Nikhil Kumaraswamy: ರೈಡರ್ ನಿಖಿಲ್ ಕುಮಾರಸ್ವಾಮಿ ಕಡೆಯಿಂದ ಸಿಕ್ತು ಹೊಸ ಅಪ್ಡೇಟ್: ಯುವರಾಜನ ಹುಟ್ಟುಹಬ್ಬಕ್ಕೆ ಸಿಗಲಿದೆ ಭರ್ಜರಿ ಗಿಫ್ಟ್ ..!
Rider Movie Teaser: ಟಾಲಿವುಡ್ ನಿರ್ದೇಶಕ ವಿಜಯ್ ಕುಮಾರ್ ಕೊಂಡ ಆ್ಯಕ್ಷನ್ ಕಟ್ ಹೇಳುತ್ತಿರುವ ಹಾಗೂ ನಿಖಿಲ್ ಕುಮಾರಸ್ವಾಮಿ ನಾಯಕನಾಗಿ ನಟಿಸಿರುವ ಚಿತ್ರ ರೈಡರ್. ನಿಖಿಲ್ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಆದರೆ ಯುವರಾಜನ ಬಹು ನಿರೀಕ್ಷಿತ ಸಿನಿಮಾ ರೈಡರ್. ಈ ಚಿತ್ರ ಕುರಿತಾಗಿ ನಿಖಿಲ್ ಹೊಸ ಅಪ್ಡೇಟ್ ಕೊಟ್ಟಿದ್ದಾರೆ. (ಚಿತ್ರಗಳು ಕೃಪೆ: ನಿಖಿಲ್ ಕುಮಾರಸ್ವಾಮಿ ಇನ್ಸ್ಟಾಗ್ರಾಂ ಖಾತೆ)
News18 Kannada | January 13, 2021, 3:35 PM IST
1/ 10
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ.
2/ 10
ಹೊಸ ವರ್ಷಕ್ಕೆ ಮಡದಿ ರೇವತಿ ಜೊತೆಗಿನ ಲೆಟೆಸ್ಟ್ ಫೋಟೋ ಹಂಚಿಕೊಂಡಿದ್ದ ನಿಖಿಲ್ ತಮ್ಮ ಸಿನಿಮಾಗಳ ಬಗ್ಗೆ ಯಾವುದೇ ಅಪ್ಡೇಟ್ ಕೊಟ್ಟಿರಲಿಲ್ಲ.
3/ 10
ನಾಲ್ಕೈದು ಸಿನಿಮಾಗಳನ್ನು ಕೈಯಲ್ಲಿಟ್ಟುಕೊಂಡಿರುವ ನಿಖಿಲ್ ಈಗ ರೈಡರ್ ಸಿನಿಮಾದ ಕುರಿತಾಗಿ ಹೊಸ ವಿಷಯ ಹಂಚಿಕೊಂಡಿದ್ದಾರೆ.
4/ 10
ಇದೇ ತಿಂಗಳ 22ಕ್ಕೆ ನಿಖಿಲ್ ಹುಟ್ಟುಹಬ್ಬವಿದೆ. ಅದರ ಅಂಗವಾಗಿ ನಿಖಿಲ್ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ಕೊಡಲಿದ್ದಾರೆ.
5/ 10
ಹೌದು, ನಿಖಿಲ್ ಅಭಿನಯದ ರೈಡರ್ ಸಿನಿಮಾದ ಟೀಸರ್ ಜ.22ಕ್ಕೆ ರಿಲೀಸ್ ಆಗಲಿದೆ.
6/ 10
ಈ ವಿಷಯವನ್ನು ನಿರ್ದೇಶಕ ವಿಜಯ್ ಹಾಗೂ ನಿಖಿಲ್ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ.