Niharika Konidela Marriage: ಚಿರಂಜೀವಿ ಅವರ ಸಹೋದರ ನಾಗಬಾಬು ಅವರ ಮಗಳು ನಿಹಾರಿಕಾ ಕೋಣಿದೇಲ ಹಾಗೂ ಚೈತನ್ಯ ಜೊನ್ನಲಗಡ್ಡ ವಿವಾಹ ಉದಯಪುರದಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ತಮ್ಮ ಮದುವೆಯಲ್ಲಿ ನಿಹಾರಿಕಾ ಕೋಣಿದೇಲ ಅಮ್ಮನ ನಿಶ್ಚಿತಾರ್ಥದ ಸೀರೆಯುಟ್ಟು ಸುದ್ದಿಯಾಗಿದ್ದಾರೆ. (ಚಿತ್ರಗಳು ಕೃಪೆ: ನಿಹಾರಿಕಾ ಕೋಣಿದೇಲ ಹಾಗೂ ಚಿರಂಜೀವಿ ಇನ್ಸ್ಟಾಗ್ರಾಂ ಖಾತೆ)
ನಿಹಾರಿಕಾ ಕೋಣಿದೇಲ ವಿವಾಹಕ್ಕೆ ಸಿದ್ಧತೆ ಜೋರಾಗಿದೆ. ಈಗಾಗಲೇ ಎರಡೂ ಕುಟುಂಬಗಳು ಉದಯಪುರ ತಲುಪಿದ್ದಾರೆ.
2/ 7
ಇನ್ನು, ಮದುವೆಗೆ ಮುನ್ನ ನಡೆಯುವ ಶಾಸ್ತ್ರದಲ್ಲಿ ಮದುಮಗಳು ನಿಹಾರಿಕಾ ತನ್ನ ಅಮ್ಮನ ಸೀರೆಯುಟ್ಟು ಎಲ್ಲರ ಗಮನ ಸೆಳೆದಿದ್ದಾರೆ.
3/ 7
32 ವರ್ಷಗಳ ಹಿಂದೆ ಅಮ್ಮ ಪದ್ಮಜಾ ತಮ್ಮ ನಿಶ್ಚಿತಾರ್ಥದಲ್ಲಿ ತೊಟ್ಟಿದ್ದ ಸೀರೆಯನ್ನು ಈಗ ನಿಹಾರಿಕಾ ಮದುಮಗಳಾದಾಗ ತೊಟ್ಟಿದ್ದಾರೆ.
4/ 7
ಈ ವಿಷಯವನ್ನು ಖುಷಿಯಿಂದ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಹೆಂಡತಿ ಈ ಸೀರೆಯಲ್ಲಿ ಸುಂದರವಾಗಿದ್ದಾರೆ ಎಂದು ಕಮೆಂಟ್ ಮಾಡಿರುವ ನಟ ನಾಗಬಾಬು ಮಗಳು ಏಂಜಲ್ನಂತಿದ್ದಾಳೆ ಎಂದಿದ್ದಾರೆ.
5/ 7
ವಿವಾಹಕ್ಕೆ ಮುನ್ನ ನಡೆಯುವ ಶಾಸ್ತ್ರಗಳ ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಿದ್ದಾರೆ ನಿಹಾರಿಕಾ ಕೋಣಿದೇಲ.