Prem: ನೆನಪಿರಲಿ ಪ್ರೇಮ್ಗೆ ಜಾಕ್ ಪಾಟ್ ಹೊಡೆಯಲಿದೆಯಂತೆ: ಅದಕ್ಕೆ ಕಾರಣ ಏನು ಗೊತ್ತಾ..?
Nenapirali Prem: ನೆನಪಿರಲಿ, ಜೊತೆ ಜೊತೆಯಲಿ, ಪಲ್ಲಕಿ ಸೇರಿದಂತೆಹಲವಾರು ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಪ್ರೇಮ್ ಜಾಕ್ ಪಾಟ್ ಹೊಡೆಯಲಿದೆಯಂತೆ. ಅದಕ್ಕೆ ಕಾರಣ ಯಾರು, ಅದು ಹೇಗೆ ಜಾಕ್ ಪಾಟ್ ಹೊಡೆಯಲಿದೆ ಅನ್ನೋದ್ರ ವಿವರಗಳಿಗಾಗಿ ಮುಂದೆ ಓದಿ. (ಚಿತ್ರಗಳು ಕೃಪೆ: ನೆನಪಿರಲಿ ಪ್ರೇಮ್ ಇನ್ಸ್ಟಾಗ್ರಾಂ ಖಾತೆ)
ಸ್ಯಾಂಡಲ್ವುಡ್ನ ಹ್ಯಾಂಡ್ಸಮ್ ಹೀರೋ ನೆನಪಿರಲಿ ಪ್ರೇಮ್, ಪ್ರಾಣ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟವರು.
2/ 10
ಆದರೆ ಅವರಿಗೆ ಹೆಸರು ತಂದುಕೊಟ್ಟಿದ್ದು ಮಾತ್ರ ನೆನಪಿರಲಿ ಚಿತ್ರ. ಹೌದು ಇದೇ ಕಾರಣಕ್ಕೆ ಸಿನಿಮಾದ ಹೆಸರು ನೆನಪಿರಲಿ ಈಗ ಅವರ ಹೆಸರಿನ ಜೊತೆಗೇ ಸೇರಿ ಹೋಗಿದೆ.
3/ 10
ನೆನಪಿರಲಿ, ಜೊತೆ ಜೊತೆಯಲಿ, ಪಲ್ಲಕಿ ಸೇರಿದಂತೆ ಹಲವಾರು ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಪ್ರೇಮ್ ಜೀವನಕ್ಕೆ ಅದೃಷ್ಟ ತಂದುಕೊಟ್ಟಿದ್ದು ಅವರ ಪತ್ನಿ ಜ್ಯೋತಿ ಎಂದು ಇಂದಿಗೂ ಹೇಳುತ್ತಾರೆ ಈ ನಟ.
4/ 10
ನಟ ಪ್ರೇಮ್ ಅವರ ಮನೆಯಲ್ಲಿ ಭೀಮನ ಅಮಾವಾಸ್ಯೆ ಪೂಜೆ ಜೋರಾಗಿಯೇ ನಡೆದಿದೆ. ಜ್ಯೋತಿ ಪತಿಯ ಪಾದ ಪೂಜೆ ಮಾಡಿದ್ದಾರೆ. ಈ ಫೋಟೋವನ್ನು ಪ್ರೇಮ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
5/ 10
ಜ್ಯೋತಿಯನ್ನು ಪ್ರೀತಿಸಿದ ನಂತರ ಪ್ರೇಮ್ ಅವರ ಆಯಸ್ಸು ಹೆಚ್ಚಾಯಿತಂತೆ. ಮದುವೆಯಾದ ನಂತರ ಅದೃಷ್ಟ ಖುಲಾಯಿಸಿತಂತೆ. ಈಗ ಪಾದಪೂಜೆ ಮಾಡಿದ್ದಾರೆ ಇದರಿಂದ ಜಾಕ್ ಪಾಟ್ ಹೊಡೆಯುತ್ತೆ ಎಂದು ಪತ್ನಿಯನ್ನು ಹಾಡಿ ಹೊಗಳಿದ್ದಾರೆ ಪ್ರೇಮ್.
6/ 10
ಪಾದಪೂಜೆ ಮಾಡಿದ ಮಡದಿ ಜ್ಯೋತಿ ಅವರಿಗೆ ಗುಲಾಭಿ ಹೂವಿನ ಗುಚ್ಛ ನೀಡಿ, ಹ್ಯಾಪಿ ರೋಜ್ ಡೇ ಎಂದಿದ್ದಾರೆ.
7/ 10
ಈ ಹೃದಯದ ಸಿದ್ಧತೆ ನೀನು.... ಉಸಿರಾಟದ ಪದ್ಧತಿ ನೀನು... HAPPY ROSE DAY ಡಾರ್ಲಿಂಗು ಅಂತ ಮಡದಿಗಾಗಿ ಕವಿತೆ ಬರೆದಿದ್ದಾರೆ ಪ್ರೇಮ್.
8/ 10
ಸಿನಿಮಾಗೆ ಬರುವ ಮೊದಲೇ ಪ್ರೇಮ್ ಹಾಗೂ ಜ್ಯೋತಿ ಪ್ರೀತಿಸಿ ವಿವಾಹವಾಗಿದ್ದರು. ದೊಡ್ಡವರ ಇಷ್ಟಕ್ಕೆ ವಿರುದ್ಧವಾಗಿ ಮದುವೆಯಾಗಿದ್ದು, ನಂತರ ಮತ್ತೆ ಎರಡನೇ ಸಲ ವಿವಾಹವಾಗಿದ್ದರು.
9/ 10
ಪ್ರೇಮ್ -ಜ್ಯೋತಿ ದಂಪತಿಗೆ ಮುದ್ದಾದ ಮಗಳು ಹಾಗೂ ಮಗ ಇದ್ದಾರೆ.
10/ 10
ಪ್ರೇಮ್ ಸದ್ಯ 'ಪ್ರೇಮಂ ಪೂಜ್ಯಂ' ಎಂಬ ವಿಭಿನ್ನ ಲವ್ ಸ್ಟೋರಿಯಲ್ಲಿ ನಟಿಸುತ್ತಿದ್ದಾರೆ.