ಹೊಸ ಸಿನಿಮಾಗಾಗಿ ಸಿದ್ಧರಾಗುತ್ತಿದ್ದಾರಾ ಸ್ಯಾಂಡಲ್ವುಡ್ನ ಈ ಹ್ಯಾಂಡ್ಸಮ್ ನಟ..!
ಲಾಕ್ಡೌನ್ನಿಂದಾಗಿ ಸಿಕ್ಕಿರುವ ಸಮಯವನ್ನು ಸೆಲೆಬ್ರಿಟಿಗಳು ತಮಗೆ ಇಷ್ಟವಾದ ರೀತಿಯಲ್ಲಿ ಕಳೆಯುತ್ತಿದ್ದಾರೆ. ಕೆಲವರಂತೂ ಈ ಸಮಯವನ್ನು ತುಂಬಾ ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಸ್ಯಾಂಡಲ್ವುಡ್ನ ಈ ಹ್ಯಾಂಡ್ಸಮ್ ಹೀರೋ ಲಾಕ್ಡೌನ್ನಲ್ಲಿ ತಮಗೆ ತಾವೇ ಚಾಲೆಂಜ್ ಹಾಕಿಕೊಂಡು ಸಖತ್ ವರ್ಕೌಟ್ ಮಾಡುತ್ತಿದ್ದಾರೆ. (ಚಿತ್ರಗಳು ಕೃಪೆ: ಪ್ರೇಮ್ ಇನ್ಸ್ಟಾಗ್ರಾಂ ಖಾತೆ)
ಕೊರೋನಾ ಭೀತಿ ಒಂದು ಕಡೆಯಾದರೆ, ಮತ್ತೊಂದು ಕಡೆ ಲಾಕ್ಡೌನ್ ಮಾಡುವ ಮೂಲಕ ಸೋಂಕು ಹರಡದಂತೆ ತಡೆಯಲು ಪ್ರಯತ್ನಿಸಲಾಗುತ್ತಿದೆ. ಈ ಲಾಕ್ಡೌನ್ನಿಂದಾಗಿ ಮನೆಯವರೊಂದಿಗೆ ಕಾಲ ಕಳೆಯಲು ಸವಕಾಶ ಸಿಕ್ಕಿದೆ. ಜೊತೆಗೆ ಕಂಡ ಕನಸುಗಳನ್ನು ನನಸು ಮಾಡಿಕೊಳ್ಳಲೂ ಕೆಲವರಿಗೆ ಇದು ಒಳ್ಳೆಯ ಸಮಯವಾಗಿದೆ.
2/ 10
ಸ್ಯಾಂಡಲ್ವುಡ್ನ ಈ ಹ್ಯಾಂಡ್ಸಮ್ ನಟ ಸಹ ಈಗ ಲಾಕ್ಡೌನ್ನಲ್ಲಿ ಸಿಕ್ಕಿರುವ ಸಮಯವನ್ನು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.
3/ 10
ಅಷ್ಟಕ್ಕೂ ಆ ಹ್ಯಾಂಡ್ಸಮ್ ನಟ ಮತ್ತಾರೂ ಅಲ್ಲ. ಅವರೇ ನೆನಪಿರಲಿ ಖ್ಯಾತಿಯ ಪ್ರೇಮ್.
4/ 10
ಲಾಕ್ಡೌನ್ನಲ್ಲಿ ಸಖತ್ ವರ್ಕೌಟ್ ಮಾಡಿ, ಬಾಡಿ ಬಿಲ್ಡ್ ಮಾಡುತ್ತಿದ್ದಾರೆ.
5/ 10
ಮನೆಯಲ್ಲಿ ತಮ್ಮ ಬಳಿ ಮನೆಯಲ್ಲಿ ಇರುವ ಸಲಕರಣೆಗಳನ್ನೇ ಬಳಸಿಕೊಂಡು ಪ್ರೇಮ್ ವರ್ಕೌಟ್ ಮಾಡುತ್ತಾ ಇಷ್ಟು ಬಾಡಿ ಬಿಲ್ಡ್ ಮಾಡಿದ್ದಾರೆ. ಈ ವಿಷಯವನ್ನು ಖುಷಿಯಿಂದ ಹಂಚಿಕೊಂಡಿದ್ದಾರೆ ಪ್ರೇಮ್.
6/ 10
ಪ್ರೇಮ್ ಸದ್ಯ ಪ್ರೇಮಂ ಪೂಜ್ಯಂ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅವರ ಈ ತಯಾರಿ ಈ ಚಿತ್ರಕ್ಕಾಗಿಯೂ ಇರಬಹುದು ಎನ್ನಲಾಗುತ್ತಿದೆ.