ರಿಯಲ್ ಸ್ಟಾರ್ ಉಪೇಂದ್ರ, ಅಭಿನಯ ಚಕ್ರವರ್ತಿ ಸುದೀಪ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಈ ಚಿತ್ರ ಟ್ರೈಲರ್ ಮೂಲಕ ಬೇರೆ ಲೆವಲ್‌ನ ಸಿನಿಮಾ ಅನಿಸುತ್ತಿದೆ. ಟೀಸರ್ ಬೇರೆ ಫೀಲ್ ಕೊಟ್ಟಿದ್ದು ಗೊತ್ತೇ ಇದೆ. ಆದರೆ ರವಿ ಬಸ್ರೂರು ಸಂಗೀತದ ಎಲ್ಲ ಹಾಡುಗಳೂ ಹೊಸ ಮೋಡಿ ಮಾಡಿವೆ. ಒಟ್ಟಾರೆ ಕಬ್ಜ ಸಿನಿಮಾ ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು ದೊಡ್ಡ ಭರವಸೆಯನ್ನ ಮೂಡಿಸಿದೆ.