ಸಾಮಾಜಿಕ ಜಾಲತಾಣದಲ್ಲಿ ಆರಂಭವಾಯ್ತು ‘ನಟಸಾರ್ವಭೌಮ’ನ ಆಳ್ವಿಕೆ

ಪವನ್ ಒಡೆಯರ್ ಹಾಗೂ ಪುನೀತ್ ರಾಜ್​ಕುಮಾರ್​ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ‘ನಟಸಾರ್ವಭೌಮ’ ಚಿತ್ರದ ಡಬ್ಬಿಂಗ್ ಕೆಲಸಗಳು ಇತ್ತೀಚೆಗೆ ಪೂರ್ಣಗೊಂಡಿವೆ. ಶೀಘ್ರದಲ್ಲೇ ಸಿನಿಮಾ ಕೂಡ ರಿಲೀಸ್ ಆಗಲಿದೆಯಂತೆ. ಈವರೆಗೆ ಪುನೀತ್ ಕ್ಯಾಮಾರ ಹಿಡಿದಿರುವ ಪೋಸ್ಟರ್​ಗಳು ಮಾತ್ರ ಬಿಡುಗಡೆಗೊಂಡಿದ್ದವು. ಈಗ ಚಿತ್ರತಂಡ ರೊಮ್ಯಾಂಟಿಕ್ ಫೋಟೋಗಳನ್ನು ಹರಿಬಿಟ್ಟಿದೆ. ಪುನೀತ್ ರಾಜ್​ಕುಮಾರ್​-ರಚಿತಾ ರಾಮ್ ಹಾಗೂ ಪುನೀತ್-ಅನುಪಮಾ ಪರಮೇಶ್ವರನ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

  • News18
  • |
First published: