Coole No 1: ಹೊಸ ಸಿನಿಮಾದ ಪ್ರಚಾರದಲ್ಲಿ ಸಾರಾ ಅಲಿ ಖಾನ್: ಬಾಯ್ಕಾಟ್ ಕೂಲಿ ನಂ 1 ಅಭಿಯಾನ ಆರಂಭಿಸಿದ ನೆಟ್ಟಿಗರು..!
Sara Ali Khan: ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ನಂತರ ಬಾಲಿವುಡ್ನಲ್ಲಿರುವ ಸ್ಟಾರ್ ಕಿಡ್ಸ್ ಸಿನಿಮಾಗಳನ್ನು ಬಾಯ್ಕಾಟ್ ಮಾಡುವಂತೆ ಅಭಿಯಾನ ಆರಂಭಿಸಿದ್ದರು. ಅಂತೆಯೇ ಆಲಿಯಾ ಭಟ್ ಅವರ ಸಿನಿಮಾ ಸಡಕ್ 2 ಅನ್ನೂ ಸಿನಿಪ್ರಿಯರು ನೆಲಕಚ್ಚುವಂತೆ ಮಾಡಿದರು. ಈಗ ಸಾರಾ ಅಲಿ ಖಾನ್ ಸರದಿ. ಸಾರಾ-ವರುಣ್ ಅಭಿನಯದ ಕೂಲಿ ನಂ 1 ಚಿತ್ರವನ್ನು ಬಹಿಷ್ಕರಿಸುವಂತೆ ಅಭಿಯಾನ ಆರಂಭಿಸಿದ್ದಾರೆ ನೆಟ್ಟಿಗರು. (ಚಿತ್ರಗಳು ಕೃಪೆ: ಸಾರಾ ಅಲಿ ಖಾನ್ ಇನ್ಸ್ಟಾಗ್ರಾಂ ಖಾತೆ)
News18 Kannada | November 30, 2020, 4:05 PM IST
1/ 13
ಸಾರಾ ಅಲಿ ಖಾನ್ ಅಭಿನಯದ ಸಿನಿಮಾ ಕೂಲಿ ನಂ 1 ಸಿನಿಮಾ ಇನ್ನೇನು ಒಟಿಟಿ ಮೂಲಕ ರಿಲೀಸ್ ಆಗಲಿದೆ. ಇದರಲ್ಲಿ ವರುಣ್ ಧವನ್ ನಾಯಕನಾಗಿ ಅಭಿನಯಿಸಿದ್ದಾರೆ.
2/ 13
ಸಾರಾ ಅಲಿ ಖಾನ್ ಅವರ ಕೂಲಿ ನಂ 1 ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಅದನ್ನು ನೋಡುವಂತೆ ಸಾರಾ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
3/ 13
ತಮ್ಮ ಲೆಟೆಸ್ಟ್ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಕೊಂಡಿರುವ ಸಾರಾ, ನೀವು ಇನ್ನೂ ಟ್ರೇಲರ್ ನೋಡಿಲ್ವಾ ಎಂದು ಕೇಳುತ್ತಿದ್ದಾರೆ.
4/ 13
ತಮ್ಮ ಸಿನಿಮಾದ ಪ್ರಚಾರಕ್ಕಾಗಿ ಸಾರಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಶ್ರಮ ಪಡುತ್ತಿದ್ದಾರೆ.
5/ 13
ಸುಶಾಂತ್ ಸಿಂಗ್ ಸಾವಿನ ನಂತರ ಬಾಲಿವುಡ್ನಲ್ಲಿ ಸ್ಟಾರ್ ಕಿಡ್ಸ್ಗಳ ಸಿನಿಮಾ ಬಾಯ್ಕಾಟ್ ಮಾಡುವಂತೆ ನೆಟ್ಟಿಗರು ಸಮರ ಸಾರಿದ್ದರು.
6/ 13
ಈಗಲೂ ಸಹ ಸ್ಟಾರ್ ಕಿಡ್ಸ್ ಸಾರಾ ಹಾಗೂ ವರುಣ್ ಧವನ್ ಅಭಿನಯದ ಕೂಲಿ ನಂ 1 ಸಿನಿಮಾವನ್ನು ಬಹಿಷ್ಕರಿಸಿ ಎಂದು ನೆಟ್ಟಿಗರು ಮತ್ತೆ ಅಭಿಯಾನ ಆರಂಭಿಸಿದ್ದಾರೆ.
7/ 13
ಈ ಹಿಂದೆ ಆಲಿಯಾ ಭಟ್, ಆದಿತ್ಯ ರಾಯ್ ಕಪೂರ್, ಸಂಜಯ್ ದತ್ ಅಭಿನಯದ ಸಡಕ್ 2 ಸಿನಿಮಾವನ್ನು ನೆಟ್ಟಿಗರು ನೆಲಕಚ್ಚುವಂತೆ ಮಾಡಿದರು.