Ugadi Celebration By Nikhil-Revathi: ವಿವಾಹದ ಸಮಯದಲ್ಲಿ ಸಪ್ತಪದಿ ತುಳಿಯುವಾಗ ಸುಖ ದುಖಃದಲ್ಲಿ ಸಮಾನವಾಗಿ ಪಾಲುದಾರರಾಗುತ್ತೇವೆ ಅಂತ ಭಾಷೆ ನೀಡುವುದು ಸಹಜ. ಆದರೆ ವಿವಾಹಕ್ಕೆ ಮೊದಲೇ ಬೇವು -ಬೆಲ್ಲ ಹಂಚಿಕೊಂಡು ಸುಖ-ದುಖಃದಲ್ಲಿ ಭಾಗಿಯಾಗುವ ಭರವಸೆಯನ್ನು ಒಬ್ಬರಿಗೊಬ್ಬರು ನೀಡಿದ್ದಾರೆ ನಿಖಿಲ್-ರೇವತಿ. (ಚಿತ್ರಗಳು ನಿಖಿಲ್ ಕುಮಾರಸ್ವಾಮಿ ಇನ್ಸ್ಟಾಗ್ರಾಂ ಖಾತೆ)
ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಎಲ್ಲ ಸರಿಯಾಗಿ ಇದ್ದಿದ್ದರೆ ಮುಂದಿನ ತಿಂಗಳು 17ಕ್ಕೆ ದಾಂಪತ್ಯ ಜೀವನಕ್ಕೆ ಕಾಲಿಡಬೇಕಿತ್ತು.
2/ 12
ಆದರೆ ಕೊರೋನಾ ಭೀತಿಯಿಂದಾಗಿ ಈ ಜೋಡಿಯ ವಿವಾಹ ಮುಂದಕ್ಕೆ ಹೋಗುವ ಎಲ್ಲ ಸಾಧ್ಯತೆ ಇದೆ.
3/ 12
ನಿನ್ನೆ ಈ ಜೋಡಿ ತಮ್ಮ ಮನೆಯಲ್ಲಿ ಬೇವು ಬೆಲ್ಲ ಹಂಚಿಕೊಳ್ಳುವ ಮೂಲಕ ಯುಗಾದಿಯನ್ನು ಸಂಭ್ರಮದಿಂದ ಆಚರಿಸಿದ್ದಾರೆ.
4/ 12
ಅದಕ್ಕೂ ಮೊದಲು ಪೂಜೆ ಮಾಡಿದ ನಿಖಿಲ್ ಅಮ್ಮನಿಂದ ಆಶೀರ್ವಾದ ಪಡೆದುಕೊಂಡಿದ್ದಾರೆ.
5/ 12
ಕೊರೋನಾದಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದರೆ ನಿಖಿಲ್ ವಿವಾಹ ಹೇಳಿದ ಸಮಯಕ್ಕೆ ನಡೆಯುತ್ತದೆ. ಇಲ್ಲವಾದಲ್ಲಿ ಅದು ಮುಂದಕ್ಕೆ ಹೋಗಬಹುದು. ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವಂತಿಲ್ಲ.