ಮತ್ತೊಮ್ಮೆ ಸಖತ್ ಹಾಟ್ ಲುಕ್ನಲ್ಲಿ ಡಿಂಪಲ್ ಕ್ವೀನ್ Rachita Ram
ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಹಾಗೂ ಅಜಯ್ ರಾವ್ (Ajay Rao) ಅಭಿನಯದ ಬಹು ನಿರೀಕ್ಷಿತ ಸಿನಿಮಾ ಲವ್ ಯೂ ರಚ್ಚು (Love You Rachchu). ಈ ಸಿನಿಮಾದ ರೊಮ್ಯಾಂಟಿಕ್ ಡ್ಯೂಯೇಟ್ ಮುದ್ದು ನೀನು ಹಾಡಿನಲ್ಲಿ ರಚಿತಾ ರಾಮ್ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಐ ಲವ್ ಯೂ ಸಿನಿಮಾದ ವಿವಾದದ ನಂತರ ಮತ್ತೆ ಹಾಟ್ ಲುಕ್ನಲ್ಲಿ ಡಿಂಪಲ್ ಕ್ವೀನ್ ನಟಿಸಿದ್ದಾರೆ.
ರಚಿತಾ ರಾಮ್ ಅವರು ಸದ್ಯ ತಮ್ಮ ಬಹುನಿರೀಕ್ಷಿತ ಸಿನಿಮಾ ಲವ್ ಯೂ ರಚ್ಚು ಚಿತ್ರದ ಹಾಡಿನಿಂದಾಗಿ ಸಖತ್ ಸದ್ದು ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ರಚಿತಾ ತಾಮ್ ಅವರು ಸಖತ್ ಹಾಟ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
2/ 5
ಲವ್ ಯೂ ರಚ್ಚು ಸಿನಿಮಾದ ಮುದ್ದು ನೀನು ಹಾಡಿನಲ್ಲಿ ರಚಿತಾ ರಾಮ್ ಕೃಷ್ಣ ಅಜಯ್ ರಾವ್ ಜೊತೆ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಹಾಡಿನ ಪ್ರಮೋಷನ್ಗಾಗಿ ಮಾಡಿಸಿರುವ ಕೆಲವು ಚಿತ್ರಗಳು ಸದ್ಯ ವೈರಲ್ ಆಗಿವೆ.
3/ 5
ಲವ್ ಯೂ ರಚ್ಚು ಚಿತ್ರದಲ್ಲಿ ರಚಿತಾರ ಬೋಲ್ಡ್ ಅವತಾರಕ್ಕೆ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ. ಐ ಲವ್ ಯೂ ಚಿತ್ರದ ನಂತರ ಮತ್ತೊಮ್ಮೆ ಸಿಕ್ಕಾಪಟ್ಟೆ ಹಾಟ್ ಲುಕ್ನಲ್ಲಿ ಕಾಣಿಸಿಕೊಂಡಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
4/ 5
ಗುರುದೇಶಪಾಂಡೆ ನಿರ್ಮಾಣದ ಸಿನಿಮಾ ಇದಾಗಿದ್ದು, ಲವ್ ಯೂ ರಚ್ಚು ಚಿತ್ರದ ಮುದ್ದು ನೀನೆ ಹಾಡಿನಲ್ಲಿ ರಚ್ಚು ಗ್ಲಾಮ್ ಅವತಾರಕ್ಕೆ ಸಿನಿಪ್ರಿಯರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಖ್ಯಾತ ಗಾಯಕ ಸಿಡ್ ಶ್ರೀರಾಮ್ ಈ ಹಾಡನ್ನು ಹಾಡಿದ್ದಾರೆ.
5/ 5
ಐ ಲವ್ ಯೂ ಸಿನಿಮಾದಲ್ಲಿ ಉಪೇಂದ್ರ ಅವರ ಜೊತೆ ಸಖತ್ ಬೋಲ್ಡ್ ಸೀನ್ಗಳಲ್ಲಿ ಕಾಣಿಸಿಕೊಂಡಿದ್ದ ರಚಿತಾ ರಾಮ್ ಈ ಹಿಂದೆ ತಪ್ಪು ಮಾಡಿಬಿಟ್ಟೆ ಎಂದು ಕಣ್ಣೀರಿಟ್ಟಿದ್ದರು. ತಮ್ಮ ತಂದೆ-ತಾಯಿ ತೆರೆ ಮೇಲೆ ತನ್ನನ್ನು ಈ ರೀತಿ ನೋಡಲು ಬಯಸುವುದಿಲ್ಲ. ಇನ್ನು ಮುಂದೆ ಇಂತಹ ದೃಶ್ಯಗಳಲ್ಲಿ ನಟಿಸೋದಿಲ್ಲ ಎಂದು ಸಂದರ್ಶನ ಒಂದರಲ್ಲಿ ಕಣ್ಣೀರಿಟ್ಟಿದ್ದರು.