Puneeth Rajkumar: ಪುನೀತ್ ರಾಜ್ಕುಮಾರ್ ಟ್ವಿಟರ್ ಖಾತೆಯಲ್ಲಿ ಹಿಂದಿ ಪದದ ಬಳಕೆ: ಗರಂ ಆದ ನೆಟ್ಟಿಗರು..!
ಮಾ.17ರಂದು ಪುನೀತ್ ರಾಜ್ಕುಮಾರ್ ಅವರು ತಮ್ಮ ಕುಟುಂಬದೊಂದಿಗೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅವರ ಹುಟ್ಟುಹಬ್ಬಕ್ಕೆ ಸಾಕಷ್ಟು ಮಂದಿ ಸೆಲೆಬ್ರಿಟಿಗಳು ವಿಶ್ ಮಾಡಿದ್ದಾರೆ. ಅದಕ್ಕೆ ಟ್ವಿಟರ್ನಲ್ಲಿ ಪ್ರತಿಯೊಬ್ಬರಿಗೂ ಪ್ರತಿಕ್ರಿಯೆ ನೀಡಲಾಗಿದೆ. ಹೀಗೆ ಪ್ರತಿಕ್ರಿಯಿಸುವಾಗ ಒಂದು ಟ್ವೀಟ್ನಲ್ಲಿ ಹಿಂದಿ ಪದದ ಬಳಕೆ ಮಾಡಲಾಗಿದೆ. ಇದಿರಂದಾಗಿ ನೆಟ್ಟಿಗರು ಈಗ ಗರಂ ಆಗಿದ್ದಾರೆ. (ಚಿತ್ರಗಳು ಕೃಪೆ: ಪುನೀತ್ ರಾಜ್ಕುಮಾರ್ ಇನ್ಸ್ಟಾಗ್ರಾಂ ಖಾತೆ)
ಪುನೀತ್ ರಾಜ್ಕುಮಾರ್ ತಮ್ಮ ಹುಟ್ಟುಹಬ್ಬಕ್ಕೆ ಶುಭ ಕೋರಿದ ಅಭಿಮಾನಿ ದೇವರುಗಳಿಗೆ ಧನ್ಯವಾದ ತಿಳಿಸಿದ್ದರು. ಅದಕ್ಕೆ ಸಾಕಷ್ಟು ಮೆಚ್ಚುಗೆ ಸಹ ವ್ಯಕ್ತವಾಗಿತ್ತು.
2/ 7
ಟ್ವಿಟರ್ನಲ್ಲಿ ತಮಗೆ ವಿಶ್ ಮಾಡಿದ ಸೆಲೆಬ್ರಿಟಿಗಳಿಗೆ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸುವ ಬರದಲ್ಲಿ ಪುನೀತ್ ರಾಜ್ಕುಮಾರ್ ಅವರು ಹಿಂದಿ ಪದದ ಬಳಕೆ ಮಾಡಿದ್ದಾರೆ.
3/ 7
ಅಷ್ಟಕ್ಕೂ ಪುನೀತ್ ಬಳಕೆ ಮಾಡಿರುವ ಪದ ಯಾವುದು ಅಂತೀರಾ..?
4/ 7
ನಿರ್ಮಾಪಕ ವಿಜಯ್ ಕಿರಗಂದೂರು ಅವರು ಪುನೀತ್ ಅವರಿಗೆ ಕನ್ನಡದಲ್ಲಿ ಶುಭ ಕೋರಿದ್ದಾರೆ. ಅದಕ್ಕೆ ಇಂಗ್ಲಿಷ್ನಲ್ಲಿ ಪ್ರತಿಕ್ರಿಯೆ ನೀಡಲಾಗಿದ್ದು ಕೊನೆಯಲ್ಲಿ ವಿಜಯ್ ಕಿರಗಂದೂರು ಜೀ ಎಂದು ಬಳಸಲಾಗಿದೆ.
5/ 7
ಪುನೀತ್ ಅವರ ಟ್ವಿಟರ್ನಲ್ಲಿ ಜೀ ಎನ್ನುವ ಪದ ಬಳಕೆ ಮಾಡಲಾಗಿದ್ದು, ಅದರ ಬದಲಾಗಿ ಕನ್ನಡದ ಪದವನ್ನೇ ಬಳಸಬಹುದಿತ್ತು ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
6/ 7
ನಾವು ರಾಜ್ಕುಮಾರ್ ಅವರ ಅಭಿಮಾನಿಗಳು, ನಿಮ್ಮಿಂದ ಕನ್ನಡವನ್ನೇ ನಿರೀಕ್ಷಿಸೋದು. ಹೆಚ್ಚಾಗಿ ಕನ್ನಡದಲ್ಲೇ ವ್ಯವಹರಿಸಿ ಎಂದು ಮನವಿ ಮಾಡಿದ್ದಾರೆ ಅಭಿಮಾನಿಗಳು.
7/ 7
ಇನ್ನೂ ಕೆಲವರು ಪುನೀತ್ ಅವರ ಟ್ವಿಟರ್ ಹ್ಯಾಂಡಲ್ ಮಾಡುವ ಅಡ್ಮಿನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
First published:
17