ದುಲ್ಕರ್ ಡ್ರೈವಿಂಗ್ ಅನ್ನು ಆನಂದಿಸುವ ರಸ್ತೆಗಳ ಬಗ್ಗೆ ಮಾತನಾಡುತ್ತಾ "ಕ್ಯಾಲಿಫೋರ್ನಿಯಾದ ಮಾರ್ಗ 1 ನನಗೆ ತುಂಬಾನೇ ಇಷ್ಟವಾದ ರಸ್ತೆ. ನಾನು ಸ್ಯಾನ್ ಫ್ರಾನ್ಸಿಸ್ಕೋದಿಂದ ಲಾಸ್ ಏಂಜಲೀಸ್ವರೆಗೆ ಡ್ರೈವ್ ಮಾಡಿದ್ದೇನೆ. ನಾನು ಮಾಂಟೆರಿಯಿಂದ ಡ್ರೈವ್ ಮಾಡುತ್ತಾ ಹೋಗಿ ಅಲ್ಲಿರುವ ಎಲ್ಲಾ ಕಾರ್ ಕ್ಲಬ್ ಗಳನ್ನು ನೋಡಿದೆ. ಆ ರಸ್ತೆ ಮಾತ್ರ ತುಂಬಾನೇ ಸುಂದರವಾಗಿದೆ, ನಾನು ಆ ರಸ್ತೆಯನ್ನು ತುಂಬಾನೇ ಇಷ್ಟಪಡುತ್ತೇನೆ" ಎಂದು ಹೇಳಿದ್ದಾರೆ.
"ನಾನು ಕೇಳುವ ಸಂಗೀತ ನನ್ನ ಡ್ರೈವಿಂಗ್ ಮೇಲೆ ಪರಿಣಾಮ ಬೀರುತ್ತದೆ. ಹಾಡು ತುಂಬಾನೇ ವೇಗವಾಗಿದ್ದರೆ, ನಾನು ಕಾರನ್ನು ತುಂಬಾನೇ ವೇಗವಾಗಿ ಓಡಿಸುತ್ತೇನೆ. ವಾಸ್ತವವಾಗಿ, ನಾನು ಚೆನ್ನೈ ಮತ್ತು ದುಬೈನಲ್ಲಿ ಕೆಲಸಕ್ಕೆ ಪ್ರಯಾಣಿಸುತ್ತಿದ್ದಾಗ, ಅಲ್ಲಿನ ಜನರು ಚೆನ್ನಾಗಿ ಕಾರು ಓಡಿಸದೆ ಇದ್ದಾಗ, ನನಗೆ ಕೆಟ್ಟ ಕೋಪ ಬರುತ್ತಿತ್ತು. ಅದಕ್ಕಾಗಿಯೇ ನನ್ನನ್ನು ನಾನು ಶಾಂತಗೊಳಿಸಿಕೊಳ್ಳಲು ನಾನು ಫ್ರಾಂಕ್ ಸಿನಾಟ್ರಾ ಮತ್ತು ಡಿಮಾ ಅವರ ಹಾಡುಗಳನ್ನು ಕೇಳಲು ಪ್ರಾರಂಭಿಸಿದೆ" ಎಂದು ನಟ ದುಲ್ಕರ್ ಹೇಳಿದರು.