Amrutha Prem: ಮೊದಲ ಸಿನಿಮಾಗೆ ನೆನಪಿರಲಿ ಪ್ರೇಮ್ ಮಗಳ ಸಂಭಾವನೆ ಇಷ್ಟಂತೆ! ಡಾಲಿ ಮನಸ್ಸು ದೊಡ್ಡದು ಎಂದ ಫ್ಯಾನ್ಸ್!
ಅಮೃತಾ ಪ್ರೇಮ್ ಅವರಲ್ಲಿ ಕನ್ನಡ ಚಿತ್ರರಂಗದ ನಾಯಕ ನಟಿ ಆಗುವಂತಹ ಎಲ್ಲಾ ಗುಣಲಕ್ಷಣಗಳು ಕೂಡ ಎದ್ದು ಕಾಣುತ್ತಿವೆ. ನೋಡುವುದಕ್ಕೆ ಮಹಾಲಕ್ಷ್ಮಿ ಥರ ಇದ್ದಾರೆ ಅಂತ ಡಾಲಿ ಧನಂಜಯ್ ಹೇಳಿದ್ದಾರೆ.
ಸ್ಯಾಂಡಲ್ವುಡ್ನ ಎವರ್ಗ್ರೀನ್ ಚಾಕೋಲೇಟ್ ಬಾಯ್ ಯಾರು ಅಂದ್ರೆ ಎಲ್ಲರೂ ನೆನಪಿರಲಿ ಪ್ರೇಮ್ ಹೆಸರು ಹೇಳುತ್ತಾರೆ. ಒಂದು ಸಮಯದಲ್ಲಿ ಕನ್ನಡ ಚಿತ್ರರಂಗದ ಚಾಕಲೇಟ್ ಹೀರೋ ಆಗಿ ಲವ್ಲಿ ಸ್ಟಾರ್ ಆಗಿ ನೆನಪಿರಲಿ ಪ್ರೇಮ್ ಅವರು ಕನ್ನಡ ಚಿತ್ರರಂಗದಲ್ಲಿ ಮಿಂಚಿಮೆರೆದವರು.
2/ 8
ಇಂದಿಗೂ ಕೂಡ ಕನ್ನಡ ಚಿತ್ರರಂಗದಲ್ಲಿ ನೆನಪಿರಲಿ ಪ್ರೇಮ್ ಆಗಾಗ ಸಿನಿಮಾಗಳಲ್ಲಿ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಅವರ ಇಬ್ಬರು ಮಕ್ಕಳು ಕೂಡ ಚಿತ್ರರಂಗಕ್ಕೆ ಪ್ರವೇಶಿಸಿದ್ದಾರೆ.
3/ 8
ಪ್ರೇಮ್ ಮಗಳಾಗಿರುವ ಅಮೃತ ಪ್ರೇಮ್ ಅವರು ಟಗರು ಪಲ್ಯ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ವಿಶೇಷ ಅಂದರೆ ಡಾಲಿ ಧನಂಜಯ್ ಅವರ ಬ್ಯಾನರ್ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ.
4/ 8
ಅಮೃತಾ ಪ್ರೇಮ್ ಅವರಲ್ಲಿ ಕನ್ನಡ ಚಿತ್ರರಂಗದ ನಾಯಕ ನಟಿ ಆಗುವಂತಹ ಎಲ್ಲಾ ಗುಣಲಕ್ಷಣಗಳು ಕೂಡ ಎದ್ದು ಕಾಣುತ್ತಿವೆ. ನೋಡುವುದಕ್ಕೆ ಮಹಾಲಕ್ಷ್ಮಿ ಥರ ಇದ್ದಾರೆ ಅಂತ ಡಾಲಿ ಧನಂಜಯ್ ಹೇಳಿದ್ದಾರೆ.
5/ 8
ಎಲ್ಲರೂ ಕೂಡ ಅಮೃತ ಪ್ರೇಮ್ ಅವರಿಗೆ ತಮ್ಮ ಮೊದಲ ಪಾದರ್ಪಣ ಸಿನಿಮಾಗಾಗಿ ಶುಭ ಹಾರೈಸುತ್ತಿದ್ದಾರೆ ಆದರೆ ಇದರ ನಡುವೆ ಅವರು ತಮ್ಮ ಮೊದಲ ಸಿನಿಮಾ ಗಾಗಿ ಡಿಮ್ಯಾಂಡ್ ಮಾಡುತ್ತಿರುವ ಸಂಭಾವನೆಯ ಬಗ್ಗೆ ಕೂಡ ತಿಳಿದುಬಂದಿದೆ.
6/ 8
ಅಮೃತಾ ಪ್ರೇಮ್ ಮೊದಲ ಸಿನಿಮಾಗೆ ಬರೋಬ್ಬರಿ 10 ಲಕ್ಷ ರೂಪಾಯಿ ಪಡೆದುಕೊಂಡಿದ್ದಾರೆ ಅಂತ ಹಲವು ಪತ್ರಿಕೆಗಳು ವರದಿ ಮಾಡಿವೆ.
7/ 8
ಮೊದಲ ಸಿನಿಮಾದಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಸಂಭಾವನೆ ಪಡೆಯುತ್ತಿರುವುದು ಅಥವಾ ಡಿಮ್ಯಾಂಡ್ ಮಾಡುತ್ತಿರುವುದು ನಿಜಕ್ಕೂ ಕೂಡ ನಿರ್ಮಾಪಕರ ಆಶ್ಚರ್ಯಕ್ಕೆ ಕಾರಣವಾಗಿದೆ. ಆದರೆ ಸಂಭಾವನೆ ಬಗ್ಗೆ ಯಾರೂ ಕೂಡ ಅಧಿಕೃತ ಮಾಹಿತಿ ಸಿಕ್ಕಿಲ್ಲ.
8/ 8
ಇನ್ನೂ ಪ್ರೇಮ್ ಅವರ ಕಿರಿಯ ಮಗ ಕೂಡ ಗುರು ಶಿಷ್ಯರು ಸಿನಿಮಾದಲ್ಲಿ ನಟಿಸಿದ್ದಾರೆ. ನಾನು ನಟಿಸುತ್ತಿರುವಾಗಲೇ ಇಬ್ಬರು ಸಿನಿಮಾ ರಂಗಕ್ಕೆ ಬಂದಿದ್ದು ಖುಷಿ ಕೊಟ್ಟಿದೆ ಎಂದಿದ್ದಾರೆ ನಟ ಪ್ರೇಮ್.