HBD Ishan: ರೇಮೊ ಸಿನಿಮಾದ ಪೋಸ್ಟರ್ ಜೊತೆಗೆ ನಾಯಕ ಇಶಾನ್ ಪಾತ್ರದ ಪರಿಚಯ ಮಾಡಿಕೊಟ್ಟ ನಿರ್ದೇಶಕ..!
Raymo-Pavan Wadeyar: ಗೌರಿ -ಗಣೇಶ ಹಬ್ಬ ಹಾಗೂ ರೇಮೊ ಸಿನಿಮಾದ ನಾಯಕ ಇಶಾನ್ ಅವರ ಹುಟ್ಟುಹಬ್ಬದ ಅಂಗವಾಗಿ ಪವನ್ ಒಡೆಯರ್ ಹೊಸ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಜೊತೆಗೆ ಚಿತ್ರದಲ್ಲಿ ನಾಯಕನ ಪಾತ್ರವನ್ನೂ ಪರಿಚಯಿಸಿದ್ದಾರೆ. (ಚಿತ್ರಗಳು ಕೃಪೆ: ಪವನ್ ಒಡೆಯರ್ ಹಾಗೂ ಇಶಾನ್ ಅವರ ಇನ್ಸ್ಟಾಗ್ರಾಂ ಖಾತೆ)
ರೋಗ್ ಖ್ಯಾತಿಯ ನಟ ಇಶಾನ್ ಅವರ ಹುಟ್ಟುಹಬ್ಬ ಹಾಗೂ ಗೌರಿ -ಗಣೇಶನ ಹಬ್ಬದ ಅಂಗವಾಗಿ ರೇಮೊ ಚಿತ್ರತಂಡ ಬರ್ಜರಿ ಉಡುಗೊರೆ ಕೊಟ್ಟಿದೆ.
2/ 13
ಇಶಾನ್ ಅವರ ಹುಟ್ಟುಹಬ್ಬ ನಾಳೆ ಇದೆ. ಆದರೆ ಇಂದು ಗೌರಿ ಹಬ್ಬ ಇರುವ ಕಾರಣದಿಂದ ರೇಮೊ ಚಿತ್ರತಂಡದ ಕಡೆಯಿಂದ ಇವತ್ತೇ ಹೊಸ ಪೋಸ್ಟರ್ ರಿಲೀಸ್ ಮಾಡಲಾಗಿದೆ.
3/ 13
ಈ ಪೋಸ್ಟರ್ ಜತೆಗೆ ಸಿನಿಮಾದಲ್ಲಿ ನಾಯಕ ಇಶಾನ್ ಅವರ ಪಾತ್ರ ಹೇಗಿರಲಿದೆ ಎಂದೂ ನಿರ್ದೇಶಕ ಪವನ್ ಒಡೆಯರ್ ರಿವೀಲ್ ಮಾಡಿದ್ದಾರೆ.
4/ 13
ಈ ಸಿನಿಮಾದ ನಾಯಕ ಸಿಕ್ಕಾಪಟ್ಟೆ ಸ್ಟೈಲಿಶ್ ಅಂತೆ. ಆದರೆ ಬಾಯಿಬಿಟ್ರೆ ಸಂಸ್ಕೃತಾನೇ ಮಾತನಾಡೋದು ಅಂತಾರೆ ನಿರ್ದೇಶಕ ಪವನ್ ಒಡೆಯರ್.
5/ 13
ಅಷ್ಟೇಅಲ್ಲ, ಲವ್ ಯಾವುದು, ಲಸ್ಟ್ ಯಾವುದು ಅಂತ ಕನ್ಪ್ಯೂಸ್ ಆಗುವಷ್ಟು ಗರ್ಲ್ಫ್ರೆಂಡ್ಸ್ ಇವನಿಗೆ. ಇಂಥ ಮಿಷನ್ ಇಂಪಾಸಿಬಲ್ ಆಗಿರೋ ಇವನ ಲವ್ ಸ್ಟೋರಿ ನಿಮಗೆ ತುಂಬ ಮಜಾ ಕೊಡುತ್ತೆ ಅಂತ ರೇಮೊ ಸಿನಿಮಾದ ನಾಯಕನ ಪಾತ್ರದ ಪರಿಚಯ ಮಾಡಿಕೊಟ್ಟಿದ್ದಾರೆ ನಿರ್ದೇಶಕ.
6/ 13
ಪವನ್ ಒಡೆಯರ್ ನಾಯಕನ ಬಗ್ಗೆ ಹೇಳಿರುವ ವಿಷಯಗಳಿಂದ ರೇಮೊ ಸಿನಿಮಾದ ಬಗ್ಗೆ ಇರುವ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.