ಚಪಾಕ್, ತಾನ್ಹಾಜಿ ಚಿತ್ರಗಳ ಫ್ರೀ ಟಿಕೆಟ್: ಯಾರಿಗುಂಟು, ಯಾರಿಗಿಲ್ಲ..!
ದೀಪಿಕಾ ಪಡುಕೋಣೆ ಅಭಿನಯದ ಚಪಾಕ್, ಅಜಯ್ ದೇವಗನ್-ಸೈಫ್ ಅಲಿ ಖಾನ್ ನಟನೆಯ ತಾನ್ಹಾಜಿ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ದರ್ಬಾರ್ ಚಿತ್ರಗಳು ಈ ವಾರ ಬಾಕ್ಸಾಫೀಸ್ನಲ್ಲಿ ಮುಖಾಮುಖಿಯಾಗಿವೆ.
ದೀಪಿಕಾ ಪಡುಕೋಣೆ ಅಭಿನಯದ ಚಪಾಕ್, ಅಜಯ್ ದೇವಗನ್-ಸೈಫ್ ಅಲಿ ಖಾನ್ ನಟನೆಯ ತಾನ್ಹಾಜಿ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ದರ್ಬಾರ್ ಚಿತ್ರಗಳು ಈ ವಾರ ಬಾಕ್ಸಾಫೀಸ್ನಲ್ಲಿ ಮುಖಾಮುಖಿಯಾಗಿವೆ.
2/ 9
ಅದರಲ್ಲಿ ಚಪಾಕ್ ಚಿತ್ರವು ಆ್ಯಸಿಡ್ ಸಂತ್ರಸ್ತೆ ಲಕ್ಷ್ಮಿ ಅಗರ್ವಾಲ್ ಅವರ ಜೀವನಾಧಾರಿತ ಕಥೆ ಹೇಳಿದರೆ, ತಾನ್ಹಾಜಿ ಮರಾಠ ಚಕ್ರವರ್ತಿಯ ಐತಿಹಾಸಿಕ ಕಥೆಯನ್ನು ಬೆಳ್ಳಿಪರದೆ ಮೇಲೆ ತಿಳಿಸುತ್ತಿದೆ.
3/ 9
ಇನ್ನು ನಟಿ ದೀಪಿಕಾ ಪಡುಕೋಣೆ ಜೆಎನ್ಯು ವಿವಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಪ್ರತಿಭಟನೆ ಬೆಂಬಲ ನೀಡಿರುವುದಕ್ಕೆ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ಚಪಾಕ್ ಚಿತ್ರವನ್ನು ಬಾಯ್ಕಟ್ ಮಾಡುವಂತೆ ಸೋಷಿಯಲ್ ಮೀಡಿಯಾದಲ್ಲಿ ಹ್ಯಾಷ್ಟ್ಯಾಗ್ ಅಭಿಮಾನ ನಡೆಸಿದ್ದರು.
4/ 9
ಇಷ್ಟೆಲ್ಲಾ ವಿರೋಧದ ನಡುವೆ ಚಪಾಕ್ ತೆರೆಕಂಡಿದೆ. ಚಿತ್ರಕ್ಕೆ ಅತ್ಯುತ್ತಮ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ. ಅದರಲ್ಲೂ ಮಧ್ಯಪ್ರದೇಶದ ಭೂಪಾಲ್ ನಲ್ಲಿ ಎನ್ಎಸ್ಯುಐ ಕಾರ್ಯಕರ್ತರು ಚಪಾಕ್ ಟಿಕೆಟ್ ಹಂಚುವ ಮೂಲಕ ಚಿತ್ರದ ಬೆಂಬಲಕ್ಕೆ ನಿಂತಿದ್ದಾರೆ.
5/ 9
ಇನ್ನೊಂದೆಡೆ ಬಿಜೆಪಿ ಕಾರ್ಯಕರ್ತರು ಕೂಡ ಅಜಯ್ ದೇವಗನ್ ನಟನೆಯ ತಾನ್ಹಾಜಿ ಸಿನಿಮಾದ ಟಿಕೆಟ್ಗಳನ್ನು ಉಚಿತವಾಗಿ ನೀಡುತ್ತಿದ್ದಾರೆ.
6/ 9
ಎರಡು ಪಕ್ಷಗಳ ಕಾರ್ಯಕರ್ತರ ಜಗಳದಿಂದ ಮೂರನೆಯವರಿಗೆ ಲಾಭ ಎನ್ನುವಂತೆ ಪ್ರೇಕ್ಷಕರಿಗೆ ಉಚಿತವಾಗಿ ಎರಡು ಸಿನಿಮಾಗಳನ್ನು ನೋಡಿ ಎಂಜಾಯ್ ಮಾಡುತ್ತಿದ್ದಾರೆ.
7/ 9
ಚಪಾಕ್ ಸಿನಿಮಾವನ್ನು ಮೇಘನಾ ಗುಲ್ಜಾರ್ ನಿರ್ದೇಶನ ಮಾಡಿದ್ದು, ಚಿತ್ರದಲ್ಲಿ ದೀಪಿಕಾ ಮಾಲ್ತಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
8/ 9
ಈ ಚಿತ್ರವು ಆ್ಯಸಿಡ್ ದಾಳಿಗೆ ಒಳಗಾಗಿದ್ದ ಲಕ್ಷ್ಮಿ ಅಗರ್ವಾಲ್ ಎಂಬ ಯುವತಿಯ ಕಥೆ ತಿಳಿಸುತ್ತದೆ. ಲಕ್ಷ್ಮಿಗೆ 15 ವರ್ಷವಿದ್ದಾಗ ಪರಿಚಿತ ವ್ಯಕ್ತಿಯಿಂದ ಆಸಿಡ್ ದಾಳಿಗೊಳಗಾಗಿದ್ದರು.
9/ 9
ಆನಂತರ ಲಕ್ಷ್ಮಿ ಯಾವ ರೀತಿ ಯಾತನೆ ಅನುಭವಿಸಿದಳು, ಸಮಾಜ ಆ್ಯಸಿಡ್ ದಾಳಿಗೊಳಗಾದ ಯುವತಿಯನ್ನು ಹೇಗೆ ನೋಡುತ್ತಿದ್ದರು. ಆರೋಪಿ ವಿರುದ್ಧ ಲಕ್ಷ್ಮಿ ಹೇಗೆ ಹೋರಾಟ ಮಾಡಿದಳು ಎಂಬುದನ್ನು ತಿಳಿಯಲು ಚಪಾಕ್ ಸಿನಿಮಾ ನೋಡಲೇಬೇಕು.