Pavitra Lokesh-Naresh: ಪವಿತ್ರಾ ಲೋಕೇಶ್, ನರೇಶ್ ಲಿಪ್ ಲಾಕ್ ವಿಡಿಯೋ ಅಸಲಿನಾ? ನಕಲಿನಾ?; ಮದುವೆ ಕಥೆಗೆ ಸಖತ್ ಟ್ವಿಸ್ಟ್!
ಕನ್ನಡ ನಟಿ ಪವಿತ್ರಾ ಲೋಕೇಶ್ ಹಾಗೂ ತೆಲುಗು ನಟ ನರೇಶ್ ಬಾಬು ಪ್ರೀತಿ, ಮದುವೆ ವಿಷಯಕ್ಕೆ ಭಾರೀ ಸುದ್ದಿಯಲ್ಲಿದ್ದಾರೆ. ಇವರು ಮದುವೆ ಬಗ್ಗೆ ಘೋಷಿಸಿದ ವಿಡಿಯೋ ಅಸಲಿನಾ? ನಕಲಿನಾ ಎನ್ನುವ ಪ್ರಶ್ನೆ ಇದೀಗ ಹುಟ್ಟಿಕೊಂಡಿದೆ.
ಪವಿತ್ರಾ ಲೋಕೇಶ್ ಹಾಗೂ ನರೇಶ್ ಬಾಬು ಹೊಸ ವರ್ಷವನ್ನು ಸಖತ್ ಆಗಿಯೇ ಸೆಲೆಬ್ರೇಟ್ ಮಾಡಿದ್ರು. ಬಳಿಕ ಹೊಸ ವರ್ಷಕ್ಕೆ ಬ್ರೇಕಿಂಗ್ ನ್ಯೂಸ್ ಎನ್ನುವಂತೆ ವಿಡಿಯೋವೊಂದನ್ನು ಹರಿಬಿಟ್ಟಿದ್ರು. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
2/ 7
ಮಧ್ಯವಯಸ್ಕರಾದ ಈ ಜೋಡಿ ಲಿಪ್ ಲಾಕ್ ಮಾಡಿ ಹೊಸ ವರ್ಷವನ್ನು ಬರಮಾಡಿಕೊಂಡಿದ್ದರು. ಅಲ್ಲದೇ, ಅತೀ ಶೀಘ್ರದಲ್ಲೇ ಮದುವೆಯನ್ನೂ ಘೋಷಿಸುವುದಾಗಿ ತಿಳಿಸಿದ್ದರು.
3/ 7
ಪವಿತ್ರಾ, ನರೇಶ್ ರೊಮ್ಯಾಂಟಿಕ್ ವಿಡಿಯೋ ನೋಡಿದ ನೆಟ್ಟಿಗರು ಬಗೆ ಬಗೆ ಕಮೆಂಟ್ ಮಾಡಿದ್ರು. ಇದೀಗ ಈ ವಿಡಿಯೋ ಪವಿತ್ರಾ, ನರೇಶ್ ಅವರ ಮದುವೆಗೆ ಸಂಬಂಧಿಸಿದ್ದೇನಾ ಎನ್ನುವ ಪ್ರಶ್ನೆ ಮೂಡಿದೆ.
4/ 7
ನರೇಶ್ ಬಾಬು ಅವರ ಪತ್ನಿ ರಮ್ಯಾ ಅವರಿಂದ ಡಿವೋರ್ಸ್ ಪಡೆದಿಲ್ಲ. ಡಿವೋರ್ಸ್ ಪಡೆಯದೇ ಮದುವೆಗೆ ರೆಡಿಯಾಗಿದ್ದಾರಾ ಎನ್ನುವ ಚರ್ಚೆ ಶುರುವಾಗಿದೆ.
5/ 7
ಹಿಂದೆ ಪವಿತ್ರಾ ಲೋಕೇಶ್, ನರೇಶ್ ಇದ್ದ ರೂಮಿಗೆ ನುಗ್ಗಿ ರಂಪಾಟ ಮಾಡಿದ್ದ ನರೇಶ್ ಹೆಂಡತಿ ರಮ್ಯಾ ಈಗ ಸುಮ್ಮನಿರ್ತಾರಾ? ಡಿವೋರ್ಸ್ ಪಡೆಯದೇ ಮದುವೆ ಮಾಡಿಕೊಳ್ಳಲು ರಮ್ಯಾ ಬಿಡ್ತಾರಾ ಎಂಬ ಮಾತುಗಳು ಕೇಳಿ ಬರ್ತಿದೆ.
6/ 7
ಪವಿತ್ರಾ ಲೋಕೇಶ್ ಹಾಗೂ ನರೇಶ್ ಸಿನಿಮಾವೊಂದರ ಪ್ರಚಾರಕ್ಕಾಗಿ ಈ ರೀತಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
7/ 7
ಸದ್ಯ ನರೇಶ್ ಬಾಬು ಮತ್ತು ಪವಿತ್ರಾ ಲೋಕೇಶ್ ಜೊತೆಯಾಗಿ ‘ಮಲ್ಲಿ ಪೆಳ್ಳಿ’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮಲ್ಲಿ ಪಳ್ಳಿ ಎಂದರೆ ಮದುವೆ ಎಂದು ಅರ್ಥ. ಈ ಸಿನಿಮಾದ ಪ್ರಚಾರಕ್ಕಾಗಿ ಇಂಥದ್ದೊಂದು ವಿಡಿಯೋ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ ಎಂಬ ಸುದ್ದಿ ತೆಲುಗಿ ಮಾಧ್ಯಮದಲ್ಲಿ ಹರಿದಾಡುತ್ತಿದೆ.