ಕನ್ನಡ ಕಿರುತೆರೆ ಮೂಲಕ ಖ್ಯಾತಿ ಗಳಿಸಿದ ನಟಿ ನಿವೇದಿತಾ ಗೌಡ ಅವರು ಈಗ ಎಲ್ಲಿದ್ದಾರೆ ಗೊತ್ತೇ? ಬಿಗ್ಬಾಸ್ ಸುಂದರಿ ಸದ್ಯ ಸೋಲೋ ಟ್ರಿಪ್ ಎಂಜಾಯ್ ಮಾಡುತ್ತಿದ್ದಾರೆ.
2/ 10
ನಟಿ ಬಾಲಿಗೆ ಸಿಂಗಲ್ ಆಗಿ ಟ್ರಿಪ್ ಹೋಗಿದ್ದಾರೆ. ಸ್ವಲ್ಪ ಹಿಂದೆ ಚಂದನ್ ಶೆಟ್ಟಿ ಸೋಲೋ ಟ್ರಿಪ್ ಹೋಗಿದ್ದರು. ಈಗ ನಿವೇದಿತಾ ಒಬ್ಬರೇ ಓಡಾಡಿಕೊಂಡು ಎಂಜಾಯ್ ಮಾಡುತ್ತಿದ್ದಾರೆ.
3/ 10
ನಟಿ ತಮ್ಮ ಟ್ರಿಪ್ನಿಂದ ಚಂದದ ಫೋಟೊ ಹಾಗೂ ವಿಡಿಯೋಗಳನ್ನು ಅಭಿಮಾನಿಗಳ ಜೊತೆ ಶೇರ್ ಮಾಡುತ್ತಿದ್ದಾರೆ. ಅದನ್ನು ನೋಡಿ ಅಭಿಮಾನಿಗಳು ಖುಷಿ ಪಡುತ್ತಿದ್ದಾರೆ.
4/ 10
ಈಗ ನಿವೇದಿತಾ ಗೌಡ ಅವರು ವಾಟರ್ ಬೇಬಿ ಡ್ರೆಸ್ನಲ್ಲಿ ಪೋಸ್ ಕೊಟ್ಟಿದ್ದಾರೆ. ಸಖತ್ ಬೋಲ್ಡ್ ಔಟ್ಫಿಟ್ನಲ್ಲಿ ಕಾಣಿಸಿಕೊಂಡ ನಟಿಯ ಲುಕ್ ಈಗ ವೈರಲ್ ಆಗಿದೆ.
5/ 10
ನಿವೇದಿತಾ ಫೋಟೋಗಳನ್ನು ಒಟ್ಟು ಮಾಡಿ ವಿಡಿಯೋ ಶೇರ್ ಮಾಡಿದ್ದು ಇದರಲ್ಲಿ ವೈಟ್ ಟಾಪ್ ಹಾಗೂ ಕಲರ್ಫುಲ್ ಬಾಟಮ್ ವೇರ್ನಲ್ಲಿ ಕಾಣಿಸಿಕೊಂಡಿದ್ದಾರೆ.
6/ 10
ನಟಿಯ ವಿಡಿಯೋಗೆ 37 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಆದರೆ ಸೋಲೋ ಟ್ರಿಪ್ ಹೋಗಿರುವ ನಿವೇದಿತಾ ಅವರ ಇಷ್ಟು ಬೋಲ್ಡ್ ಪಿಕ್ಸ್ ಕ್ಲಿಕ್ ಮಾಡಿದ್ದು ಯಾರು ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
7/ 10
ಆದರೆ ಈ ಫೋಟೋ ಕ್ಲಿಕ್ ಮಾಡಿದ್ದು ನಟಿಯ ಸೆಲ್ಫೀ ಸ್ಟಿಕ್. ಹೌದು ನಟಿ ಸೆಲ್ಫೀ ಸ್ಟಿಕ್ ಹಿಡಿದುಕೊಂಡು ಅದರಿಂದಲೇ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
8/ 10
ನಟಿ ನಿವೇದಿತಾ ಸೋಷಿಯಲ್ ಮೀಡಿಯಾದಲ್ಲಕಿ ಸಖತ್ ಆ್ಯಕ್ಟಿವ್ ಆಗಿದ್ದು 1 ಮಿಲಿಯನ್ಗೂ ಹೆಚ್ಚು ಫಾಲೋವರ್ಸ್ಗಳನ್ನು ಹೊಂದಿದ್ದಾರೆ.
9/ 10
ನಟಿ ಈವರೆಗೂ ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ಪೋಸ್ಟ್ಗಳನ್ನು ಶೇರ್ ಮಾಡಿದ್ದಾರೆ. ಅಭಿಮಾನಿಗಳ ಜೊತೆ ಸದಾ ಸಂಪರ್ಕದಲ್ಲಿರುತ್ತಾರೆ ನಟಿ.
10/ 10
ನಟಿ ಇನ್ಸ್ಟಾಗ್ರಾಮ್ನಲ್ಲಿ ಒಬ್ಬರನ್ನು ಮಾತ್ರ ಫಾಲೋ ಮಾಡುತ್ತಾರೆ. ನಟಿ ಫಾಲೋ ಮಾಡೋದು ಚಂದನ್ ಶೆಟ್ಟಿ ಅವರನ್ನು ಮಾತ್ರ.