Urfi Javed: ಅರೆಬರೆ ಡ್ರೆಸ್ ಹಾಕಿ ಓಡಾಡೋದ್ಯಾಕೆ ಉರ್ಫಿ? ಪೊಲೀಸರ ಬಳಿ ಏನಂದ್ರು ನಟಿ?
ನಟಿ ಉರ್ಫಿ ಜಾವೇದ್ ಅಂಬೋಲಿ ಪೊಲೀಸ್ ಠಾಣೆಗೆ ವಿಚಾರಣೆಗೆ ತೆರಳಿದ್ದರು. ಅಶ್ಲೀಲ ಬಟ್ಟೆಗಳನ್ನು ಧರಿಸಿ ತನ್ನನ್ನು ತಾನು ಬಹಿರಂಗಪಡಿಸಿದ ಆರೋಪ ನಟಿಯ ಮೇಲಿದೆ. ಪೊಲೀಸ್ ವಿಚಾರಣೆಯಲ್ಲಿ ಉರ್ಫಿ ಜಾವೇದ್ ಇದಕ್ಕೆ ಏನೆಂದು ಸ್ಪಷ್ಟನೆ ಕೊಟ್ಟಿದ್ದಾರೆ?
ಬಿಜೆಪಿ ನಾಯಕಿ ಚಿತ್ರಾ ವಾಘ್ ಅವರ ಪೊಲೀಸ್ ದೂರಿನ ಭಾಗವಾಗಿ ಉರ್ಫಿ ಜಾವೇದ್ ಅವರನ್ನು ಅಂಬೋಲಿ ಪೊಲೀಸರು ವಿಚಾರಣೆಗೆ ಕರೆದಿದ್ದಾರೆ.
2/ 8
ನೋಟಿಸ್ ನಂತರ ಉರ್ಫಿ ಜಾವೇದ್ ವಿಚಾರಣೆಗೆ ಬಂದರು. ಉರ್ಫಿಯನ್ನು ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು.
3/ 8
ಈ ಎರಡು ಗಂಟೆಯ ವಿಚಾರಣೆಯಲ್ಲಿ ಉರ್ಫಿ ಹೇಳಿದ್ದೇನು ಎಂದು ಎಲ್ಲರೂ ಆಶ್ಚರ್ಯಪಟ್ಟಿದ್ದರು. ನಟಿಯಲ್ಲಿ ಏನು ಪ್ರಶ್ನೆ ಕೇಳಲಾಗಿತ್ತು?
4/ 8
ಪೊಲೀಸರ ತನಿಖೆಯ ವೇಳೆ ಉರ್ಫಿ ಜಾವೇದ್ ಅವರು ನಿರಾಳವಾಗಿರುವುದು ಕಂಡುಬಂತು. ಅವರು ಭಯಬಿದ್ದಂತೆ ಕಂಡುಬರಲಿಲ್ಲ.
5/ 8
ಉರ್ಫಿ ಅವರು ನಾನು ಭಾರತೀಯಳು, ನನ್ನ ಆಯ್ಕೆಯ ಬಟ್ಟೆಗಳನ್ನು ಧರಿಸಲು ನನಗೆ ಸಂಪೂರ್ಣ ಹಕ್ಕಿದೆ. ಭಾರತದ ಸಂವಿಧಾನ ನನಗೆ ಆ ಹಕ್ಕನ್ನು ನೀಡಿದೆ ಎಂದಿದ್ದಾರೆ.
6/ 8
ನನ್ನ ಕೆಲಸಕ್ಕೆ ತಕ್ಕಂತೆ ನಾನು ಈ ಬಟ್ಟೆಗಳನ್ನು ಧರಿಸುತ್ತೇನೆ. 'ನಾನು ಫೋಟೋ ಶೂಟ್ ಮಾಡುತ್ತೇನೆ. ಕೆಲವೊಮ್ಮೆ ಕೆಲಸದ ಗಡಿಬಿಡಿಯಲ್ಲಿ ಬಟ್ಟೆ ಬದಲಾಯಿಸಲು ಸಮಯ ಸಿಗುವುದಿಲ್ಲ ಎಂದಿದ್ದಾರೆ.
7/ 8
ನನಗೆ ಬಟ್ಟೆ ಬದಲಾಯಿಸಲು ಸಮಯವಿಲ್ಲ. ಆದ್ದರಿಂದ ನಾನು ಹಾಗೆ ಹೋಗುತ್ತೇನೆ. ನಂತರ ಛಾಯಾಗ್ರಾಹಕರು ಹೊರಗೆ ಬಂದು ಫೋಟೋಗಳನ್ನು ತೆಗೆದುಕೊಳ್ಳುತ್ತಾರೆ. ಅವು ವೈರಲ್ ಆಗುತ್ತವೆ ಎಂದಿದ್ದಾರೆ.
8/ 8
ನನಗೆ ಬಟ್ಟೆ ಬದಲಾಯಿಸಲು ಸಮಯವಿಲ್ಲ. ಆದ್ದರಿಂದ ನಾನು ಹಾಗೆ ಹೋಗುತ್ತೇನೆ. ನಂತರ ಛಾಯಾಗ್ರಾಹಕರು ಹೊರಗೆ ಬಂದು ಫೋಟೋಗಳನ್ನು ತೆಗೆದುಕೊಳ್ಳುತ್ತಾರೆ. ಅವು ವೈರಲ್ ಆಗುತ್ತವೆ ಎಂದಿದ್ದಾರೆ.