'ರಬ್ಬ್ ಕರೇ ತುಜ್ಕೋ ಭೀ'- ಮುಜ್ಸೆ ಶಾದಿ ಕರೋಗಿ ಚಿತ್ರದ ರಬ್ಬ್ ಕರೇ ತುಜ್ಕೋ ಭೀ ಒಂದು ರೋಮ್ಯಾಂಟಿಕ್ ಸಾಂಗ್ ಆಗಿದ್ದು ಹೆಚ್ಚು ಹಿಟ್ ಪಡೆದಿತ್ತು. ಜಲೀಸ್ ಶೆರ್ವಾನಿ ಹಾಡಿನ ಸಾಹಿತ್ಯವನ್ನು ಬರೆದರೆ, ಸಂಗೀತ ನಿರ್ದೇಶಕ ಜೋಡಿ ಸಾಜಿದ್-ವಾಜಿದ್ ಸಂಗೀತ ಸಂಯೋಜಿಸಿದ್ದಾರೆ. ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಮತ್ತು ಪ್ರಿಯಾಂಕಾ ಚೋಪ್ರಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ ಚಿತ್ರವು 2004 ರಲ್ಲಿ ಬಿಡುಗಡೆ ಆಗಿತ್ತು.
'ಓ ಮೆಹಂದಿ ರಂಗ್ ಲಾಯಿ'- ಚಲ್ ಮೇರೆ ಭಾಯ್ ಚಿತ್ರದ ಓ ಮೆಹಂದಿ ರಂಗ್ ಲಯೀ, ಸೋನು ನಿಗಮ್ ಮತ್ತು ಜಸ್ಪಿಂದರ್ ನರುಲಾ ಸೇರಿದಂತೆ ನಾರಾಯಣ್ ಮತ್ತು ಯಾಗ್ನಿಕ್ ಅವರು ಹಾಡಿದ್ದಾರೆ. ಸಮೀರ್ ಇದರ ಸಾಹಿತ್ಯವನ್ನು ಬರೆದರೆ, ಆನಂದ್-ಮಿಲಿಂದ್ ಸಂಗೀತ ಸಂಯೋಜಿಸಿದ್ದಾರೆ. ಧವನ್ ನಿರ್ದೇಶನದ 2000 ರ ಚಲನಚಿತ್ರದಲ್ಲಿ ಸಂಜಯ್ ದತ್, ಸಲ್ಮಾನ್ ಖಾನ್, ಕರಿಷ್ಮಾ ಕಪೂರ್, ಹಿಮಾನಿ ಶಿವಪುರಿ ಮತ್ತು ದಿಲೀಪ್ ತಾಹಿಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.