ಶಾರುಖ್ ಖಾನ್ ಅವರು ಝಿರೋ ಸಿನಿಮಾ ಫ್ಲಾಪ್ ಆದ ನಂತರ 5 ವರ್ಷಗಳ ಬಳಿಕ ಬಾಕ್ಸ್ ಆಫೀಸ್ನಲ್ಲಿ ಮಿಂಚುತ್ತಿದ್ದಾರೆ. ಪಠಾಣ್ ಸಿನಿಮಾ ಮೂಲಕ ಭರ್ಜರಿ ಹಿಟ್ ಕೊಟ್ಟಿದ್ದಾರೆ. 2023ರ ಮೊದಲ ಹಿಟ್ ಆಗಿ ಈ ಸಿನಿಮಾ ಸುದ್ದಿಯಾಗಿದೆ. ಸಿನಿಮಾ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದ್ದು ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೇ ಕಾರಣದಿಂದಾಗಿ ಪಠಾಣ್ ಸಿನಿಮಾದ ಸೀಕ್ವೆಲ್ ಬಗ್ಗೆ ಕುತೂಹಲ ಹೆಚ್ಚಾಗಿದೆ.
ಇದಕ್ಕೆ ಉತ್ತರಿಸಿದ ಕಿಂಗ್ ಖಾನ್, ಪಠಾಣ್ ಸಿನಿಮಾದಲ್ಲಿ ನಟಿಸಿದ್ದು ದೊಡ್ಡ ಅನುಭವ. ನಾನು ಇವತ್ತು ತುಂಬಾ ಸೀರಿಯಸ್ ಆಗಿದ್ದೇನೆ. ಸಿನಿಮಾದ ಪ್ರೀತಿ ಹಾಗೂ ಗೆಲುವು ನನ್ನ ಕುಟುಂಬಕ್ಕೆ ಹಾಗೂ ಸ್ನೇಹಿತರಿಗೆ ಖುಷಿ ತಂದಿದೆ. ನನಗೆ ಸಿಕ್ಕಿದ ಅವಕಾಶದ ಬಗ್ಗೆ ತುಂಬಾ ಖುಷಿ ಇದೆ. ಒಂದು ವೇಳೆ ಸಿದ್ಧಾರ್ಥ್ ಪಠಾಣ್ 2 ಮಾಡಲು ಬಯಸಿದರೆ ನಾನು ಅದರಲ್ಲಿರುತ್ತೇನೆ ಎಂದಿದ್ದಾರೆ.