ಸ್ಯಾಂಡಲ್ವುಡ್ ನಟ ಧನಂಜಯ್ ಎಂದರೆ ಯಾರಿಗೂ ಒಮ್ಮೆಲೇ ನೆನಪಾಗುವುದಿಲ್ಲ. ಅದೇ ಡಾಲಿ ಧನಂಜಯ್ ಅಂದರೆ ಥಟ್ಟನೆ 'ಟಗರು' ಶಿವನಿಗೆ ಟಕ್ಕರ್ ಕೊಟ್ಟ ಖತರ್ನಾಕ್ ಖಳನ ಮುಖವೊಂದು ಕಣ್ಮುಂದೆ ಬಂದು ಬಿಡುತ್ತೆ. ಅಂತಹದೊಂದು ಅಧ್ಬುತ ಅಭಿನಯವನ್ನು ಧನಂಜಯ್ ನೀಡಿದ್ದರು.
2/ 11
ಒಂದೆಡೆ ಎನರ್ಜಿಟಿಕ್ ಶಿವಣ್ಣ..ಮತ್ತೊಂದೆಡೆ ಬಿಸಿರಕ್ತದ ಧನಂಜಯ್...ಇವರಿಬ್ಬರ ಟಕ್ಕರ್ ಪಾತ್ರದ ಟಗರು ಪ್ರೇಕ್ಷಕರನ್ನು ಅದ್ಯಾವ ಮಟ್ಟಿಗೆ ಮೋಡಿ ಮಾಡಿತ್ತು ಅಂದರೆ ಅವಕಾಶಗಳಿಗೆ ಎದುರು ನೋಡುತ್ತಿದ್ದ ಡಾಲಿಯನ್ನು ಬ್ಯುಸಿಯೆಸ್ಟ್ ನಟನಾಗಿಸುವಷ್ಟು.
3/ 11
'ಟಗರು' ಸಿನಿಮಾದ ಡಾಲಿ ಪಾತ್ರದಿಂದ ಧನಂಜಯ್ಗೆ ಅವಕಾಶಗಳ ಮಹಾಪೂರ ಹರಿಬಂದಿತ್ತು. ಶಿವಣ್ಣನ ಎದುರು ತೊಡೆ ತಟ್ಟಿದ ಬೆನ್ನಲ್ಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'ಯಜಮಾನ' ಸಿನಿಮಾದಲ್ಲಿ ಡಾಲಿ ಪಟ್ಟು ಅಂದ್ರೆ ಪಟಾಸು ಎನ್ನುತ್ತಾ ಮಿಠಾಯಿ ಸೂರಿಯಾಗಿ ಕಾಣಿಸಿಕೊಂಡಿದ್ದರು.
4/ 11
ಇನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುವಮಾರ್ ಅಭಿನಯದ 'ಯುವರತ್ನ'ದಲ್ಲಿ ಧನಂಜಯ್ ಕಿಲಾಡಿ ಕಿಂಕರನಾಗಿ ಕಾಣಿಸಲಿದ್ದಾರೆ. ಹಾಗೆಯೇ ದುನಿಯಾ ವಿಜಯ್ ಜತೆಗಿನ 'ಸಲಗ'ದ ಬಳಗದಲ್ಲಿ ಹಾಗೂ ಧ್ರುವ ಸರ್ಜಾ ನಾಯಕರಾಗಿರುವ 'ಪೊಗರು'ನಲ್ಲಿ ಟಗರಿನ ಖದರ್ ತೊರಿಸಲು ಡಾಲಿ ಸಿದ್ಧತೆಯಲ್ಲಿದ್ದಾರೆ.
5/ 11
ಇದೀಗ ಮತ್ತೊಮ್ಮೆ ಡಾಲಿ-ಟಗರನ್ನು ಜೊತೆಗೂಡಿಸಲು ಕಾಲಿವುಡ್ ನಿರ್ದೇಶಕರು ಪಣತೊಟ್ಟಿದ್ದಾರೆ. ಅದಕ್ಕೆ ಬೇಕಾದ ಸಿದ್ಧತೆಗಳನ್ನು ಸಹ ಪ್ರಾರಂಭಿಸಿದ್ದಾರೆ.
6/ 11
ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ/ಛಾಯಾಗ್ರಾಹಕ ವಿಜಯ್ ಮಿಲ್ಟನ್ ಇಂಥದ್ದೊಂದು ಪ್ಲ್ಯಾನ್ ಮಾಡಿದ್ದಾರೆ. ಶಿವರಾಜ್ ಕುಮಾರ್ ಮತ್ತು ಧನಂಜಯ ಅವರನ್ನು ಮತ್ತೆ ತೆರೆ ಮೇಲೆ ಕರೆತರಲು ಕಥೆಯನ್ನು ಸಿದ್ಧಪಡಿಸುತ್ತಿದ್ದಾರೆ.
7/ 11
ಈ ಬಗ್ಗೆ ಹ್ಯಾಟ್ರಿಕ್ ಹೀರೋ ಜೊತೆ ಒಂದು ಸುತ್ತಿನ ಮಾತುಕತೆ ಕೂಡ ಮುಗಿದಿದೆ. ಹಾಗೆಯೇ ಕರುನಾಡ ಚಕ್ರವರ್ತಿ ಓಕೆ ಕೂಡ ಅಂದಿದ್ದಾರೆ. ಇನ್ನು ಶಿವಣ್ಣ ಅಂದ ಮೇಲೆ ಅದೆಷ್ಟೂ ಬ್ಯುಸಿ ಇದ್ದರೂ ಧನಂಜಯ್ ಅಂತು ರೆಡಿ ಎಂಬ ಮಾತು ಗಾಂಧಿನಗರದಲ್ಲಿದೆ. ಏಕೆಂದರೆ ಶಿವಣ್ಣನನ್ನು ಡಾಲಿ ಅಣ್ಣನ ಸ್ಥಾನದಲ್ಲಿರಿಸಿಕೊಂಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ.
8/ 11
ಹೀಗಾಗಿ ವಿಜಯ್ ಮಿಲ್ಟನ್ ಅವರ ಕನಸಿನ ಪ್ರಾಜೆಕ್ಟ್ ಅರ್ಧ ಸೆಟ್ಟೇರಿದಂತೆ ಎಂಬ ಮಾತುಗಳು ಈಗಾಗಲೇ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ತಮಿಳಿನಲ್ಲಿ 'ಗೋಲಿಸೋಡ' '10 ಎನ್ರಾದುಕುಲ್ಲ' ಎಂಬ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ವಿಜಯ್ ಈಗಾಗಲೇ ಸ್ಯಾಂಡಲ್ವುಡ್ಗೂ ಎಂಟ್ರಿ ಕೊಟ್ಟಿದ್ದಾರೆ.
9/ 11
ಸ್ಯಾಂಡಲ್ವುಡ್ನಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿರುವ ಧ್ರುವ ಸರ್ಜಾ ಅಭಿನಯದ 'ಪೊಗರು' ಚಿತ್ರಕ್ಕೆ ಕ್ಯಾಮೆರಾಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಡಾಲಿ ಕೂಡ ಇರುವುದರಿಂದ ಅವರೊಂದಿಗೂ ಕಥೆಯ ಬಗ್ಗೆ ಚರ್ಚಿಸಿರುವ ಸಾಧ್ಯತೆ ಹೆಚ್ಚಿದೆ.
10/ 11
ಸದ್ಯ ಶಿವಣ್ಣ ಭಜರಂಗಿ2 ಸಿನಿಮಾದಲ್ಲಿ ಬ್ಯುಸಿಯಾಗಿದ್ದರೆ, ಅತ್ತ ಡಾಲಿ ಬಡವ ರಾಸ್ಕಲ್ನಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಇವೆರೆಡ ಮಧ್ಯೆ ಕರುನಾಡ ಚಕ್ರವರ್ತಿಯ 124ನೇ ಸಿನಿಮಾ ಸೆಟ್ಟೇರಲಿದ್ದು, ಆ ಚಿತ್ರವನ್ನು ವಿಜಯ್ ಮಿಲ್ಟನ್ ಕೈಗೆತ್ತಿಕೊಳ್ಳಲಿದ್ದಾರೆ ಎಂಬ ಮಾತುಗಳಿವೆ.
11/ 11
ಒಟ್ಟಿನಲ್ಲಿ ಕನ್ನಡ ಬೆಳ್ಳಿತೆರೆಯ ರಗಡ್ ಜೋಡಿ ಎಂದು ಗಮನ ಸೆಳೆದ ಟಗರು ಶಿವ - ಡಾಲಿ ಧನಂಜಯ್ ಮತ್ತೆ ಎದುರು ಬದುರಾದರೆ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣವಂತು ಗ್ಯಾರೆಂಟಿ ಎನ್ನಬಹುದು.