ಐಟಂ ಸಾಂಗ್ಗಳಿಂದಲೇ ಸಖತ್ ಫೇಮಸ್ ಆಗಿರುವ ನೋರಾ ಫತೇಹಿ ತಮ್ಮ ಇತ್ತೀಚಿನ ಪೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋಗಳನ್ನ ಕಂಡ ಪಡ್ಡೆ ಹೈಕ್ಳು ಈಕೆಯ ಮೈಮಾಟಕ್ಕೆ ಫಿದಾ ಆಗಿದ್ದಾರೆ.
2/ 9
ಮಿನುಗುವ ಲೆಹೆಂಗಾದಲ್ಲಿ ನೋರಾ ಫತೇಹಿ ಫೋಟೋ ಶೂಟ್ ಮಾಡಿಸಿದ್ದಾರೆ. ಈ ಕಾಸ್ಟೂಮ್ನಲ್ಲಿ ಸಖತ್ ಹಾಟ್ ಮತ್ತು ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದಾರೆ.
3/ 9
ಬಾಲಿವುಡ್ನಲ್ಲಿ ಇತ್ತೀಚೆಗೆ ಭಾರಿ ಸದ್ದು ಮಾಡುತ್ತಿದ್ದಾರೆ ನಟಿ ನೋರಾ ಫತೇಹಿ. ಮೂಲತಃ ಕೆನಡಾದವರಾದ ನೋರಾ ಪ್ರಸ್ತುತ ಹಿಂದಿ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ.
4/ 9
ನೋರಾ ಫತೇಹಿ ಹಾಡುಗಳು ಯೂಟ್ಯೂಬ್ನಲ್ಲಿ ಕೋಟ್ಯಂತರ ಬಾರಿ ವೀಕ್ಷಣೆ ಕಾಣುತ್ತವೆ. ಹಿಂದಿ ಮಾತ್ರವಲ್ಲದೆ ದಕ್ಷಿಣ ಭಾರತದ ಚಿತ್ರರಂಗದಲ್ಲೂ ನೋರಾ ನಟಿಸಿದ್ದಾರೆ.
5/ 9
ಭಾರತೀಯ ಚಿತ್ರರಂದಗ ಬಿಗ್ ಹಿಟ್ ಬಾಹುಬಲಿ ಸಿನಿಮಾದ 'ಮನೋಹರಿ..' ಹಾಡಿನ ಮೂಲಕ ನೋರಾಗೆ ದೊಡ್ಡ ಬ್ರೇಕ್ ಸಿಕ್ಕಿತ್ತು.
6/ 9
ಇದಾದ ಬಳಿಕ ಹಲವಾರು ಐಟಂ ಸಾಂಗ್ನಲ್ಲಿ ನಟಿಸಿ, ಬಾಲಿವುಡ್ನಲ್ಲಿ ಬಹುಬೇಡಿಕೆಯ ಐಟಂ ಡಾನ್ಸರ್ ಆಗಿ ಗುರುತಿಸಿಕೊಂಡಿದ್ದಾರೆ.
7/ 9
'ದಿಲ್ಬರ್ ದಿಲ್ಬರ್....' ಹಾಡಿಗೆ 67.8 ಕೋಟಿ ವೀವ್ಸ್ ಪಡೆದುಕೊಂಡಿದೆ. ಇನ್ನೂ ‘ಓ ಸಾಕಿ ಸಾಕಿ..' ಸಾಂಗ್ 33 ಕೋಟಿ ಬಾರಿ ವೀಕ್ಷಣೆಗೊಂಡಿದೆ.
8/ 9
ಬರೀ ಬಾಲಿವುಡ್ನಲ್ಲಿಅಷ್ಟೇ ಅಲ್ಲದೇ ನೋರಾ ಡ್ಯಾನ್ಸ್ ತೆಲುಗು, ತಮಿಳು, ಮಲಯಾಳಂ ಚಿತ್ರರಂಗದಲ್ಲೂ ಬಹು ಬೇಡಿಕೆ ಹೊಂದಿದ್ದಾರೆ.
9/ 9
ಈ ಹಿಂದೆ ನೋರಾ ಫತೇಹಿ 2015ರಲ್ಲಿ ಹಿಂದಿ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಒಟ್ಟು 84 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದರು.