Chiranjeevi: ಅಯ್ಯಪ್ಪ ಮಾಲೆ ಧರಿಸಿ ತಂದೆ ಕಾಲಿನ ಬಳಿ ಕುಳಿತ ರಾಮ್ ಚರಣ್, ಚಪ್ಪಲಿ ಧರಿಸಿದ ಚಿರಂಜೀವಿ ವಿರುದ್ಧ ನೆಟ್ಟಿಗರ ಆಕ್ರೋಶ

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಮೆಗಾಸ್ಟಾರ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಇದೀಗ ಮೆಗಾ ಸ್ಟಾರ್ ಹೊಸ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.

First published:

  • 18

    Chiranjeevi: ಅಯ್ಯಪ್ಪ ಮಾಲೆ ಧರಿಸಿ ತಂದೆ ಕಾಲಿನ ಬಳಿ ಕುಳಿತ ರಾಮ್ ಚರಣ್, ಚಪ್ಪಲಿ ಧರಿಸಿದ ಚಿರಂಜೀವಿ ವಿರುದ್ಧ ನೆಟ್ಟಿಗರ ಆಕ್ರೋಶ

    ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಇತ್ತೀಚೆಗೆ ವಾಲ್ತೇರು ವೀರಯ್ಯ ಚಿತ್ರದ ಮೂಲಕ ಸೂಪರ್ ಸಕ್ಸಸ್ ಪಡೆದ ಖುಷಿಯಲ್ಲಿದ್ದಾರೆ. ಸಂಕ್ರಾಂತಿಗೆ ರಿಲೀಸ್ ಆದ ಸಿನಿಮಾ ಹಲವು ದಾಖಲೆಗಳನ್ನು ನಿರ್ಮಿಸಿದೆ. ಈ ಮೂಲಕ ಚಿರು ತಾನೊಬ್ಬ ಮಾಸ್ ಹೀರೋ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಆದರೆ ಇದೀಗ ಚಿರಂಜೀವಿ ಹೊಸ ವಿವಾದವೊಂದರಲ್ಲಿ ಸಿಲುಕಿಕೊಂಡಿದ್ದಾರೆ.

    MORE
    GALLERIES

  • 28

    Chiranjeevi: ಅಯ್ಯಪ್ಪ ಮಾಲೆ ಧರಿಸಿ ತಂದೆ ಕಾಲಿನ ಬಳಿ ಕುಳಿತ ರಾಮ್ ಚರಣ್, ಚಪ್ಪಲಿ ಧರಿಸಿದ ಚಿರಂಜೀವಿ ವಿರುದ್ಧ ನೆಟ್ಟಿಗರ ಆಕ್ರೋಶ

    ಚಿರಂಜೀವಿ ಅವರ ಪುತ್ರ, ಟಾಲಿವುಡ್ ಸ್ಟಾರ್, ಪ್ಯಾನ್ ಇಂಡಿಯಾ ಸ್ಟಾರ್ ರಾಮ್ ಚರಣ್ ಇದೀಗ ಅಯ್ಯಪ್ಪ ಮಾಲೆ ಧರಿಸಿದ್ದಾರೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ರಾಮ್ ಚರಣ್ ಅನೇಕ ಕಾರ್ಯಕ್ರಮಕ್ಕೂ ಭೇಟಿ ನೀಡಿದ್ದಾರೆ. ಅಯ್ಯಪ್ಪ ಮಾಲೆ ಧರಿಸಿದ ರಾಮ್ ಚರಣ್ 45 ದಿನಗಳ ಕಾಲ ದೀಕ್ಷೆ ತೆಗೆದುಕೊಂಡಿದ್ದಾರಂತೆ.

    MORE
    GALLERIES

  • 38

    Chiranjeevi: ಅಯ್ಯಪ್ಪ ಮಾಲೆ ಧರಿಸಿ ತಂದೆ ಕಾಲಿನ ಬಳಿ ಕುಳಿತ ರಾಮ್ ಚರಣ್, ಚಪ್ಪಲಿ ಧರಿಸಿದ ಚಿರಂಜೀವಿ ವಿರುದ್ಧ ನೆಟ್ಟಿಗರ ಆಕ್ರೋಶ

    ರಾಮ್ ಚರಣ್ ಅಯ್ಯಪ್ಪ ಮಾಲೆ ಧರಿಸುತ್ತಿರುವುದು ಇದೇ ಮೊದಲಲ್ಲ. ಹತ್ತು ವರ್ಷಗಳಿಂದಲೂ ರಾಮ್ ಚರಣ್ ಪ್ರತಿ ವರ್ಷ ಮಾಲೆ ಧರಿಸುತ್ತಾರೆ. ಮಾಲೆ ಧರಿಸಿ ಇತ್ತೀಚೆಗೆ ಅವರು ತಮ್ಮ ಕುಟುಂಬದೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

    MORE
    GALLERIES

  • 48

    Chiranjeevi: ಅಯ್ಯಪ್ಪ ಮಾಲೆ ಧರಿಸಿ ತಂದೆ ಕಾಲಿನ ಬಳಿ ಕುಳಿತ ರಾಮ್ ಚರಣ್, ಚಪ್ಪಲಿ ಧರಿಸಿದ ಚಿರಂಜೀವಿ ವಿರುದ್ಧ ನೆಟ್ಟಿಗರ ಆಕ್ರೋಶ

    ಇತ್ತೀಚೆಗೆ ಮಹಾ ಶಿವರಾತ್ರಿ ಸಂದರ್ಭದಲ್ಲಿ ರಾಮ್ ಚರಣ್ ಕೆಲವು ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಶಿವಲಿಂಗಕ್ಕೆ ರಾಮ್ ಚರಣ್ ಪೂಜೆ ಸಲ್ಲಿಸಿದ್ದಾರೆ. ಬಳಿಕ ರಾಮ್ ಚರಣ್ ತನ್ನ ಪೋಷಕರು, ಚಿರಂಜೀವಿ ಮತ್ತು ಸುರೇಖಾ ಅವರೊಂದಿಗಿನ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

    MORE
    GALLERIES

  • 58

    Chiranjeevi: ಅಯ್ಯಪ್ಪ ಮಾಲೆ ಧರಿಸಿ ತಂದೆ ಕಾಲಿನ ಬಳಿ ಕುಳಿತ ರಾಮ್ ಚರಣ್, ಚಪ್ಪಲಿ ಧರಿಸಿದ ಚಿರಂಜೀವಿ ವಿರುದ್ಧ ನೆಟ್ಟಿಗರ ಆಕ್ರೋಶ

    ರಾಮ್ ಚರಣ್ ಅವರ ತಾಯಿಯ ಹುಟ್ಟುಹಬ್ಬದ ಸಂದರ್ಭದಲ್ಲಿ ಸುರೇಖಾ ಮತ್ತು ಚಿರಂಜೀವಿ ಅವರೊಂದಿಗೆ ಐ ಲವ್ ಯೂ ಡಾರ್ಲಿಂಗ್ ಎಂದು ಬರೆದು ಫೋಟೋ ಪೋಸ್ಟ್ ಮಾಡಿದ್ದಾರೆ. ಫೋಟೋದಲ್ಲಿ ಚಿರಂಜೀವಿ ಧರಿಸಿರುವ ಚಪ್ಪಲಿ ಇದೀಗ ವಿವಾದದ ಕಿಡಿ ಹತ್ತಿಸಿದೆ.

    MORE
    GALLERIES

  • 68

    Chiranjeevi: ಅಯ್ಯಪ್ಪ ಮಾಲೆ ಧರಿಸಿ ತಂದೆ ಕಾಲಿನ ಬಳಿ ಕುಳಿತ ರಾಮ್ ಚರಣ್, ಚಪ್ಪಲಿ ಧರಿಸಿದ ಚಿರಂಜೀವಿ ವಿರುದ್ಧ ನೆಟ್ಟಿಗರ ಆಕ್ರೋಶ

    ರಾಮ್ ಚರಣ್ ತಂದೆ-ತಾಯಿ ಇಬ್ಬರೂ ಸೋಫಾದ ಮೇಲೆ ಕುಳಿತಿದ್ದರು. ಈ ವೇಳೆ ರಾಮ್ ಚರಣ್ ಕೆಳಗೆ ಅವರ ಪಾದದ ಪಕ್ಕ ಕುಳಿತಿದ್ದರು. ಈ ವೇಳೆ ಚಿರಂಜೀವಿ ಚಪ್ಪಲಿ ಧರಿಸಿರೋದನ್ನು ಕಾಣಬಹುದಾಗಿದೆ. ರಾಮ್ ಚರಣ್ ಮಾಲೆ ಧರಿಸಿದ್ದು, ಚಿರಂಜೀವಿ ಕಾಲು ರಾಮ್ ಚರಣ್ಗೆ ತಾಗುವಂತೆ ಚಪ್ಪಲಿ ಹಾಕಿ ಕುಳಿತಿರೋದನ್ನು ಅಭಿಮಾನಿಗಳು ಖಂಡಿಸಿದ್ದಾರೆ.

    MORE
    GALLERIES

  • 78

    Chiranjeevi: ಅಯ್ಯಪ್ಪ ಮಾಲೆ ಧರಿಸಿ ತಂದೆ ಕಾಲಿನ ಬಳಿ ಕುಳಿತ ರಾಮ್ ಚರಣ್, ಚಪ್ಪಲಿ ಧರಿಸಿದ ಚಿರಂಜೀವಿ ವಿರುದ್ಧ ನೆಟ್ಟಿಗರ ಆಕ್ರೋಶ

    ಆ ಫೋಟೋ ನೋಡಿದವರೆಲ್ಲಾ ಚಿರಂಜೀವಿ ಮೇಲೆ ಕಿಡಿಕಾರಿದ್ದಾರೆ. ರಾಮ್ ಚರಣ್ ಅಯ್ಯಪ್ಪ ಮಾಲಾ ಧರಿಸಿದ್ದೀರಿ. ಪಾದದ ಪಕ್ಕದಲ್ಲಿ ಕುಳಿತಿರೋದು ಸರಿ ಅಲ್ಲ ಎಂದಿದ್ದಾರೆ. ಚಿರಂಜೀವಿ ಚಪ್ಪಲಿ ಧರಿಸಿದ್ದಕ್ಕೂ ಅನೇಕರು ಕಿಡಿಕಾರಿದ್ದಾರೆ.

    MORE
    GALLERIES

  • 88

    Chiranjeevi: ಅಯ್ಯಪ್ಪ ಮಾಲೆ ಧರಿಸಿ ತಂದೆ ಕಾಲಿನ ಬಳಿ ಕುಳಿತ ರಾಮ್ ಚರಣ್, ಚಪ್ಪಲಿ ಧರಿಸಿದ ಚಿರಂಜೀವಿ ವಿರುದ್ಧ ನೆಟ್ಟಿಗರ ಆಕ್ರೋಶ

    ಇನ್ನು ಕೆಲ ನೆಟ್ಟಿಗರು ಕೂಡ ಚಿರಂಜೀವಿ ಚಪ್ಪಲಿ ಬಗ್ಗೆ ಕಮೆಂಟ್ ಮಾಡುತ್ತಿದ್ದಾರೆ. ಚಿರಂಜೀವಿ ತೊಟ್ಟಿದ್ದ ಚಪ್ಪಲಿ, ರಸ್ತೆಯಲ್ಲಿ ಟಾರ್ ಹಾಕುವಾಗ ಬಳಸುವವರ ಚಪ್ಪಲಿಯಂತಿದೆ ಎಂದು ವ್ಯಂಗ್ಯವಾಡುತ್ತಿದ್ದಾರೆ. ಈ ಟೀಕೆಗಳಿಗೆ ಚಿರಂಜೀವಿ ಹೇಗೆ ಉತ್ತರಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.

    MORE
    GALLERIES