ಜಾಗ್ವರ್ ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ನಿಖಿಲ್ ಕುಮಾರಸ್ವಾಮಿ 4 ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಎಲೆಕ್ಷನ್ ಬ್ಯುಸಿಯಲ್ಲಿದ್ದಾರೆ.
2/ 8
ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಶುಭಕೋರಿದ್ದಾರೆ. ನಿಖಿಲ್ ಕೈಯಲ್ಲಿ ಕೇಕ್ ಕತ್ತರಿಸಿ, ಸಿಹಿ ಹಂಚಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ.
3/ 8
ವಿಧಾನಸಭೆ ಎಲೆಕ್ಷನ್ ಬ್ಯುಸಿಯಲ್ಲಿರುವ ನಿಖಿಲ್, ರಾಮನಗರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಹುಟ್ಟುಹಬ್ಬದ ಸಂದರ್ಭದಲ್ಲಿ ಮಾತಾಡಿದ ನಿಖಿಲ್, ದೇಶದ ರಾಜಕಾರಣ ವ್ಯವಸ್ಥೆ ಬದಲಾವಣೆ ಆಗಬೇಕು ಎಂದು ಹೇಳಿದ್ದಾರೆ.
4/ 8
ಜನಪ್ರತಿನಿಧಿಗಳ ಮನಸ್ಥಿತಿ ಬದಲಾಗಬೇಕಿದ್ದು, ಜೊತೆಗೆ ಮತದಾರರ ಮನಸ್ಥಿತಿ ಬದಲಾಗಬೇಕು. ಜಾತಿಯ ವ್ಯಾಮೋಹ ತೊಲಗಬೇಕಿದೆ, ಕಷ್ಟಸುಖಕ್ಕೆ ಸ್ಪಂದಿಸುವವರ ಜೊತೆ ಯುವಕರು ಹೆಜ್ಜೆ ಹಾಕಬೇಕು ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
5/ 8
ರಾಜಕೀಯ ಹಾಗೂ ಸಿನಿಮಾ ಎರಡರಲ್ಲೂ ನಾನು ಸಕ್ರಿಯರಾಗಿರೋದಾಗಿ ಹೇಳಿದ್ದಾರೆ. ನಿಖಿಲ್ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ.
6/ 8
ಇನ್ನೂ 3 ಸಿನಿಮಾಗಳು ನನ್ನ ಲಿಸ್ಟ್ ನಲ್ಲಿದೆ. ಈಗ ಲಹರಿ ಸಂಸ್ಥೆ ಹಾಗೂ ಕೆ ಪಿ ಶ್ರೀಕಾಂತ್ ನಿರ್ಮಾಣದಲ್ಲಿ ಹೊಸ ಸಿನಿಮಾ ಅನೌನ್ಸ್ ಆಗಿದೆ.
7/ 8
ಸದ್ಯ ಚುನಾವಣೆ ಕೆಲಸಗಳಲ್ಲಿ ಬ್ಯುಸಿಯಾಗಿದ್ದೀನಿ. ಚುನಾವಣೆ ಮುಗಿದ ಮೇಲೆ ಮತ್ತೆ ಚಿತ್ರರಂಗಕ್ಕೆ ಬರುತ್ತೀನಿ. ಎಲ್ಲೂ ಹೋಗಲ್ಲ. ಸಿನಿಮಾಗಳನ್ನು ಮಾಡ್ತೀನಿ ಎಂದು
8/ 8
ಚಿತ್ರರಂಗ ಮತ್ತು ರಾಜಕಾರಣ ಎರಡರಲ್ಲೂ ನನ್ನ ಮೇಲೆ ಸಾಕಷ್ಟು ಜವಾಬ್ದಾರಿಗಳು ಇವೆ. ಅದನ್ನು ನಿಭಾಯಿಸುತ್ತೇನೆ. ಮುಂದೆ ಸಿನಿಮಾಗಳ ಬಗ್ಗೆ ಅಧಿಕೃತ ಅಪ್ಡೇಟ್ ಕೊಡುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.