ರೈಡರ್ ಸಿನಿಮಾದ ಹಿಂದೆ ಹಾಗೂ ಮುಂದೆ ಬಿಗ್ ಬಜೆಟ್ ಹಾಗೂ ಸ್ಟಾರ್ ನಟರ ಸಿನಿಮಾಗಳು ತೆರೆಗಪ್ಪಳಿಸುತ್ತಿವೆ. ಕ್ರಿಸ್ಮಸ್ಗೆ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ 83 ರಿಲೀಸ್ ಆದರೆ, ಡಿಸೆಂಬರ್ 31ಕ್ಕೆ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ತೆರೆಗೆ ಬರಲಿದೆ. ಇವುಗಳ ಜೊತೆಗೆ ಹಾಲಿವುಡ್ ಸಿನಿಮಾಗಳೂ ಕ್ರಿಸ್ಮಸ್ಗೆ ಲಗ್ಗೆ ಇಡುವ ಸಾಧ್ಯತೆ ಇದೆ.