Pavitra Remuneration: ಕಳೆದ ಕೆಲವು ದಿನಗಳಿಂದ ಮಾಧ್ಯಮಗಳಲ್ಲಿ ಹೆಚ್ಚಾಗಿ ಕೇಳಿಬರುತ್ತಿರುವ ಹೆಸರು ಪವಿತ್ರಾ ಲೋಕೇಶ್. ನರೇಶ್ ಅವರ ನಾಲ್ಕನೇ ಮದುವೆಯ ಸುದ್ದಿ ಎಲ್ಲೆಡೆ ಹಾಟ್ ಟಾಪಿಕ್ ಆಗಿತ್ತು. ಇಲ್ಲಿಯವರೆಗೆ ಪ್ರೇಕ್ಷಕರು ಅವರನ್ನು ಹಿರಿಯ ನಟಿ ಎಂದು ಮಾತ್ರ ತಿಳಿದಿದ್ದರು, ಆದರೆ ನರೇಶ್ ವಿಚಾರವಾಗಿ ಇಂಡಸ್ಟ್ರಿಯ ಚರ್ಚೆಯ ವಿಷಯವಾಗಿದೆ. ಇದುವರೆಗೆ ಸಾಕಷ್ಟು ಕನ್ನಡ ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಪವಿತ್ರಾ ಲೋಕೇಶ್ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಜನಪ್ರಿಯ ನಟಿ ಪವಿತ್ರಾ ಲೋಕೇಶ್ ಅವರ ಬಗ್ಗೆ ಈಗ ಪರಿಚಯ ಮಾಡುವ ಅಗತ್ಯವಿಲ್ಲ. ನರೇಶ್ ಮತ್ತು ಪವಿತ್ರಾ ಲೋಕೇಶ್ ಅಫೇರ್ ಸ್ಯಾಂಡಲ್ವುಡ್ ಮತ್ತು ಟಾಲಿವುಡ್ನಲ್ಲಿ ಸಂಚಲನ ಮೂಡಿಸಿ ಜನಪ್ರಿಯತೆಯನ್ನೂಗಳಿಸಿದೆ.
2/ 8
ಪವಿತ್ರಾ ಲೋಕೇಶ್ ಕನ್ನಡದ ನಟಿಯಾದರೂ ತೆಲುಗಿನಲ್ಲಿ ವಿಶೇಷ ಹೆಸರು ಮಾಡಿದ್ದಾರೆ. ಖ್ಯಾತ ನಾಯಕರ ಚಿತ್ರಗಳಲ್ಲಿ ತಾಯಿಯಾಗಿ ನಟಿಸಿ ಖ್ಯಾತಿ ಗಳಿಸಿದ್ದರು. ತೆಲುಗಿನಲ್ಲೂ ಆಕೆಗೆ ಬೇಡಿಕೆ ಹೆಚ್ಚಿದೆ. ಇತ್ತೀಚೆಗಷ್ಟೇ ಶರತ್ ಮಾಂಡವ ನಿರ್ದೇಶನದ ರಾಮರಾವ್ ಆನ್ ಡ್ಯೂಟಿ ಚಿತ್ರದಲ್ಲಿ ರವಿತೇಜ ನಾಯಕನಾಗಿ ನಟಿಸಿದ್ದರು. ಅದರಲ್ಲಿ ಪವಿತ್ರಾ ಸಹ ನಟಿಸಿದ್ದಾರೆ.
3/ 8
ಸದ್ಯದ ಮಾಹಿತಿ ಪ್ರಕಾರ ಪವಿತ್ರಾ ಸಂಭಾವನೆಯನ್ನೂ ಭಾರೀ ಪ್ರಮಾಣದಲ್ಲಿ ಹೆಚ್ಚಿಸಿಕೊಂಡಿದ್ದಾರೆ. ಕಳೆದ ಕೆಲವು ದಿನಗಳ ವರೆಗೆ ದಿನಕ್ಕೆ ಕೇವಲ 60 ಸಾವಿರ ರೂಪಾಯಿ ಸಂಭಾವನೆ ತೆಗೆದುಕೊಳ್ಳುತ್ತಿದ್ದರು. ಆದರೆ ಈಗ ಲಭ್ಯವಿರುವ ಮಾಹಿತಿ ಪ್ರಕಾರ ಆಕೆ ಒಂದು ಲಕ್ಷಕ್ಕೆ ಸಂಭಾವನೆ ಏರಿಸಿಕೊಂಡಿದ್ದಾರೆ.
4/ 8
ಒಂದು ಚಿತ್ರಕ್ಕೆ ದಿನಕ್ಕೆ ಒಂದು ಲಕ್ಷ ರೂಪಾಯಿ ಸಂಭಾವನೆ ನೀಡಬೇಕೆಂದು ಅವರು ಬೇಡಿಕೆಯಿಡುತ್ತಿದ್ದಾರೆ ಎಂದು ಉದ್ಯಮ ವಲಯದಲ್ಲಿ ವರದಿಯಾಗಿದೆ. ಅದಕ್ಕಿಂತ ಮುಖ್ಯವಾಗಿ ಪವಿತ್ರಾ ಲೋಕೇಶ್ ಅವರ ಆಫರ್ ಗಳನ್ನು ಹೆಚ್ಚಿಸಿಕೊಳ್ಳಲು ನರೇಶ್ ಕೂಡ ಸಹಾಯ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.
5/ 8
ನರೇಶ್ ಮತ್ತು ಪವಿತ್ರಾ ಲೋಕೇಶ್ ಅಫೇರ್ ಬಗ್ಗೆ ಟಾಲಿವುಡ್ನ ಹಲವರು ವಿಭಿನ್ನ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಪವಿತ್ರಾ ಇದುವರೆಗೆ ಸಿನಿಮಾಗಳಲ್ಲಿ ಹಲವು ಒಳ್ಳೆಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಅಂಥ ಒಳ್ಳೆಯ ಪಾತ್ರಗಳು ಸಿಗುವ ಚಾನ್ಸ್ ಕಡಿಮೆಯಾಗಿದೆಯಂತೆ.
6/ 8
ಸದ್ಯ ಪವಿತ್ರಾ ಲೋಕೇಶ್ ಅವರ ಪ್ರಕರಣದಿಂದಾಗಿ, ಅವರು ತಾಯಿಯ ಪಾತ್ರವನ್ನು ಮಾಡುವುದು ಸರಿಯಲ್ಲ ಎಂದು ನಿರ್ಮಾಪಕರು ಭಾವಿಸಿದ್ದಾರೆಂದು ಹೇಳಲಾಗಿತ್ತು. ಹಾಗಾಗಿ ಅವರಿಗೆ ಅವಕಾಶಗಳು ಕಡಿಮೆಯಾಗುತ್ತದೆ ಎಂದು ಹೇಳಲಾಗಿತ್ತು.
7/ 8
ಆದರೆ ಈ ವಿವಾದಗಳ ಬೆನ್ನಲ್ಲೆ ನಟಿ ತನ್ನ ಸಂಭಾವನೆ ಹೆಚ್ಚಿಸಿಕೊಂಡಿದ್ದು, ಕುತೂಹಲವನ್ನು ಹುಟ್ಟುಹಾಕಿದೆ. ಇನ್ನು ಟಾಲಿವುಡ್ನಲ್ಲಿ ಕೆಲವರು ಅವರ ವೈಯಕ್ತಿಕ ಬದುಕು ಏನೇ ಇರಲಿ, ಅವರು ಒಳ್ಳೆಯ ನಟಿ ಎಂದಿದ್ದಾರೆ.
8/ 8
ನರೇಶ್ ಹಾಗೂ ಪವಿತ್ರಾ ಲೋಕೇಶ್ ವಿಚಾರ ಹೊರ ಬಂದಾಗ ಈ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಂಡಿತ್ತು. ನರೇಶ್ ಮೂರನೇ ಪತ್ನಿ ರಮ್ಯಾ, ಈ ಇಬ್ಬರ ಮೇಲೆ ಆರೊಪಗಳ ಸುರಿಮಳೆ ಸುರಿಸಿದ್ದರು.