ನಿತ್ಯಾ ಮೆನನ್ ಎಷ್ಟು ಚೆನ್ನಾಗಿ ಹಾಡುತ್ತಾರೆ ಅಂತ ಅವರು ಹಾಡಿರುವ ವಿಡಿಯೋಗಳನ್ನು ನೋಡಿದರೆ ಹೇಳಬಹುದು. ನಿತ್ಯಾ ಮೆನನ್ ಅವರು ಹಾಡಿರುವ ವಿಡಿಯೋಗಳು ಸಖತ್ ವೈರಲ್ ಆಗಿದ್ದು, ನಿತ್ಯಾ ಅವರ ಸುಮಧುರ ಕಂಠಸಿರಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಹೀಗಿರುವಾಗಲೇ ನಿತ್ಯಾ ಮೆನನ್ ಸಿನಿಮಾವೊಂದರಲ್ಲಿ ಗಾಯಕಿಯಾಗಿ ನಟಿಸುತ್ತಿದ್ದಾರೆ. ಐದು ಭಾಷೆಗಳಲ್ಲಿ ತೆರೆಕಾಣಲಿರುವ ಗಮನಂ ಸಿನಿಮಾದಲ್ಲಿ ಗಾಯಕಿಯಾಗಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗಮನಂ ಸಿನಿಮಾವನ್ನು ಸುಜನ್ ರಾವ್ ನಿರ್ದೇಶಿಸುತ್ತಿದ್ದಾರೆ. ಗಮನಂ ಸಿನಿಮಾ ತೆಲುಗು, ತಮಿಳು, ಹಿಂದಿ, ಮಲಯಾಳಂ ಹಾಗೂ ಕನ್ನಡದಲ್ಲೂ ತೆರೆ ಕಾಣಲಿದೆ. ಈ ಸಿನಿಮಾಗೆ ಇಳಯರಾಜ ಸಂಗೀತ ನೀಡಿದ್ದು, ನಿತ್ಯಾ ಅವರೊಂದಿಗೆ ಶ್ರೀಯಾ ಸರಣ್ ಸಹ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಿತ್ಯಾ ಮೆನನ್ ಸಿನಿಮಾಗಳ ಜೊತೆ ಸದ್ಯ ವೆಬ್ ಸರಣಿಗಳಲ್ಲೂ ನಟಿಸುತ್ತಿದ್ದಾರೆ. ಅವರ ಅಭಿನಯದ ಬ್ರೀತ್ ವೆಬ್ ಸರಣಿ ಇತ್ತೀಚೆಗಷ್ಟೆ ರಿಲೀಸ್ ಆಗಿದೆ. ನಟಿ ನಿತ್ಯಾ ಮೆನನ್ ನಟಿ ನಿತ್ಯಾ ಮೆನನ್ ನಟಿ ನಿತ್ಯಾ ಮೆನನ್ ನಟಿ ನಿತ್ಯಾ ಮೆನನ್ ನಟಿ ನಿತ್ಯಾ ಮೆನನ್