ಇವರಿಬ್ಬರ ನಡುವೆ ಪ್ರೀತಿ ಹುಟ್ಟಿದ್ದು ‘ಚಮ್ಕಿಲಾ’ ಶೂಟಿಂಗ್ ಸೆಟ್ ನಲ್ಲಂತೆ: ಪರಿಣಿತಿ ಮತ್ತು ರಾಘವ್ ಅವರ ಪ್ರೇಮಕಥೆ ಕಳೆದ ವರ್ಷ ಚಮ್ಕಿಲಾ ಶೂಟಿಂಗ್ ಸೆಟ್ ಗಳಲ್ಲಿ ಪ್ರಾರಂಭವಾಯಿತು. ಪರಿಣಿತಿ ಪಂಜಾಬ್ ನಲ್ಲಿ ಚಿತ್ರೀಕರಣದಲ್ಲಿದ್ದರು ಮತ್ತು ರಾಘವ್ ಅವರನ್ನು ಭೇಟಿಯಾಗಲು ಹೋಗಿದ್ದರು. ನಂತರ, ಅವರಿಬ್ಬರು ಡೇಟಿಂಗ್ ಮಾಡಲು ಪ್ರಾರಂಭಿಸಿದರು ಮತ್ತು ಪರಸ್ಪರ ಪ್ರೀತಿಸಲು ಶುರು ಮಾಡಿದರು. ಪರಿಣಿತಿ ಮತ್ತು ರಾಘವ್ ಅವರು ಮೇ 13 ರಂದು ಅಧಿಕೃತವಾಗಿ ನಿಶ್ಚಿತಾರ್ಥ ಮಾಡಿಕೊಳ್ಳುವವರೆಗೂ ತಮ್ಮ ಸಂಬಂಧವನ್ನು ಅಧಿಕೃತವಾಗಿ ದೃಢಪಡಿಸಿರಲಿಲ್ಲ.
ಇವರು ಸಹ ವಿಕ್ಕಿ ಕೌಶಲ್-ಕತ್ರಿನಾ ಅವರ ಹಾಗೆ ರಾಜಸ್ಥಾನದಲ್ಲಿ ಮದುವೆಯಾಗಲಿದ್ದಾರಂತೆ!ವಿಕ್ಕಿ ಕೌಶಲ್-ಕತ್ರಿನಾ ಕೈಫ್ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ-ಕಿಯಾರಾ ಅಡ್ವಾಣಿ ಅವರಿಂದ ಸ್ಫೂರ್ತಿ ಪಡೆದ ಈ ಜೋಡಿ ರಾಜಸ್ಥಾನದ ಭವ್ಯವಾದ ಹವೇಲಿಯಲ್ಲಿ ಮದುವೆಯಾಗಲಿದ್ದಾರೆ ಎಂದು ಬಾಲಿವುಡ್ ಲೈಫ್ ವರದಿ ಮಾಡಿದೆ. "ಪರಿ ಮತ್ತು ರಾಘವ್ ಅವರ ವಿವಾಹವು ದೆಹಲಿ ಅಥವಾ ರಾಜಸ್ಥಾನದಲ್ಲಿ ಅದ್ದೂರಿಯಾಗಿ ನಡೆಯಲಿದೆ ಎಂದು ಮೂಲಗಳು ಹೇಳುತ್ತಿವೆ.