Param Sundari Kriti Sanon: ಪರಮ್ ಸುಂದರಿ ಕೃತಿ ಸನೋನ್ಗೆ ಸಾರ್ವಜನಿಕವಾಗಿ ಬೈದಿದ್ದ ಕೊರಿಯೋಗ್ರಾಫರ್..!
ಸದ್ಯ ಬಾಲಿವುಡ್ನಲ್ಲಿ ಪರಮ್ ಸುಂದರಿ ಎಂದೇ ಖ್ಯಾತರಾಗಿರುವ ನಟಿ ಕೃತಿ ಸನೋನ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹೌದು, ಕೃತಿ ಅವರು ಸ್ಟಾರ್ ನಟರ ಜೊತೆ ದೊಡ್ಡ ಬ್ಯಾನರ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇಂತಹ ನಟಿಗೆ ಕೊರಿಯೋಗ್ರಾಫರ್ ಒಬ್ಬರು ಸಾರ್ವಜನಿಕವಾಗಿ ಬೈದಿದ್ದಾರಂತೆ. (ಚಿತ್ರಗಳು ಕೃಪೆ: ಕೃತಿ ಸನೋನ್ ಇನ್ಸ್ಟಾಗ್ರಾಂ ಖಾತೆ)
ಒಂದು ಕಡೆ ಅಭಿನಯಿಸಿರುವ ಮೀಮೀ ಸಿನಿಮಾದ ಯಶಸ್ಸು, ಮತ್ತೊಂದು ಕಡೆ ಪ್ರಭಾಸ್ ಜತೆ ಸೀತೆಯಾಗಿ ಆದಿಪುರುಷ್ ಚಿತ್ರದಲ್ಲಿ ನಟನೆ. ಕೃತಿ ಸನೋನ್ ಅವರಿಗೆ ಈ ವರ್ಷ ನಿಜಕ್ಕೂ ಅದೃಷ್ಟ ತಂದುಕೊಟ್ಟಿದೆ ಎನ್ನಬಹುದು.
2/ 14
ಹೌದು, ನಟಿ ಕೃತಿ ಸನೋನ್ ಅಭಿನಯದ ಮೀಮೀ ಸಿನಿಮಾ ಒಟಿಟಿ ಮೂಲಕ ತೆರೆ ಕಂಡಿದ್ದು ಪ್ರೇಕ್ಷಕರ ಮನ ಗೆದ್ದಿದೆ.
3/ 14
ಮೀಮೀ ಸಿನಿಮಾದಲ್ಲಿ ಬಾಡಿಗೆ ತಾಯಿಯಾಗಿ ಅಭಿನಯಿಸಿದ್ದು, ಈ ಚಿತ್ರದ ಹಾಡೊಂದು ಸಖತ್ ವೈರಲ್ ಆಗಿದೆ.
4/ 14
ಪರಮ್ ಸುಂದರಿ ಹಾಡು ಎಲ್ಲಿ ನೋಡಿದರೂ ಅದರದ್ದೇ ಹವಾ. ಇಂತಹ ಹಾಡಿನಲ್ಲಿ ಸೊಂಟ ಬಳುಕಿಸಿರುವ ಕೃತಿ ಅವರು ಆದಿಪುರುಷ್ ಸಿನಿಮಾಗಾಗಿ ತಯಾರಿ ನಡೆಸಿದ್ದಾರೆ.
5/ 14
ಸದ್ಯ ಬೇಡಿಕೆಯಲ್ಲಿರುವ ನಟಿಯರಲ್ಲಿ ಒಬ್ಬರಾಗಿ ಕೃತಿ ಸನೋನ್ ಅವರು ತಮ್ಮ ಮಾಡೆಲಿಂಗ್ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
6/ 14
ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಾವು ಮಾಡೆಲಿಂಗ್ ಮಾಡುತ್ತಿದ್ದ ದಿನಗಳ ಅನುಭವಗಳನ್ನು ಮೆಲುಕು ಹಾಕಿದ್ದಾರೆ.
7/ 14
ಕೃತಿ ಸನೋನ್ ಮಾಡೆಲಿಂಗ್ ಮಾಡುವ ಮೂಲಕವೇ ಸಿನಿರಂಗಕ್ಕೆ ಎಂಟ್ರಿ ಕೊಟ್ಟಿದ್ದು.
8/ 14
ತಮ್ಮ ಮೊದಲ ಮಾಡೆಲಿಂಗ್ ಅಸೈನ್ಮೆಂಟ್ನಲ್ಲಿ ಕೃತಿ ಅವರು ಕಣ್ಣೀರಿಟ್ಟಿದ್ದರಂತೆ.
9/ 14
ಕೊರಿಗಯೋಗ್ರಾಫರ್ ಒಬ್ಬರು ಕೃತಿ ಅವರಿಗೆ ಖಾರವಾಗಿ ಬೈದಿದ್ದರಂತೆ.
10/ 14
ಮೊದಲ ಅಸೈನ್ಮೆಂಟ್ನಲ್ಲಿ ಮಾಡಿದ್ದ ತಪ್ಪಿಗೆ ಆ ಶೋನ ಕೊರಿಯೋಗ್ರಾಫರ್ 20 ಮಂದಿ ಮಾಡೆಲ್ಗಳ ಮುಂದೆ ಬೈದಿದ್ದರಂತೆ.
11/ 14
ಇದರಿಂದಾಗಿ ಕೃತಿ ಸನೋನ್ ಕಣ್ಣೀರಿಟ್ಟಿದ್ದಂತೆ.
12/ 14
ಈಗಲೂ ಸಹ ಯಾರಾದರೂ ಬೈದರೆ, ಕೃತಿ ಅವರಿಗೆ ತಡೆಯೋಕೆ ಆಗೋದಿಲ್ಲವಂತೆ.
13/ 14
ಯಾರಾದರೂ ಬೈದರೆ ಸಾಕು ಕಣ್ಣಲ್ಲಿ ನೀರು ಬಂದು ಬಿಡುತ್ತದೆ ಎನ್ನುತ್ತಾರೆ ಈ ನಟಿ.
14/ 14
ಸದ್ಯ ಆದಿಪುರುಷ್ ಸಿನಿಮಾಗಾಗಿ ಪ್ರಭಾಸ್ ಜತೆ ನೃತ್ಯಾಭ್ಯಾಸದಲ್ಲಿ ತೊಡಗಿದ್ದಾರೆ ಕೃತಿ ಸನೋನ್.