Netflix Price: 30 ರಾಷ್ಟ್ರಗಳಲ್ಲಿ ಶುಲ್ಕ ಇಳಿಸಿದ ನೆಟ್​ಫ್ಲಿಕ್ಸ್; ಲಿಸ್ಟ್​ನಲ್ಲಿ ಇದೆಯಾ ಭಾರತದ ಹೆಸರು?

ಇತ್ತೀಚಿನ ದಿನಗಳಲ್ಲಿ ಮನರಂಜನೆಗಾಗಿ ಜನರು ಒಟಿಟಿಗಳ ಮೊರೆ ಹೋಗಿದ್ದಾರೆ. ಥಿಯೇಟರ್​ನಲ್ಲಿ ಸಿನಿಮಾ ರಿಲೀಸ್ ಆದ್ರೂ ಅನೇಕರು ಒಟಿಟಿಯಲ್ಲೇ ಸಿನಿಮಾ ನೋಡಲು ಕಾಯ್ತಾರೆ. ಒಟಿಟಿಯಲ್ಲಿ ಪ್ರಸಾರವಾಗುವ ವೆಬ್ ಸೀರಿಸ್ಗಳು ಪ್ರೇಕ್ಷಕರನ್ನು ತನ್ನತ್ತ ಸೆಳೆದಿದೆ. ಬಹುಪಾಲು ಒಟಿಟಿಗಳಲ್ಲಿ (OTT) ದುಬಾರಿ ಒಟಿಟಿ ಫ್ಲಾಟ್​ಫಾರಂ ಅಂದ್ರೆ ಅದು ನೆಟ್​ಫ್ಲಿಕ್ಸ್​ ಇದೀಗ ನೆಟ್​ಫ್ಲಿಕ್ಸ್​ ಒಟಿಟಿ ದರ ಇಳಿಕೆ ಮಾಡಿದೆಯಂತೆ.

First published:

  • 18

    Netflix Price: 30 ರಾಷ್ಟ್ರಗಳಲ್ಲಿ ಶುಲ್ಕ ಇಳಿಸಿದ ನೆಟ್​ಫ್ಲಿಕ್ಸ್; ಲಿಸ್ಟ್​ನಲ್ಲಿ ಇದೆಯಾ ಭಾರತದ ಹೆಸರು?

    ಅಮೆಜಾನ್ ಪ್ರೈಂ (Amazon Prime), ಸೋನಿ ಲಿವ್, ಡಿಸ್ನಿ ಪ್ಲಸ್ ಹಾಟ್​ಸ್ಟಾರ್, ಜೀ5 ಇನ್ನಿತರೆ ಒಟಿಟಿಗಳು ಚಂದಾದಾರರಿಂದ ವಾರ್ಷಿಕ ಶುಲ್ಕ ಪಡೆಯುತ್ತವೆ. ಆದ್ರೆ ನೆಟ್​ಫ್ಲಿಕ್ಸ್ ಮಾತ್ರ ದೊಡ್ಡ ಮೊತ್ತದ ಮಾಸಿಕ ಶುಲ್ಕ ಪಡೆಯುತ್ತೆ. ಜನರಿಗೆ ಈ ದರ ಕೊಂಚ ದುಬಾರಿಯೇ ಆಗಿದೆ.

    MORE
    GALLERIES

  • 28

    Netflix Price: 30 ರಾಷ್ಟ್ರಗಳಲ್ಲಿ ಶುಲ್ಕ ಇಳಿಸಿದ ನೆಟ್​ಫ್ಲಿಕ್ಸ್; ಲಿಸ್ಟ್​ನಲ್ಲಿ ಇದೆಯಾ ಭಾರತದ ಹೆಸರು?

    ಇತ್ತೀಚಿಗೆ ನೆಟ್​ಫ್ಲಿಕ್ಸ್ ಬಳಕೆದಾರರ ಸಂಖ್ಯೆ ತೀರ ಕಡಿಮೆ ಆಗಿದೆ. ಇತರೆ ಒಟಿಟಿಗಿಂದ ನೆಟ್​ಫ್ಲಿಕ್ಸ್ ದರ ದುಬಾರಿ ಎಂದು ಚಂದಾದಾರರು ನೆಟ್​ಫ್ಲಿಕ್ಸ್ ಬಳಕೆಯನ್ನು ಕಡಿಮೆ ಮಾಡಿದ್ದಾರೆ. ಇದ್ರಿಂದ ಬಳಕೆದಾರರ ಸಂಖ್ಯೆ ಇಳಿದಿದೆ. ಹೀಗಾಗಿ ನೆಟ್​ಫ್ಲಿಕ್ಸ್ ಇದೀಗ ತನ್ನ ಶುಲ್ಕವನ್ನು ಕಡಿತಗೊಳಿಸಿದೆ.

    MORE
    GALLERIES

  • 38

    Netflix Price: 30 ರಾಷ್ಟ್ರಗಳಲ್ಲಿ ಶುಲ್ಕ ಇಳಿಸಿದ ನೆಟ್​ಫ್ಲಿಕ್ಸ್; ಲಿಸ್ಟ್​ನಲ್ಲಿ ಇದೆಯಾ ಭಾರತದ ಹೆಸರು?

    ವಿಶ್ವದ ಹಲವು ರಾಷ್ಟ್ರಗಳಲ್ಲಿ ಸೇವೆ ಒದಗಿಸುತ್ತಿರುವ ನೆಟ್​ಫ್ಲಿಕ್ಸ್ 30 ರಾಷ್ಟ್ರಗಳಲ್ಲಿ ತನ್ನ ಮಾಸಿಕ ಶುಲ್ಕವನ್ನು ಇಳಿಕೆ ಮಾಡಿದೆ. ಶುಲ್ಕ ಇಳಿಸಿರುವ ಜೊತೆಗೆ ಪಾಸ್​ವರ್ಡ್ ಶೇರಿಂಗ್ ಅಥವಾ ಪ್ರೊಫೈಲ್ ಶೇರಿಂಗ್ ವಿಧಾನದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ.

    MORE
    GALLERIES

  • 48

    Netflix Price: 30 ರಾಷ್ಟ್ರಗಳಲ್ಲಿ ಶುಲ್ಕ ಇಳಿಸಿದ ನೆಟ್​ಫ್ಲಿಕ್ಸ್; ಲಿಸ್ಟ್​ನಲ್ಲಿ ಇದೆಯಾ ಭಾರತದ ಹೆಸರು?

    ನೆಟ್​ಫ್ಲಿಕ್ಸ್, ಪ್ರಸ್ತುತ, ಈಜಿಫ್ಟ್, ಎಮನ್, ಜೋರ್ಡನ್, ಲಿಬಿಯಾ, ಇರಾನ್, ಕಿನ್ಯಾ, ಕ್ರೊಯೇಶಿಯಾ, ಸ್ಲೊವೇನಿಯಾ, ಬಲ್ಗೇರಿಯಾ, ಈಕ್ವೆಡಾರ್, ವೆನುಜುವೆಲ್ಲಾ, ಇಂಡೋನೇಶಿಯಾ, ವಿಯೆಟ್ನಾಂ, ಥಾಯ್ಲೆಂಡ್, ಫಿಲಿಫೀನ್ಸ್, ಬೋಸ್ನಿಯಾ, ಮೆಕೆಡೋನಿಯಾ ಸೇರಿದಂತೆ ಇನ್ನೂ ಕೆಲವು ದೇಶಗಳಲ್ಲಿ ತನ್ನ ಮಾಸಿಕ ಶುಲ್ಕದಲ್ಲಿ ಕಡಿತ ಮಾಡಿದೆ.

    MORE
    GALLERIES

  • 58

    Netflix Price: 30 ರಾಷ್ಟ್ರಗಳಲ್ಲಿ ಶುಲ್ಕ ಇಳಿಸಿದ ನೆಟ್​ಫ್ಲಿಕ್ಸ್; ಲಿಸ್ಟ್​ನಲ್ಲಿ ಇದೆಯಾ ಭಾರತದ ಹೆಸರು?

    ಮಾಸಿಕ ಶುಲ್ಕವನ್ನು ಇಳಿಕೆ ಮಾಡಿರುವ ಪಟ್ಟಿಯಲ್ಲಿ ಭಾರತದ ಹೆಸರಿಲ್ಲ. ಕಳೆದ ವರ್ಷ ಭಾರತದಲ್ಲಿ ನೆಟ್​ಫ್ಲಿಕ್ಸ್  ತನ್ನ ಮಾಸಿಕ ಶುಲ್ಕವನ್ನು ಕಡಿಮೆ ಮಾಡಿತ್ತು. ಇದೀಗ ಮತ್ತೆ ಶುಲ್ಕ ಕಡಿತ ಮಾಡಿಲ್ಲ. ಆದ್ರೂ ಭಾರತದಲ್ಲಿ ಎಲ್ಲ ಒಟಿಟಿ ಫ್ಲಾಟ್ ಫಾರಂಗಿಂತ ನೆಟ್​ಫ್ಲಿಕ್ಸ್ ದುಬಾರಿಯೇ ಆಗಿದೆ.

    MORE
    GALLERIES

  • 68

    Netflix Price: 30 ರಾಷ್ಟ್ರಗಳಲ್ಲಿ ಶುಲ್ಕ ಇಳಿಸಿದ ನೆಟ್​ಫ್ಲಿಕ್ಸ್; ಲಿಸ್ಟ್​ನಲ್ಲಿ ಇದೆಯಾ ಭಾರತದ ಹೆಸರು?

    ಕೆಲವು ರಾಷ್ಟ್ರಗಳಲ್ಲಿ ಹಳೆಯ ದರಕ್ಕಿಂತಲೂ ಶೇ50 ರಷ್ಟು ಕಡಿತವನ್ನು ನೆಟ್​ಫ್ಲಿಕ್ಸ್ ಮಾಡಿದೆ. ಆದರೆ ಕೆಲವು ಕಡೆ ಪಾಸ್ ವರ್ಡ್ ಶೇರಿಂಗ್ ನಿಯಮಗಳಲ್ಲಿ ಕೆಲ ಬದಲಾವಣೆಯನ್ನು ಸಹ ಮಾಡಿದೆ. ನೆಟ್​ಫ್ಲಿಕ್ಸ್ ಪಾಸ್​ವರ್ಡ್ ಶೇರಿಂಗ್ ನಿಯಮವನ್ನು ಆಗಾಗೆ ಬದಲಿಸುತ್ತಲೇ ಇದೆ.

    MORE
    GALLERIES

  • 78

    Netflix Price: 30 ರಾಷ್ಟ್ರಗಳಲ್ಲಿ ಶುಲ್ಕ ಇಳಿಸಿದ ನೆಟ್​ಫ್ಲಿಕ್ಸ್; ಲಿಸ್ಟ್​ನಲ್ಲಿ ಇದೆಯಾ ಭಾರತದ ಹೆಸರು?

    ಭಾರತದಲ್ಲಿ ಈ ಮೊದಲು ನಾಲ್ಕು ಜನ ನೋಡಬಹುದಾದ ಎಚ್​ಡಿ ಪ್ರೀಮಿಯಂ ಪ್ಲ್ಯಾನ್​ನ ಮಾಸಿಕ ಶುಲ್ಕ 799 ರುಪಾಯಿಗಳಿತ್ತು. ಆದರೆ ಕಳೆದ ವರ್ಷ ಈ ಮೊತ್ತವನ್ನು 649 ರುಪಾಯಿಗಳಿಗೆ ಇಳಿಸಿದೆ . ಆದರೆ ಭಾರತಕ್ಕಿಂತಲೂ ಕಡಿಮೆ ದರದಲ್ಲಿ ಪಾಕಿಸ್ತಾನದಲ್ಲಿ ನೆಟ್​ಫ್ಲಿಕ್ಸ್ ಲಭ್ಯವಿದೆ. ಟರ್ಕಿ ಜನರು ಸಹ ಅತ್ಯಂತ ಕಡಿಮೆ ಬೆಲೆಗೆ ನೆಟ್​ಫ್ಲಿಕ್ಸ್ ವೀಕ್ಷಿಸುತ್ತಾರೆ.

    MORE
    GALLERIES

  • 88

    Netflix Price: 30 ರಾಷ್ಟ್ರಗಳಲ್ಲಿ ಶುಲ್ಕ ಇಳಿಸಿದ ನೆಟ್​ಫ್ಲಿಕ್ಸ್; ಲಿಸ್ಟ್​ನಲ್ಲಿ ಇದೆಯಾ ಭಾರತದ ಹೆಸರು?

    ಕೆನಡಾ, ಲ್ಯಾಟಿನ್ ಅಮೆರಿಕ, ಸ್ಪೇನ್, ನ್ಯೂಜಿಲೆಂಡ್, ಪೋರ್ಚುಗಲ್​ಗಳಲ್ಲಿ ಪಾಸ್​ ವರ್ಡ್​  ಶೇರಿಂಗ್ ಮಿತಿಯನ್ನು ಹೆಚ್ಚಿಸಿದೆ. ಇಲ್ಲಿ ಶುಲ್ಕವನ್ನೂ ಸಹ ತುಸು ಹೆಚ್ಚಿಸಿದೆ. ಕಳೆದ ತ್ರೈಮಾಸಿಕದಲ್ಲಿ  ನೆಟ್​ಫ್ಲಿಕ್ಸ್​ ಚಂದಾದಾರರ ಸಂಖ್ಯೆ ಭಾರಿ ಕುಸಿದಿತ್ತು. ಹಲವು ದೇಶಗಳಲ್ಲಿ ಶೇ 50ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಚಂದಾದಾರರನ್ನು ನೆಟ್​ಫ್ಲಿಕ್ಸ್ ಕಳೆದುಕೊಂಡಿತ್ತು.

    MORE
    GALLERIES