ಸೆಪ್ಟೆಂಬರ್ 23ರಂದು ನ್ಯಾಷನಲ್ ಸಿನಿಮಾ ಡೇ ಆಚರಿಸಲಾಗುತ್ತದೆ ಆ ದಿನ ಸಿನಿಮಾ ಟಿಕೆಟ್ ರೇಟ್ ಇಳಿಸಲಾಗ್ತಿತ್ತು. ಆದ್ರೆ ಇದೀಗ ಸಿನಿಮಾ ಲವರ್ಸ್ ಡೇ ಆಚರಿಸಲಾಗ್ತಿದೆ. ಸಿನಿ ರಸಿಕರಿಗೆ ಭರ್ಜರಿ ಆಫರ್ ನೀಡಲಾಗಿದೆ.
ನ್ಯಾಷನಲ್ ಸಿನಿಮಾ ಡೇ'ಯನ್ನು ಆಚರಿಸಿ 75 ರೂಗೆ ಸಿನಿಮಾ ಟಿಕೆಟ್ ನೀಡಿದ್ರು. ಈ ದಿನದಂದು ಕಡಿಮೆ ಬೆಲೆಗೆ ಟಿಕೆಟ್ಗಳನ್ನು ಖರೀದಿಸಿದ್ದ ಸಿನಿ ರಸಿಕರು ದೊಡ್ಡ ಸಂಖ್ಯೆಯಲ್ಲಿಯೇ ಚಿತ್ರಮಂದಿರಗಳಿಗೆ ಆಗಮಿಸಿದ್ದರು.
2/ 8
ಕೊರೊನಾ ನಂತರ ತೀವ್ರ ಹಿನ್ನಡೆ ಅನುಭವಿಸಿದ್ದ ಸಿನಿಮಾ ರಂಗ ಮತ್ತೆ ಚೇತರಿಕೆ ಕಂಡಿತ್ತು. ಹೀಗಾಗಿ ಸಿನಿ ರಸಿಕರಿಗೆ ಕೃತಜ್ಞತೆ ಸಲ್ಲಿಸುವ ಕಾರಣದಿಂದಾಗಿ ಈ ದಿನವನ್ನು ಆಚರಿಸಲು ನಿರ್ಧರಿಸಲಾಗಿತ್ತು.
3/ 8
ಜನವರಿ 20 ರಂದು ( ಶುಕ್ರವಾರ ) ಸಿನಿಮಾ ಲವರ್ಸ್ ಡೇ ಆಚರಿಸಲು ಪಿವಿಆರ್ ಮಲ್ಟಿಪ್ಲೆಕ್ಸ್ಗಳು ಮುಂದಾಗಿದೆ. ಈ ದಿನ ಸಿನಿ ರಸಿಕರಿಗೆ ಬಂಪರ್ ಆಫರ್ ನೀಡಲಾಗಿದೆ. ಟಿಕೆಟ್ ಬೆಲೆ ಇಳಿಸಲಾಗಿದೆ.
4/ 8
ಜನವರಿ 20 ರಂದು ಸಿನಿಮಾ ಟಿಕೆಟ್ ನನ್ನು ಕೇವಲ 99 ರೂಪಾಯಿಗಳಿಗೆ ಮಾರಾಟ ಮಾಡಲು ಪಿವಿಆರ್ ಮಲ್ಟಿಪ್ಲೆಕ್ಸ್ ಗಳು ನಿರ್ಧರಿಸಿವೆ.
5/ 8
ಕಳೆದ ಬಾರಿ ನ್ಯಾಷನಲ್ ಸಿನಿಮಾ ಡೇ ಪ್ರಯುಕ್ತ ಕಡಿಮೆ ದರದಲ್ಲಿ ಪಿವಿಆರ್ ಮಲ್ಟಿಪ್ಲೆಕ್ಸ್ ಟಿಕೆಟ್ಗಳನ್ನು ನೀಡಿದ್ದರಿಂದ ಆ ದಿನ ದೇಶದಾದ್ಯಂತ ಬರೋಬ್ಬರಿ 6.5 ಮಿಲಿಯನ್ ಸಿನಿ ರಸಿಕರು ಚಿತ್ರಮಂದಿರಕ್ಕೆ ಬಂದು ಚಿತ್ರಗಳನ್ನು ವೀಕ್ಷಿಸಿದ್ದರು.
6/ 8
ನ್ಯಾಷನಲ್ ಸಿನಿಮಾ ಡೇ ರೀತಿಯೇ ಸಿನಿಮಾ ಲವರ್ಸ್ ಡೇ ಯಂದು ಹೆಚ್ಚಿನ ಸಂಖ್ಯೆಯಲ್ಲಿ ಸಿನಿ ರಸಿಕರು ಚಿತ್ರಮಂದಿರಗಳಿಗೆ ಬಂದು ಚಿತ್ರಗಳನ್ನು ವೀಕ್ಷಿಸುವ ಸಾಧ್ಯತೆಗಳಿವೆ. ಸಂಕ್ರಾಂತಿ ಹಬ್ಬಕ್ಕೆ ಹಲವು ಸ್ಟಾರ್ ನಟರ ಸಿನಿಮಾಗಳು ತೆರೆ ಕಂಡಿದ್ದು, ಹೆಚ್ಚಿನ ಪ್ರೇಕ್ಷಕರು ಥಿಯೇಟರ್ ಗೆ ಹರಿದು ಬರಲಿದ್ದಾರೆ.
7/ 8
ಚಂಡೀಘರ್, ಪಠಾಣ್ ಕೋಟ್ ಹಾಗೂ ಪಾಂಡಿಚೆರಿ ಈ ಮೂರು ನಗರಗಳನ್ನು ಹೊರತುಪಡಿಸಿ ದೇಶದ ಉಳಿದ ಎಲ್ಲಾ ನಗರಗಳ ಪಿವಿಆರ್ ನಲ್ಲಿಯೂ ಈ ಆಫರ್ ಇರಲಿದೆ. ಇನ್ನು ಕರ್ನಾಟಕದ ಎಲ್ಲಾ ಪಿವಿಆರ್ ಮಲ್ಟಿಪ್ಲೆಕ್ಸ್ ಗಳಲ್ಲಿಯೂ ಈ ಆಫರ್ ಇರಲಿದೆ.
8/ 8
ಇನ್ನು ಟಿಕೆಟ್ ದರಗಳು 99 ರೂಪಾಯಿಗಳಿಂದ ಪ್ರಾರಂಭವಾಗಲಿದ್ದು, ಕರ್ನಾಟಕ, ಆಂಧ್ರ ಪ್ರದೇಶ, ಕೇರಳ ಹಾಗೂ ತಮಿಳುನಾಡಿನ ಮಲ್ಟಿಪ್ಲೆಕ್ಸ್ ಗಳಲ್ಲಿ 99 ರೂಪಾಯಿ ಜತೆಗೆ ಜಿಎಸ್ಟಿ ಸೇರ್ಪಡೆಗೊಳ್ಳಲಿದೆ.