Kannada New Movies: ಮಕರ ಸಂಕ್ರಾಂತಿಯಂದು ಕನ್ನಡ ಹೊಸ ಸಿನಿಮಾಗಳ ಘೋಷಣೆ: ಒಂದೊಂದು ಅದ್ಭುತ!

'ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ' ಎಂಬ ಹೊಸ ಚಿತ್ರದಲ್ಲಿ ಡಾಲಿ ಧನಂಜಯ್ ಹಾಗೂ ಅದಿತಿ ಪ್ರಭುದೇವ ನಟಿಸುತ್ತಿದ್ದಾರೆ. ಈ ಚಿತ್ರದ ಪೋಸ್ಟ್​ ಕೂಡ ಬಿಡುಗಡೆಯಾಗಿದೆ. ಚಿತ್ರಕ್ಕೆ ಕುಶಾಲ್ ಗೌಡ ಅವರು ಆ್ಯಕ್ಷನ್​ ಕಟ್ ಹೇಳಿದ್ದು, ಇದಕ್ಕೂ ಮುನ್ನ 'ಕನ್ನಡಕ್ಕಾಗಿ ಒಂದನ್ನು ಒತ್ತಿ' ಚಿತ್ರವನ್ನು ನಿರ್ದೇಶಿಸಿದ್ದರು.

First published:

  • 18

    Kannada New Movies: ಮಕರ ಸಂಕ್ರಾಂತಿಯಂದು ಕನ್ನಡ ಹೊಸ ಸಿನಿಮಾಗಳ ಘೋಷಣೆ: ಒಂದೊಂದು ಅದ್ಭುತ!

    'ರತ್ನನ್ ಪ್ರಪಂಚ' ಸಿನಿಮಾ ಅದ್ಧೂರಿ ಹಿಟ್ ಆದ ಬಳಿಕ ಧನಂಜಯ್ ಎರಡನೇ ಬಾರಿ ಕೆಆರ್‌ಜಿ ಪ್ರೊಡಕ್ಷನ್ ಜೊತೆ ಕೈಜೋಡಿಸಿದ್ದು, 'ಹೊಯ್ಸಳ' ಹೆಸರಿನ ಸಿನಿಮಾ ಘೋಷಿಸಿದ್ದಾರೆ. ಈ ಸಿನಿಮಾದಲ್ಲಿ ಡಾಲಿ ಧನಂಜಯ್ ಪೊಲೀಸ್ ಪಾತ್ರದಲ್ಲಿ ನಟಿಸಲಿದ್ದಾರೆ. ಸಿನಿಮಾವನ್ನು ವಿಜಯ್ ಎನ್ ನಿರ್ದೇಶನ ಮಾಡುತ್ತಿದ್ದಾರೆ.

    MORE
    GALLERIES

  • 28

    Kannada New Movies: ಮಕರ ಸಂಕ್ರಾಂತಿಯಂದು ಕನ್ನಡ ಹೊಸ ಸಿನಿಮಾಗಳ ಘೋಷಣೆ: ಒಂದೊಂದು ಅದ್ಭುತ!

    ನಟ ಧನ್ವೀರ್‌ರ ಮೂರನೇ ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದೆ. ಸಿನಿಮಾಕ್ಕೆ 'ವಾಮನ' ಎಂಬ ಖಡಕ್​ ಹೆಸರು ಇಡಲಾಗಿದ್ದು, ಬಿಡುಗಡೆ ಆಗಿರುವ ಪೋಸ್ಟರ್‌ನಲ್ಲಿ ರಕ್ತ ಮೆತ್ತಿದ ಚಾಕು ಹಿಡಿದುಧನ್ವೀರ್ ಕುಳಿತಿದ್ದಾರೆ. ಸಿನಿಮಾವನ್ನು ಶಂಕರ್ ರಾಮನ್ ಎಸ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾವನ್ನು ಚೇತನ್ ಕುಮಾರ್ ಗೌಡ ನಿರ್ಮಾಣ ಮಾಡಿದ್ದಾರೆ.

    MORE
    GALLERIES

  • 38

    Kannada New Movies: ಮಕರ ಸಂಕ್ರಾಂತಿಯಂದು ಕನ್ನಡ ಹೊಸ ಸಿನಿಮಾಗಳ ಘೋಷಣೆ: ಒಂದೊಂದು ಅದ್ಭುತ!

    ರಿಷಬ್ ಶೆಟ್ಟಿ ನಟನೆ ಹಾಸ್ಯಮಯ ಕೌಟುಂಬಿಕ ಸಿನಿಮಾ 'ಹರಿ ಕತೆ ಅಲ್ಲ ಗಿರಿ ಕತೆ' ಸಿನಿಮಾದ ಪೋಸ್ಟರ್ ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಿಡುಗಡೆ ಆಗಿದೆ. ಸಿನಿಮಾವನ್ನು ಕರಣ್ ಅನಂತ್ ಮತ್ತು ಅನಿರುದ್ಧ ಮಹೇಶ್ ನಿರ್ದೇಶನ ಮಾಡಿದ್ದಾರೆ. ಪೋಸ್ಟರ್ ಬಹಳ ವಿಭಿನ್ನವಾಗಿಯೂ ಗಮನ ಸೆಳೆವಂತೆ ಇದೆ.

    MORE
    GALLERIES

  • 48

    Kannada New Movies: ಮಕರ ಸಂಕ್ರಾಂತಿಯಂದು ಕನ್ನಡ ಹೊಸ ಸಿನಿಮಾಗಳ ಘೋಷಣೆ: ಒಂದೊಂದು ಅದ್ಭುತ!

    ರಾಘವೇಂದ್ರ ರಾಜ್‌ಕುಮಾರ್ ಪುತ್ರ ವಿನಯ್ ರಾಜ್‌ಕುಮಾರ್ ನಟನೆಯ 'ಅಂದೊಂದಿತ್ತು ಕಾಲ' ಸಿನಿಮಾವು ಸಂಕ್ರಾಂತಿ ವಿಶೇಷವಾಗಿ ಹೊಸ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದೆ. ಕೀರ್ತಿ ನಿರ್ದೇಶನದ ಈ ಸಿನಿಮಾದಲ್ಲಿ ವಿನಯ್ ರಾಜ್‌ಕುಮಾರ್ ಜೊತೆಗೆ ಅದಿತಿ ಪ್ರಭುದೇವ ನಾಯಕಿಯಾಗಿ ನಟಿಸಿದ್ದಾರೆ.

    MORE
    GALLERIES

  • 58

    Kannada New Movies: ಮಕರ ಸಂಕ್ರಾಂತಿಯಂದು ಕನ್ನಡ ಹೊಸ ಸಿನಿಮಾಗಳ ಘೋಷಣೆ: ಒಂದೊಂದು ಅದ್ಭುತ!

    ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ ನಟನೆಯ ಮೊದಲ ಸಿನಿಮಾ 'ಬನಾರಸ್' ಸಿನಿಮಾದ ಪ್ರೇಮಮಯ ಪೋಸ್ಟರ್ ಸಂಕ್ರಾಂತಿ ಪ್ರಯುಕ್ತ ಬಿಡುಗಡೆ ಆಗಿದೆ. ಈಗ ಬಿಡುಗಡೆ ಆಗಿರುವ ಪೋಸ್ಟರ್ ಅನ್ನು ಪುನೀತ್ ರಾಜ್‌ಕುಮಾರ್ ಬಿಡುಗಡೆ ಮಾಡಬೇಕಿತ್ತು. ಆದರೆ ಅಪ್ಪು ನಿಧನದಿಂದ ಅದು ಸಾಧ್ಯವಾಗಿರಲಿಲ್ಲ.

    MORE
    GALLERIES

  • 68

    Kannada New Movies: ಮಕರ ಸಂಕ್ರಾಂತಿಯಂದು ಕನ್ನಡ ಹೊಸ ಸಿನಿಮಾಗಳ ಘೋಷಣೆ: ಒಂದೊಂದು ಅದ್ಭುತ!

    'ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ' ಎಂಬ ಹೊಸ ಚಿತ್ರದಲ್ಲಿ ಡಾಲಿ ಧನಂಜಯ್ ಹಾಗೂ ಅದಿತಿ ಪ್ರಭುದೇವ ನಟಿಸುತ್ತಿದ್ದಾರೆ. ಈ ಚಿತ್ರದ ಪೋಸ್ಟ್​ ಕೂಡ ಬಿಡುಗಡೆಯಾಗಿದೆ. ಚಿತ್ರಕ್ಕೆ ಕುಶಾಲ್ ಗೌಡ ಅವರು ಆ್ಯಕ್ಷನ್​ ಕಟ್ ಹೇಳಿದ್ದು, ಇದಕ್ಕೂ ಮುನ್ನ 'ಕನ್ನಡಕ್ಕಾಗಿ ಒಂದನ್ನು ಒತ್ತಿ' ಚಿತ್ರವನ್ನು ನಿರ್ದೇಶಿಸಿದ್ದರು.

    MORE
    GALLERIES

  • 78

    Kannada New Movies: ಮಕರ ಸಂಕ್ರಾಂತಿಯಂದು ಕನ್ನಡ ಹೊಸ ಸಿನಿಮಾಗಳ ಘೋಷಣೆ: ಒಂದೊಂದು ಅದ್ಭುತ!

    ವಿನಯ್ ರಾಜ್‌ಕುಮಾರ್ ಅಭಿನಯದ "ಪೆಪೆ" ಸಿನಿಮಾದ ಪೋಸ್ಟರ್​ ಕೂಡ ರಿಲೀಸ್​ ಆಗಿದೆ.ಈ ಚಿತ್ರಕ್ಕೆರಘು ದೀಕ್ಷಿತ್ ಸಂಗೀತ ನೀಡಲಿದ್ದಾರೆ. ಚೊಚ್ಚಲ ನಿರ್ದೇಶಕ ಶ್ರೀಲೇಶ್ ಎಸ್ ನಾಯರ್ ನಿರ್ದೇಶನದ ಆಕ್ಷನ್ ಡ್ರಾಮಾದಲ್ಲಿ ಯಾವ ಹಾಡುಗಳಿಲ್ಲ.ಸಂಗೀತ ನಿರ್ದೇಶಕರು ಚಿತ್ರದ ಹಿನ್ನೆಲೆ ಸ್ಕೋರ್ ನೀಡುವ ಕೆಲಸವನ್ನಷ್ಟೇ ಮಾಡಲಿದ್ದಾರೆ.

    MORE
    GALLERIES

  • 88

    Kannada New Movies: ಮಕರ ಸಂಕ್ರಾಂತಿಯಂದು ಕನ್ನಡ ಹೊಸ ಸಿನಿಮಾಗಳ ಘೋಷಣೆ: ಒಂದೊಂದು ಅದ್ಭುತ!

    ಶಿವಣ್ಣ ಅಭಿನಯದ ಮುಂದಿನ ಸಿನಿಮಾ ಬೈರಾಗಿ. ಮಕರ ಸಂಕ್ರಾಂತಿ ಹಿನ್ನೆಲೆ ಈ ಚಿತ್ರದ ಹೊಸ ಪೋಸ್ಟರ್​ ಕೂಡ ಬಿಡುಗಡೆ ಮಾಡಿದೆ. ಈ ಪೋಸ್ಟರ್​​ನಲ್ಲಿ ಹೋಳಿ ಆಡುತ್ತಾ ಶಿವಣ್ಣ ಜಂಪ್​ ಮಾಡುತ್ತಿದ್ದಾರೆ. ಈ ಸಿನಿಮಾ ಯಾವಾಗ ರಿಲೀಸ್​ ಆಗುತ್ತೆ ಅಂತ ಫ್ಯಾನ್ಸ್​ ಕಾಯುತ್ತಿದ್ದಾರೆ.

    MORE
    GALLERIES