ಅಕ್ಕ ಪ್ರಿಯಾಂಕಾ ಚೋಪ್ರಾ ಹಾದಿಯಲ್ಲಿ ಕವರ್ ಗರ್ಲ್ Parineeti Chopra
ಪರಿಣೀತಿ ಚೋಪ್ರಾ ಅಕ್ಕ ಪ್ರಿಯಾಂಕಾ ಚೋಪ್ರಾ ಅವರ ಹಾದಿಯಲ್ಲೇ ನಡೆಯುತ್ತಿರುವಂತೆ ಇದೆ. ಹೌದು, ಬಾಲಿವುಡ್ ಹಾಗೂ ಖ್ಯಾತ ನಿಯತಕಾಲಿಕೆಗಳಿಗೆ ಸೀಮಿತವಾಗಿದ್ದ ಪರಿಣೀತಿ ಚೋಪ್ರಾ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಮ್ರಯತ್ನದಲ್ಲಿ ಇರುವಂತೆ ಕಾಣುತ್ತಿದೆ. (ಚಿತ್ರಗಳು ಕೃಪೆ: ಇನ್ಸ್ಟಾಗ್ರಾಂ ಖಾತೆ)
ನಟಿ ಪರಿಣೀತಿ ಚೋಪ್ರಾ ಇತ್ತೀಚೆಗಷ್ಟೆ ನೇಪಾಳದಲ್ಲಿ ತಮ್ಮ ಬಹುನಿರೀಕ್ಷಿತ ಸಿನಿಮಾದ ಶೂಟಿಂಗ್ ಮುಗಿಸಿ ಮುಂಬೈಗೆ ಮರಳಿದ್ದರು. ಅದಾಗಲೇ ಅವರು ತಮ್ಮ ಮತ್ತೊಂದು ಪ್ರಾಜೆಕ್ಟ್ ಕುರಿತಾದ ವಿಷಯವನ್ನು ಹಂಚಿಕೊಂಡಿದ್ದಾರೆ.
2/ 7
ಬಾಲಿವುಡ್ನಿಂದ ಇಂಟರ್ ನ್ಯಾಷನಲ್ ಮಟ್ಟದಲ್ಲಿ ಗುರುತಿಸಿಕೊಳ್ಳುವ ಪ್ರಯತ್ನದಲ್ಲಿರುವ ನಟಿ ಪರಿಣೀತಿ ಚೋಪ್ರಾ ಅವರಿಗೆ ಈಗ ಸಖತ್ತಾಗಿರುವ ಅವಕಾಶ ಸಿಕ್ಕಿದೆ.
3/ 7
ವಿಶ್ವದ ದೊಡ್ಡ ನಿಯತಕಾಲಿಕೆಗಳಲ್ಲಿ ಒಂದಾಗಿರುವ Asiana Internationalಗೆ ಕವರ್ ಗರ್ಲ್ ಆಗಿ ಪೋಸ್ ಕೊಟ್ಟಿದ್ದಾರೆ ಪರಿಣೀತಿ ಚೋಪ್ರಾ. ಕ್ಲಾಸಿ ಲುಕ್ನಲ್ಲಿ ಕಾಣಿಸಿಕೊಂಡಿರುವ ನಟಿಯ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
4/ 7
Asiana International ನಿಯತಕಾಲಿಕೆ ವೆಡ್ಡಿಂಗ್ ಮ್ಯಾಗಜಿನ್ ಆಗಿದ್ದು, ಇದರ ಕವಲ್ ಪುಟದ ಫೋಟೋಶೂಟ್ನಲ್ಲಿ ನಟಿ ಪರಿಣೀತಿ ಚೋಪ್ರಾ ಕಾಣಿಸಿಕೊಂಡಿದ್ದಾರೆ.
5/ 7
ಮದುಮಗಳ ಲುಕ್ನಲ್ಲಿ ಪರಿಣೀತಿ ಚೋಪ್ರಾ ಪೋಸ್ ಕೊಟ್ಟಿದ್ದು, ಅವರ ಲುಕ್ ಸಖತ್ ಕ್ಲಾಸಿಯಾಗಿದೆ. ಅದರಲ್ಲೂ ಕೆಂಪು ಬಣ್ಣದ ಈ ಲೆಹೆಂಗಾದಲ್ಲಿ ತುಂಬಾ ಕ್ಯೂಟ್ ಆಗಿ ಮಿಂಚಿದ್ದಾರೆ.
6/ 7
Asiana International ನಿಯಕಾಲಿಕೆಯಲ್ಲಿ ಪರಿಣೀತಿ ಚೋಪ್ರಾ ಪೋಸ್ ಕೊಟ್ಟಿರುವ ಸಂಚಿಕೆ ಈಗಾಗಲೇ 16 ದೇಶಗಳಲ್ಲಿ ಬಿಡುಗಡೆಯಾಗಿದೆ. ಅಲ್ಲದೆ ಇದರ ಶೂಟಿಂಗ್ ನಡೆದಿರುವುದು ಲಂಡನ್ನಲ್ಲಿ. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲು ಮುಂದಾಗಿದ್ದಾರೆ.
7/ 7
ಲಂಡನ್ನಲ್ಲಿ ಚಿತ್ರೀಕರಣ ಮಾಡುವುದು ಸದಾ ಒಂದು ರೀತಿಯ ಫನ್ ಎಂದಿದ್ದಾರೆ ಪರಿಣೀತಿ ಚೋಪ್ರಾ. ಲಾಕ್ಡೌನ್ನಲ್ಲಿ ಪರಿಣೀತಿ ಅಭಿನಯದ ಸೈನಾ ಹಾಗೂ ದ ಗರ್ಲ್ ಆನ್ ದ ಟ್ರೇನ್ ಹಾಗೂ ಸಂದೀಪ್ ಔರ್ ಪಿಂಕಿ ಫರಾರ್ ಸಿನಿಮಾಗಳು ಒಟಿಟಿ ಮೂಲಕ ರಿಲೀಸ್ ಆಗಿದ್ದವು.