ಇತ್ತೀಚೆಗೆ ನಿವೇದಿತಾ ಗೌಡ ಗರ್ಭಿಣಿ ಎಂದು ಸುದ್ದಿಯಾಗಿತ್ತು. ನಂತರ ಅದು ಸುಳ್ಳು ಎಂದೂ ಗೊತ್ತಾಗಿತ್ತು. ಈಗ ಮತ್ತೆ ಗುಡ್ನ್ಯೂಸ್ ಕೊಟ್ಟಿದ್ದಾರೆ ಬಿಗ್ಬಾಸ್ ನಿವಿ.
2/ 7
ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಪೋಷಕರಾಗುತ್ತಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದಂತೆ ಚಂದನ್ ಶೆಟ್ಟಿ ಸದ್ಯ ಆ ಪ್ಲಾನ್ ಇಲ್ಲ ಎಂದಿದ್ದರು.
3/ 7
ಆದರೆ ನಿವಿ ಈಗ ಮತ್ತೊಂದು ಸ್ಟೇಟ್ಮೆಂಟ್ ಕೊಟ್ಟಿದ್ದಾರೆ. ಗಿಚ್ಚಿ ಗಿಲಿಗಿಲಿ-2ನಲ್ಲಿ ಸ್ಪರ್ಧಿಸುತ್ತಿರುವ ನಿವಿ ವೇದಿಕೆಯ ಮೇಲೆ ಸ್ಕಿಟ್ ಮುಗಿದು ತೀರ್ಪುಗಾರರ ಬಳಿ ಮಾತನಾಡುವಾಗ ತಾನು ತಾಯಿಯಾಗುತ್ತಿದ್ದೇನೆ ಎಂದಿದ್ದಾರೆ.
4/ 7
ನಿವೇದಿತಾ ಒಂದು ತಟ್ಟೆಯಲ್ಲಿ ಮಾವಿನಕಾಯಿ, ಹುಣಸೆ ಹಣ್ಣು ತಂದು ವೇದಿಕೆಯ ಮೇಲೆ ಇಟ್ಟರು. ನಿರೂಪಕ ನಿರಂಜನ್ ಇದೆಲ್ಲಾ ಏನು ಎಂದು ಪ್ರಶ್ನೆ ಮಾಡಿದ್ದಾರೆ. ಈಗ ಇದೆಲ್ಲಾ ತಂದಿರುವುದು ಯಾಕೆಂದು ಶ್ರುತಿ ಕೇಳಿದಾಗ `ನಾನು ಎರಡು ತಿಂಗಳ ಪ್ರೆಗ್ನೆಂಟ್’ ಎಂದು ನಿವೇದಿತಾ ಗೌಡ ಹೇಳಿದ್ದಾರೆ.
5/ 7
ಈ ಸೀಸನ್ನಲ್ಲಿ ನಾನು ತುಂಬಾ ಗ್ಲೋ ಆಗಿ ಕಾಣುತ್ತೀದ್ದೀನಿ ಎಂದು ಸಾಧು ಸರ್ ಹೇಳಿದ್ರು. ಅದಕ್ಕೆ ಇದುವೇ ಕಾರಣ ಎಂದು ಹೇಳಿದ್ದಾರೆ. ಇದು ಅಲ್ಲಿ ಕುಳಿತಿದ್ದ ಎಲ್ಲರಿಗೂ ಅಚ್ಚರಿ ಮೂಡಿಸಿದೆ.
6/ 7
ನನಗೆ ತಲೆ ಸುತ್ತು, ವಾಂತಿ ಆಗುತ್ತದೆ. ಬೆಳಗ್ಗೆ ಎಳಲು ಆಗುವುದಿಲ್ಲ. ನಾನು ಪ್ರೆಗ್ನೆಂಟ್ ಎಂದು ನಿವೇದಿತಾ ಶೋ ವೇದಿಕೆಯಲ್ಲಿ ಹೇಳಿದ್ದಾರೆ.
7/ 7
ಆದರೆ ಇದನ್ನು ನೋಡಿದ ನೆಟ್ಟಿಗರು ಮಾತ್ರ ಪ್ರಚಾರಕ್ಕಾಗಿ ಏನೇನ್ ಮಾಡ್ತಾರಪ್ಪಾ ಎಂದು ಗೊಣಗುತ್ತಿದ್ದಾರೆ. ಅಸಲಿ ವಿಚಾರ ಏನೆನ್ನುವುದು ವಾರಾಂತ್ಯದ ಎಪಿಸೋಡ್ನಲ್ಲಿ ರಿವೀಲ್ ಆಗಲಿದೆ.