ಯಂಗ್ ಟೈಗರ್ NTR ಇತ್ತೀಚೆಗೆ ರಾಜಮೌಳಿ ಅವರ RRR ಸಿನಿಮಾದಲ್ಲಿ ನಟಿಸಿ ಪ್ಯಾನ್ ಇಂಡಿಯಾ ರೇಂಜ್ನಲ್ಲಿ ಸೂಪರ್ ಕ್ರೇಜ್ ಕ್ರಿಯೇಟ್ ಮಾಡಿದ್ದಾರೆ. 2022 ಮಾರ್ಚ್ 24ರಂದು ಬಿಡುಗಡೆಯಾದ RRR ಸಿನಿಮಾ ವಿಶ್ವದಾದ್ಯಂತ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಸದ್ದು ಮಾಡಿದೆ. RRR ಸಿನಿಮಾ ಆಸ್ಕರ್ ರೇಸ್ನಲ್ಲಿ ಹಾಲಿವುಡ್ ಸಿನಿಮಾಗಳೊಂದಿಗೆ ಸ್ಪರ್ಧಿಸಿ ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿದೆ. ಒರಿಜಿನಲ್ ಸಾಂಗ್ ವಿಭಾಗದಲ್ಲಿ ನಾಟು ನಾಟು ಹಾಡು ಪ್ರಶಸ್ತಿ ಗೆದ್ದಿದೆ.
NTR 30 ಸಿನಿಮಾ ಇತ್ತೀಚೆಗಷ್ಟೇ ಗ್ರ್ಯಾಂಡ್ ಓಪನಿಂಗ್ ಪಡೆದಿದೆ. ಸಿನಿಮಾ ಮೂಹೂರ್ತ ಪೂಜಾ ಕಾರ್ಯಕ್ರಮಗಳು ಕೂಡ ಮುಗಿದಿದ್ದು, ಚಿತ್ರತಂಡ ಶೂಟಿಂಗ್ ಆರಂಭಿಸಿದೆ. ಸಾಹಸ ದೃಶ್ಯಗಳೊಂದಿಗೆ ಚಿತ್ರೀಕರಣ ಪ್ರಾರಂಭವಾಗಿದೆ. ಈ ಸಿನಿಮಾ ಚಿತ್ರೀಕರಣದಲ್ಲಿ ಬಾಲಿವುಡ್ ನಟಿ ಜಾನ್ವಿ ಕೂಡ ಭಾಗವಹಿಸುತ್ತಿದ್ದಾರೆ. ಈಗಾಗಲೇ ಈ ಸಿನಿಮಾದ ಸೆಟ್ಗಳ ಕೆಲಸ ಮುಗಿದಿದೆ. ಫೋಟೋ: ಟ್ವಿಟರ್
ಸಾಲು ಸಾಲು ಹಿಟ್ ಸಿನಿಮಾಗಳ ಮೂಲಕ ಧೂಳೆಬ್ಬಿಸಿರುವ ಎನ್.ಟಿ.ಆರ್ ಅವರ ಆಸ್ತಿ ಎಷ್ಟು ಎನ್ನುವ ಕುತೂಹಲ ಸಾಮಾನ್ಯ ಪ್ರೇಕ್ಷಕರಿಗಷ್ಟೇ ಅಲ್ಲ ಅವರ ಅಭಿಮಾನಿಗಳನ್ನೂ ಸಹ ಕಾಡುತ್ತಿದೆ. ಸೆಲೆಬ್ರಿಟಿಗಳ ಆಸ್ತಿಯ ಬಗ್ಗೆ ತಿಳಿಸುವ ವೆಬ್ಸೈಟ್ ಪ್ರಕಾರ, ಜೂನಿಯರ್ NTR ಆಸ್ತಿಯ ಮೌಲ್ಯ ರೂ. 440 ಕೋಟಿ ಇದೆ. ಅವರ ಮಾಸಿಕ ಆದಾಯ: ರೂ. 3 ಕೋಟಿಗೂ ಅಧಿಕ ಇದೆಯಂತೆ. ಫೋಟೋ: ಟ್ವಿಟರ್