ನಟಿ ಹಾಗೂ ಟಿಎಂಸಿ ಸಂಸದೆ ನುಸ್ರತ್ ಜಹಾನ್ (Nusrat Jahan) ಹಾಗೂ ಉದ್ಯಮಿ ನಿಖಿಲ್ ಜೈನ್ಅವರು ಟರ್ಕಿಯಲ್ಲಿ ವಿವಾಹವಾಗಿದ್ದರು. ಈಗ ಇವರ ದಾಂಪತ್ಯದಲ್ಲಿ ಅಪಸ್ವರವೆದ್ದಿದ್ದು, ನುಸ್ರತ್ ತಮ್ಮ ಮದುವೆ ಕುರಿತಾಗಿ ಕೊಟ್ಟಿರುವ ಹೇಳಿಕೆ ಎಲ್ಲರ ಹುಬ್ಬೇರುವಂತೆ ಮಾಡಿದೆ. ಟರ್ಕಿಯಲ್ಲಿ ಆದ ವಿವಾಹ ನಮ್ಮ ದೇಶದಲ್ಲಿ ಮಾನ್ಯವಲ್ಲ ಎಂದಿದ್ದಾರೆ ನುಸ್ರತ್. ಸಾಮಾನ್ಯವಾಗಿ ಸೆಲೆಬ್ರಿಟಿಗಳು ಲೈಮ್ ಲೈಟ್ನಿಂದ ದೂರವಾಗಿ ಹೋಗಿ ವಿದೇಶಗಳಲ್ಲಿ ವಿವಾಹವಾಗುತ್ತಾರೆ. ಬಾಲಿವುಡ್ನಲ್ಲೂ ಸಾಕಷ್ಟು ಮಂದಿ ದೂರದ ದೇಶಗಳಿಗೆ ಹೋಗಿ ಮದುವೆಯಾಗಿದ್ದಾರೆ. (ಚಿತ್ರ ಕೃಪೆ: network 18)