Nora Fatehi: ಕೆನಡಾದಲ್ಲಿ ಹುಟ್ಟಿ ಭಾರತೀಯ ಡ್ಯಾನ್ಸ್ ಪ್ರೇಮಿಗಳ ಹಾಟ್ ಫೇವರೇಟ್ ಆದ ದಿಲ್ಬರ್ ಚೆಲುವೆ
ನೋರಾ ಫತೇಹಿ ಅವರು ಕೆನಡಾ ಪ್ರಜೆ. ಡ್ಯಾನ್ಸ್ ಮಾಡಲು ಅವಕಾಶವೇ ಇಲ್ಲದ ಮೊರಕ್ಕೋದ ಸಾಂಪ್ರದಾಯಿಕ ಕುಟುಂಬದಲ್ಲಿ ಹುಟ್ಟಿದ ಇವರು ಈಗ ಇಂಡಿಯನ್ ಡ್ಯಾನ್ಸ್ ಪ್ರಿಯರ ಹೃದಯದಲ್ಲಿ ಬೆಚ್ಚಗೆ ಕುಳಿತಿದ್ದಾರೆ.
ನಟಿ ನೋರಾ ಫತೇಹಿ ಅವರ ಪ್ರತಿ ಡ್ಯಾನ್ಸ್ ಮೂವ್ ಅವರ ಗೆಲುವಿನ ಕಥೆಯನ್ನು ಹೇಳುತ್ತದೆ. ಪ್ರಸಿದ್ಧ ರಿಯಾಲಿಟಿ ಶೋ ಜಡ್ಜ್ ಸೀಟ್ನಲ್ಲಿ ಕುಳಿತು ಮಿಂಚುತ್ತಿದ್ದ ನಟಿಗೆ ಒಂದು ಕಾಲದಲ್ಲಿ ಮನೆಯೊಳಗೇ ಡ್ಯಾನ್ಸ್ ಮಾಡುವುದಕ್ಕೆ ಅವಕಾಶವಿರಲಿಲ್ಲ.
2/ 16
ಹಲವು ವರ್ಷಗಳ ನಿರಂತರ ಹೋರಾಟದಿಂದ ನೋರಾ ಫತೇಹಿ ಬಾಲಿವುಡ್ನಲ್ಲಿ ನೆಲೆವೂರಲು ಸಾಧ್ಯವಾಯಿತು. 1992 ಫೆಬ್ರವರಿ 6ರಂದು ರಲ್ಲಿ ಕೆನಡಾದ ಟೊರಂಟೋದಲ್ಲಿ ಹುಟ್ಟಿದ್ದರು ನಟಿ ನೋರಾ ಫತೇಹಿ.
3/ 16
ಸಂಪ್ರದಾಯಿಕ ಮನೆಯಲ್ಲಿ ಹುಟ್ಟಿದವರು ನೋರಾ. ನಟಿಗೆ 11 ವರ್ಷವಿದ್ದಾಗ ಪೋಷಕರು ವಿಚ್ಛೇದಿತರಾದರು. ನೋರಾ ಫತೇಹಿಯನ್ನು ಬೆಳೆಸಿದ್ದು ಅವರ ಅಮ್ಮ.
4/ 16
ಚಿಕ್ಕ ಮಗುವಾಗಿದ್ದಾಗಿನಿಂದಲೂ ನೋರಾಗೆ ಮನೆಯಲ್ಲಿ ಡ್ಯಾನ್ಸ್ ಮಾಡಲು ಬಿಡುತ್ತಿರಲಿಲ್ಲ. ನಟಿ ರಹಸ್ಯವಾಗಿ ಡ್ಯಾನ್ಸ್ ಮಾಡುತ್ತಿದ್ದರು.
5/ 16
ನಟಿಗೆ ಯಾವಾಗಲೂ ತಾನು ಏನಾಗಬೇಕು, ಏನು ಮಾಡಬೇಕು ಎನ್ನುವುದರ ಬಗ್ಗೆ ಯಾವಾಗಲೂ ಗೊಂದವಿತ್ತಂತೆ. ಆದರೆ ತನಗೆ ಡ್ಯಾನ್ಸ್ ಮಾಡೋದಂದ್ರೆ ಇಷ್ಟ ಎನ್ನುವುದು ಮಾತ್ರ ನೋರಾಗೆ ಸ್ಪಷ್ಟವಾಗಿ ಗೊತ್ತಿತ್ತು.
6/ 16
ನನಗೆ ಡ್ಯಾನ್ಸ್ ಮಾಡೋದು ಇಷ್ಟ, ಸ್ಟೇಜ್ಗೆ ಹೋಗೋದು ಇಷ್ಟ, ಶೋ ಕೊಡೋದು ಇಷ್ಟ ಎಂದಿದ್ದಾರೆ ನೋರಾ. ಅವರು ಯಾವ ಭಾಷೆಯ ಹಾಡು, ಯಾವ ರೀತಿಯ ಡ್ಯಾನ್ಸ್ ಎನ್ನುವುದನ್ನು ತಲೆಕೆಡಿಸಿಕೊಳ್ಳುತ್ತಿರಲಿಲ್ಲವಂತೆ.
7/ 16
ತುಂಬಾ ತೆಳ್ಳಗಿದ್ದಿ ಎಂದು ಅವರನ್ನು ಮಕ್ಕಳು ಶಾಲೆಯಲ್ಲಿ ತಮಾಷೆ ಮಾಡಿ ನಗುತ್ತಿದ್ದರು ಎಂದು ಅವರು ನೆನಪಿಸಿಕೊಂಡಿದ್ದಾರೆ. ನಟಿಗೆ 13 ವರ್ಷ ಆದಾಗ ಅವರ ತಾಯಿ ಮರುವಿವಾಹವಾಗಿ ಅವರು ಸೌದಿ ಅರೆಬಿಯಾಗೆ ಹೋದರು.
8/ 16
16 ವರ್ಷದಲ್ಲಿ ನೋರಾ ಕೆನಡಾಗೆ ಮರಳಿದರು. ಅಲ್ಲಿ ತಂದೆಯ ಜೊತೆ ಒಂದು ವರ್ಷ ಇದ್ದರು. ಆದರೆ ಇದು ಸರಿ ಬರದೆ ನಂತರ ಸಹೋದರನ ಜೊತೆಗಿದ್ದರು.
9/ 16
ತನ್ನ ಹೈಸ್ಕೂಲ್ ಪಕ್ಕ ಇದ್ದ ಮಾಲ್ನಲ್ಲಿ ರೀಟೆಲ್ ಸೇಲ್ಸ್ ಸಹಾಯಕಿಯಾಗಿ ನೋರಾ ಕೆಲಸ ಮಾಡಲಾರಂಭಿಸಿದರು. ಪುರುಷರ ಬಟ್ಟೆ ಅಂಗಡಿಯಲ್ಲಿ ಸೇಲ್ಸ್ ಗರ್ಲ್ ಆಗಿದ್ದರು. ರೆಸ್ಟೋರೆಂಟ್, ಬಾರ್, ಶವರ್ಮಾ ಪಾಯಿಂಟ್ಗಳಲ್ಲಿ ವೈಟ್ರೆಸ್ ಆಗಿ ಕೆಲಸ ಮಾಡಿದರು.
10/ 16
21ನೇ ವಯಸ್ಸಿನಲ್ಲಿ ಮಾಡೆಲಿಂಗ್ ಪ್ರಯತ್ನಿಸಿದರು. ಆಗ ಯಾರೋ ಒಬ್ಬರು ನೋರಾ ಭಾರತಕ್ಕೆ ಬರಲು ರೆಡಿ ಇದ್ದಾಳಾ ಎಂದು ಕೇಳುತ್ತಾರೆ. ಈ ಮೂಲಕ ಅವರು ಭಾರತಕ್ಕೆ ಬರುತ್ತಾರೆ.
11/ 16
ಭಾರತದಲ್ಲಿ ತನ್ನ ಬದುಕು ಭಾರೀ ಅದ್ಧೂರಿಯಾಗಿರಲಿದೆ ಎಂದುಕೊಂಡಿದ್ದರು. ತಾನು ಬಾಲಿವುಡ್ಗೆ ಹೋಗುತ್ತಿದ್ದು ಅಲ್ಲಿ ಹೈಫೈ ಬದುಕು ಜೀವಿಸುತ್ತೇನೆ ಎಂದುಕೊಂಡಿದ್ದರು. ಆದರೆ ಇಲ್ಲಿ ಬಂದಾಗ ಭಾಷೆಯಿಂದ ಹಿಡಿದು ಎಲ್ಲವೂ ಅವರಿಗೆ ಸಮಸ್ಯೆ ಹಾಗೂ ಸವಾಲಾಗಿತ್ತು.
12/ 16
ಭಾರತಕ್ಕೆ ಬಂದಾಗ ನನ್ನ ಬದುಕಿನ ದೊಡ್ಡ ಶಾಕ್ ನನಗೆ ಸಿಕ್ಕಿತು. ಹಿಂದಿ ಮಾತನಾಡದ್ದಕ್ಕೆ ಅವರನ್ನು ತಮಾಷೆ ಮಾಡಲಾಗಿತ್ತು. ಅವರು ಹಿಂದಿ ಡೈಲಾಗ್ ಹೇಳಿದಾಗ ಅಲ್ಲಿದ್ದವರು ಹೈಫೈ ಕೊಟ್ಟು ನಗುತ್ತಿದ್ದರು ಎಂದಿದ್ದಾರೆ.
13/ 16
22ನೇ ವರ್ಷದಲ್ಲಿ ನೋರಾಗೆ ರೋರ್ : ಟೈಗರ್ಸ್ ಆಫ್ ಸುಂದರ್ಬನ್ಸ್ಗನಲ್ಲಿ ಅವಕಾಶ ಸಿಕ್ಕಿತು. ನಟಿ ನಂತಗರ ಬಾಹುಬಲಿ ಪಾರ್ಟ್1 ರಲ್ಲಿಯೂ ಕಾಣಿಸಿಕೊಂಡರು. ನಂತರ ಬಿಗ್ಬಾಸ್ಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿಕೊಟ್ಟರು.
14/ 16
ಆದರೆ ಮೂರು ವಾರದಲ್ಲಿಯೇ ಎಲಿಮಿನೇಟ್ ಆದರು. ದಿಲ್ಬರ್ ಹಾಡಿನ ಮೂಲಕ ನೋರಾ ದಿಢೀರ್ ಫೇಮಸ್ ಆದರು. ಜಾನ್ ಅಬ್ರಹಾಂ ಅವರ ಸತ್ಯಮೇವ ಜಯತೆ ಅವರಿಗೆ ಹೊಸ ಬ್ರೇಕ್ ಕೊಟ್ಟಿತು.
15/ 16
ಈ ಹಾಡು 24 ಗಂಟೆಯಲ್ಲಿ 21 ಮಿಲಿಯನ್ ವ್ಯೂಸ್ ಗಳಿಸಿ ದಾಖಲೆ ಬರೆಯಿತು. ನಂತರ ನೋರಾ ಬೆಲ್ಲಿ ಡ್ಯಾನ್ಸ್ನಿಂದಾಗಿ ಫೇಮಸ್ ಆದರು. ನಂತರ ನಾಚ್ ಮೇರಿ ರಾನಿ ಸಾಂಗ್ ಮಾಡಿದರು. 30ನೇ ವರ್ಷಕ್ಕೆ ಬಾಲಿವುಡ್ ಸ್ಟಾರ್ ಆದರು.
16/ 16
ಫಿಫಾ ಫ್ಯಾನ್ಸ್ ಫೆಸ್ಟಿವಲ್ ಇವೆಂಟ್ನಲ್ಲಿ ಭಾಗವಹಿಸಿದ ಮೊದಲ ಭಾರತೀಯಳೆಂಬ ಹೆಗ್ಗಳಿಕೆ ನೋರಾಗೆ ಸಿಕ್ಕಿದೆ. ನೋರಾ ಕೆನಡಾದವರು, ಆದರೆ ಭಾರತೀಯರ ಮಿಡಿತವನ್ನು ಅರಿತ ಅಧ್ಬುತ ಡ್ಯಾನ್ಸರ್.