ಭಾರತೀಯರಿಗೆ ಆಸ್ಕರ್ ಯಾವಾಗಲೂ ಒಂದು ಮಾಯಾಮೃಗವೇ ಸರಿ. ಇದನ್ನ ಪಡೆಯೋ ನಿಟ್ಟಿನಲ್ಲಿ ಬಾಲಿವುಡ್‌ನ ಎಲ್ಲ ದಿಗ್ಗಜರು ಪ್ರಯತ್ನಿಯಿಸಿದ್ದಾರೆ. ಆದರೆ ಅದು ಮೊದಲು ಒಲಿದದ್ದು ಮಾತ್ರ ಮಹಿಳಾ ಕಾಸ್ಟೂಮ್ ಡಿಸೈನರ್ ಭಾನು ಅಥಾಯ ಅವರಿಗೆ ಅನ್ನೋದು ವಿಶೇಷ. ರಿಚರ್ಡ್ ಅಟೆನ್ಬರೋ ನಿರ್ದೇಶನದ ಗಾಂಧಿ ಚಿತ್ರದ ಕಾಸ್ಟೂಮ್ ಡಿಸೈನ್‌ಗೆ ಆಸ್ಕರ್ ಬಂದಿತ್ತು. 1982 ರಲ್ಲಿ ಗಾಂಧಿ ಚಿತ್ರ ರಿಲೀಸ್ ಆಗಿತ್ತು.