಜಕ್ಕೂ ಅದ್ಭುತವಾಗಿದೆ ಎಂದಿದ್ದಾರೆ ನೆಟ್ಟಿಗರು.
4/ 9
ಸದ್ಯ ಹಲವು ಸಿನಿಮಾಗಳ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಪವನ್ ಕಲ್ಯಾಣ್ ಅವಕಾಶ ಸಿಕ್ಕಾಗಲೆಲ್ಲ ಎಪಿ ಪ್ರವಾಸ ಮಾಡುತ್ತಿದ್ದಾರೆ.
5/ 9
ಮುಂದಿನ ಚುನಾವಣೆಯಲ್ಲಿ ವೈಸಿಪಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಆಗಾಗ ಎಚ್ಚರಿಸುತ್ತಾರೆ. ಕೆಲ ವರ್ಷಗಳ ಹಿಂದೆ ಎಪಿಯಲ್ಲಿ ಟಿಡಿಪಿ ಜತೆಗೂಡಿ ಚುನಾವಣೆಗೆ ಹೋಗಲು ಯೋಚಿಸಿದ್ದ ಪವನ್ ಕಲ್ಯಾಣ್ ಇತ್ತೀಚೆಗಷ್ಟೇ ಪ್ರಧಾನಿ ಮೋದಿಯವರನ್ನು ಭೇಟಿಯಾದ ಬಳಿಕ ತಂತ್ರ ಬದಲಿಸಿದಂತಿದೆ ಎಂದು ಚರ್ಚೆಯಾಗುತ್ತಿದೆ.
6/ 9
ಎಪಿಯ ರೂಪುರೇಷೆಗಳನ್ನು ಬದಲಾಯಿಸಿ ಆಡಳಿತವನ್ನು ಮುನ್ನಡೆಸುತ್ತೇನೆ ಎಂದು ಅವರು ತಮ್ಮ ಭಾಷಣಗಳಲ್ಲಿ ಹೇಳುತ್ತಿದ್ದಾರೆ.
7/ 9
ಪವನ್ ಕಲ್ಯಾಣ್ ನೇತೃತ್ವದ ಜನಸೇನೆ ಬಿಜೆಪಿಯೊಂದಿಗೆ ಮಾತ್ರ ಚುನಾವಣಾ ಕಣಕ್ಕೆ ಇಳಿಯಬಹುದು ಎಂಬ ಊಹಾಪೋಹಗಳಿಗೆ ಕಾರಣವಾಗಿದೆ.
8/ 9
ಮತ್ತೊಂದೆಡೆ, ಚುನಾವಣೆಗೆ ಕೆಲವು ತಿಂಗಳಿರುವಾಗ ರಾಜ್ಯಾದ್ಯಂತ ಬಸ್ ಯಾತ್ರೆ ಕೈಗೊಳ್ಳಲು ಮುಂದಾಗಿರುವ ಪವನ್ ಕಲ್ಯಾಣ್, ಈ ಉದ್ದೇಶಕ್ಕಾಗಿಯೇ ಈ ಹೊಸ ವಾಹನ ಸಿದ್ಧಪಡಿಸಿದ್ದಾರೆ.
9/ 9
ವಿಶೇಷವಾಗಿ ನಿರ್ಮಿಸಲಾಗಿರುವ ಈ ವಾಹನದಲ್ಲಿ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದ್ದು ಪವನ್ ಕಲ್ಯಾಣ್ ಈ ರಥ ಯಾವಾಗಿನಿಂದ ಪ್ರಚಾರ ಶುರು ಮಾಡುತ್ತೆ ಎನ್ನುವುದನ್ನು ಕಾದು ನೋಡಬೇಕು.