ಆಸ್ಕರ್ ನೈಟ್ನಲ್ಲಿ ಎಸ್ಎಸ್ ರಾಜಮೌಳಿ ಅವರ RRR ಸಿನಿಮಾ ತಂಡ ಎಲ್ಲರ ಆರ್ಕಷಣೆಯಾಗಿತ್ತು. ಸಿನಿಮಾದ 'ನಾಟು ನಾಟು' ಹಾಡು ಅತ್ಯುತ್ತಮ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಪ್ರಶಸ್ತಿಯನ್ನು ಗೆದ್ದಿದೆ. ಈ ಪ್ರಶಸ್ತಿ ಕಾರ್ಯಕ್ರಮದಲ್ಲಿ ರಾಜಮೌಳಿ ಕೂಡ ಕುಟುಂಗ ಸಮೇತ ಭಾಗವಹಿಸಿದ್ರು. ಈ ವೇಳೆ ನಟ ರಾಮ್ ಚರಣ್ ತಮ್ಮ ಗರ್ಭಿಣಿ ಪತ್ನಿ ಉಪಾಸನಾ ಕಾಮಿನೇನಿ ಅವರೊಂದಿಗೆ ಆಗಮಿಸಿದ್ದರು.
95 ನೇ ಆಸ್ಕರ್ ಪ್ರಶಸ್ತಿ ಕಾರ್ಯಕ್ರಮ ಲಾಸ್ ಏಂಜಲೀಸ್ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ RRR ಸಿನಿಮಾ ತಂಡ ಜೊತೆಯಾಗಿ ಕಾಣಿಸಿಕೊಂಡಿದೆ. ಈ ವಿಶೇಷ ಸಂದರ್ಭದಲ್ಲಿ ಉಪಾಸನಾ ಅವರು ತಮ್ಮ 6 ತಿಂಗಳ ಬೇಬಿ ಬಂಪ್ ಜೊತೆ ಕಾಣಿಸಿಕೊಂಡಿದ್ದ ವಿಶೇಷವಾಗಿತ್ತು. ಈ ಸಂದರ್ಭದಲ್ಲಿ, ರಾಮ್ ಚರಣ್ ಮತ್ತು ಉಪಾಸನಾ ಮಾಧ್ಯಮಗಳೊಂದಿಗೆ ಮಾತಾಡಿದ್ದು, ನಟ ರಾಮ್ ಚರಣ್ ಮಗುವಿನ ಬಗ್ಗೆ ಕೂಡ ಪ್ರಸ್ತಾಪಿಸಿದ್ದಾರೆ.