ಕಳೆದ ಕೆಲ ವರ್ಷಗಳಿಂದ ಅನುಷ್ಕಾ ಶೆಟ್ಟಿ ಸಿನಿಮಾ ವಿಷಯಕ್ಕಿಂತ ಹೆಚ್ಚಾಗಿ ತಮ್ಮ ಮದುವೆಯಿಂದಾಗಿ ಸುದ್ದಿಯಲ್ಲಿದ್ದಾರೆ. ಈಗಲೂ ಸಹ ಅನುಷ್ಕಾ ಮದುವೆ ಸುದ್ದಿ ಮತ್ತೆ ಸದ್ದು ಮಾಡುತ್ತಿದೆ. ಅನುಷ್ಕಾ ಶೆಟ್ಟಿ ಮದುವೆ ಉದ್ಯಮಿಯೊಬ್ಬರ ಮಗ ಜತೆ ಫಿಕ್ಸ್ ಆಗಿದೆಯಂತೆ. (ಚಿತ್ರಗಳು ಕೃಪೆ: ಅನುಷ್ಕಾ ಶೆಟ್ಟಿ ಅಭಿಮಾನಿಗಳ ಟ್ವಿಟರ್ ಖಾತೆ)
ಕರಾವಳಿ ಸುಂದರಿ ಅನುಷ್ಕಾ ಶೆಟ್ಟಿ ಹುಟ್ಟಿದ್ದು ಬೆಳೆದಿದ್ದು ಕರ್ನಾಟಕ ಆದರೂ ಭವಿಷ್ಯ ಕಂಡುಕೊಂಡಿದ್ದು ಮಾತ್ರ ನೆರೆ ರಾಜ್ಯದಲ್ಲಿ.
2/ 7
39ನೇ ಹುಟ್ಟುಹಬ್ಬ ಆಚರಿಸಿಕೊಂಡಿರುವ ನಟಿಗೆ ಮದುವೆ ಯಾವಾಗ ಅಂತ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
3/ 7
ಪ್ರಭಾಸ್ ಜತೆ ಅನುಷ್ಕಾ ಶೆಟ್ಟಿ ಮದುವೆಯಾಗಲಿದೆ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಆದರೆ ಈ ಜೋಡಿಯ ಮದುವೆ ಸುದ್ದಿ ಇಲ್ಲಿವರೆಗೂ ಎಲ್ಲೂ ಅಧಿಕೃತವಾಗಿ ಪ್ರಕಟವಾಗಿಲ್ಲ.
4/ 7
ಇದರ ನಡುವೆಯೇ ಅನುಷ್ಕಾ ಮದುವೆ ವಿಷಯ ಆಗಾಗ ಹರಿದಾಡುತ್ತಿರುತ್ತದೆ. ಸದ್ಯ ಅನುಷ್ಕಾ ಶೆಟ್ಟಿ ದುಬೈ ಮೂಲದ ಉದ್ಯಮಿಯೊಬ್ಬರ ಮಗನನ್ನು ವರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
5/ 7
ಉದ್ಯಮಿಯ ಮಗನೊಂದಿಗೆ ಅನುಷ್ಕಾ ಮದುವೆ ನಿಗದಿಯಾಗಿದ್ದು, ಹುಡುಗ ವಯಸ್ಸಿನಲ್ಲಿ ಸ್ವೀಟಿಗಿಂತ ಚಿಕ್ಕವರು ಎಂದು ಹೇಳಲಾಗುತ್ತಿದೆ.
6/ 7
ತಮ್ಮ ಮದುವೆ ವಿಷಯವಾಗಿ ಅನುಷ್ಕಾ ಶೆಟ್ಟಿ ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ.
7/ 7
ಅನುಷ್ಕಾ ಶೆಟ್ಟಿ ಸಿನಿಮಾ ವಿಷಯಕ್ಕೆ ಬಂದರೆ, ರಾ ರಾ ಕೃಷ್ಣಯ್ಯ ಸಿನಿಮಾ ಖ್ಯಾತಿಯ ನಿರ್ದೇಶಕ ಮಹೇಶ್ ಬಾಬು ಜತೆ ಹೊಸ ಸಿನಿಮಾ ಮಾಡುತ್ತಿದ್ದು, ಇದರಲ್ಲಿ ನವೀನ್ ಪೊಲಿಶೆಟ್ಟಿ ನಾಯಕನಾಗಿ ನಟಿಸುತ್ತಿದ್ದಾರೆ.