ಲೇಡಿ ಸೂಪರ್ಸ್ಟಾರ್ ಎಂದೇ ಜನಪ್ರಿಯವಾಗಿರುವ ನಟಿ ನಯನತಾರಾ ಹಲವು ವರ್ಷಗಳಿಂದ ಸೌತ್ ಸಿನಿಮಾದ ಬಹುಬೇಡಿಕೆಯ ನಟಿಯಾಗಿದ್ದಾರೆ. ಮದುವೆ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಯನತಾರಾ ಬ್ಯುಸಿ ಆಗಿದ್ದಾರೆ.
2/ 8
ಸುಮಾರು 2 ದಶಕಗಳ ಸಿನಿಮಾ ಇಂಡಸ್ಟ್ರಿಯಲ್ಲಿರುವ ನಯನತಾರಾ ವಿವಿಧ ಭಾಷೆಗಳಲ್ಲಿ ಸೂಪರ್ ಸ್ಟಾರ್ ಗಳ ಜೊತೆ ಕೆಲಸ ಮಾಡಿದ್ದಾರೆ. ಚಿತ್ರರಂಗದಲ್ಲಿ ತನ್ನ ಪ್ರಯಾಣವು ಸುಲಭದ್ದಾಗಿರಲಿಲ್ಲ ಎಂದು ನಟಿ ನಯನತಾರಾ ಹೇಳಿದ್ದಾರೆ.
3/ 8
ಸಿನಿಮಾ ಇಂಡಸ್ಟ್ರಿಯಲ್ಲಿ ಬೆಳೆಯೋದು ಸುಲಭದ ಮಾತಲ್ಲ, ಎಲ್ಲಾ ಏರಿಳಿತಗಳು ತನಗೆ ಬಹಳಷ್ಟು ಕಲಿಸಿದೆ. ನಾನು ಕಲಿತದ್ದು ತುಂಬಾ ಇದೆ. ನಾನು ಮಾಡಿದ ತಪ್ಪುಗಳು ಏನೇ ಇರಲಿ, ಒಳ್ಳೆಯ ಮತ್ತು ಕೆಟ್ಟ ಹಂತಗಳನ್ನು ನಾನು ದಾಟಿದ್ದೇನೆ. ಈಗ ಎಲ್ಲವೂ ಚೆನ್ನಾಗಿದೆ ಎಂದು ನಯನತಾರಾ ಹೇಳಿದ್ದಾರೆ
4/ 8
ನಾನು 18-19 ವರ್ಷಗಳಿಂದ ಇಂಡಸ್ಟ್ರಿಯಲ್ಲಿ ಇದ್ದೇನೆ ಇದು ಅಷ್ಟು ಸುಲಭವಲ್ಲ. ಆದರೆ, ಅಭಿಮಾನಿಗಳ ಪ್ರೀತಿ ಹಾಗೂ ದೇವರ ಆಶೀರ್ವಾದ ನನ್ನ ಮೇಲಿದೆ ಎಂದಿದ್ದಾರೆ. ಇದೆಲ್ಲವನ್ನು ಪದಗಳಲ್ಲಿ ಜೋಡಿಸಿ ಹೇಗೆ ಹೇಳುವುದು ಕಷ್ಟ ಎಂದು ನಯನತಾರಾ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
5/ 8
ನಟಿ ನಯನತಾರಾ 2003 ರಲ್ಲಿ ಮಲಯಾಳಂ ಚಿತ್ರ 'ಮನಸ್ಸಿನಕ್ಕರೆ' ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಬಳಿಕ ತಮಿಳಿನ 'ಅಯ್ಯ' (2005), ತೆಲುಗಿನ 'ಲಕ್ಷ್ಮಿ' (2006) ಮತ್ತು ಕನ್ನಡದ 'ಸೂಪರ್' (2010) ಸಿನಿಮಾ ಮೂಲಕ ಬಹು ಭಾಷೆಯ ನಟಿಯಾಗಿ ಮಿಂಚಿದ್ದಾರೆ.
6/ 8
ಶಾರುಖ್ ಖಾನ್ ಅವರ ಪ್ಯಾನ್-ಇಂಡಿಯಾ ಚಿತ್ರ 'ಜವಾನ್' ಮೂಲಕ ಬಾಲಿವುಡ್ ಗೆ ಕಾಲಿಡಲಿದ್ದಾರೆ. ತಮ್ಮ ಮೊದಲ ಗುರಿ ಅಂದ್ರೆ ಉತ್ತಮ ಕಥೆಗಳೊಂದಿಗೆ ಪ್ರೇಕ್ಷಕರನ್ನು ರಂಜಿಸುವುದು ಎಂದು ನಟಿ-ನಿರ್ಮಾಪಕಿ ನಯನತಾರಾ ಹೇಳಿದ್ದಾರೆ.
7/ 8
ನಯನತಾರಾ ಮತ್ತು ಅವರ ನಿರ್ದೇಶಕ ಪತಿ ವಿಘ್ನೇಶ್ ಶಿವನ್ 2021ರಲ್ಲಿ ತಮ್ಮ ರೌಡಿ ಪಿಕ್ಚರ್ಸ್ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿದ್ದಾರೆ.
8/ 8
ನಾವೇ ಚಿತ್ರವನ್ನು ನಿರ್ಮಿಸಲಿ ಅಥವಾ ಯಾವ ಸಿನಿಮಾದಲ್ಲಿ ನಾನು ನಟಿಸಿದ್ರು, ಒಳ್ಳೆಯ ಚಿತ್ರಗಳನ್ನು ಮಾಡಲು ಪ್ರಯತ್ನಿಸುತ್ತೇನೆ ಎಂದು ನಟಿ ನಯನತಾರಾ ಹೇಳಿದ್ದಾರೆ.