ನಟಿ ಕಾಜೋಲ್ ಮತ್ತು ತಂದೆ ಅಜಯ್ ದೇವಗನ್ ಮಗಳು ನೈಸಾ ಇತ್ತೀಚಿಗೆ ಸಖತ್ ಬ್ಯೂಟಿಫುಲ್ ಆಗಿ ಕಾಣ್ತಿದ್ದಾರೆ. ನೈಸಾ ದೇವಗನ್ ಬಾಡಿ ಟ್ರಾನ್ಸ್ಫಾರ್ಮೆಷನ್ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ. ಕಳೆದ ಕೆಲವು ವರ್ಷಗಳಿಂದ ನೈಸಾಳ ಲುಕ್ ಸಾಕಷ್ಟು ಬದಲಾಗಿದೆ. ಅವಳು ಈಗ ಮೊದಲಿಗಿಂತ ಹೆಚ್ಚು ಬ್ಯೂಟಿಫುಲ್ ಮತ್ತು ಗ್ಲಾಮರಸ್ ಆಗಿ ಕಾಣಿಸಿಕೊಳ್ತಿದ್ದಾರೆ. (ಫೋಟೋ ಕೃಪೆ: Instagram @nysadevganx)
ನೈಸಾ ದೇವಗನ್ ಉತ್ತಮ ಡಯೆಟ್ ಕೂಡ ಫಾಲೋ ಮಾಡುತ್ತಾರೆ ಎಂದು ಕಾಜೋಲ್ ಹೇಳಿದ್ದಾರೆ. ನೈಸಾ ಬೇಯಿಸಿದ ಮೊಟ್ಟೆಗಳು, ಹಣ್ಣುಗಳು ಮತ್ತು ಗಂಜಿಯನ್ನು ಹೆಚ್ಚಾಗಿ ತೆಗೆದುಕೊಳ್ಳುತ್ತಾರೆ. ಇದರ ಹೊರತಾಗಿ ನೈಸಾ ಹೊರಗಿನ ಆಹಾರವನ್ನು ಹೆಚ್ಚಾಗಿ ತೆಗೆದುಕೊಳ್ಳುವುದಿಲ್ಲ ಮತ್ತು ಆರೋಗ್ಯಕರ ಆಯ್ಕೆಗೆ ಆದ್ಯತೆ ನೀಡುತ್ತಾರೆ ಎಂದು ಕಾಜೋಲ್ ಹೇಳಿದ್ದಾರೆ. (ಫೋಟೋ ಕೃಪೆ: Instagram @nysadevganx)