Nayanthara: ಲವ್ ಪದದ ಅರ್ಥವೇ ವಿಕ್ಕಿ! ಪತಿ ವಿಘ್ನೇಶ್ ಶಿವನ್ ಬಗ್ಗೆ ನಯನತಾರಾ ಪ್ರೀತಿ ಮಾತು
ಲೇಡಿ ಸೂಪರ್ ಸ್ಟಾರ್ ನಯನತಾರಾ ಬಹು ನಿರೀಕ್ಷಿತ ಚಿತ್ರ ಕನೆಕ್ಟ್ ಸಿನಿಮಾ ರಿಲೀಸ್ ಆಗಿದ್ದು, ಉತ್ತಮ ಪ್ರದರ್ಶನ ಕಾಣ್ತಿದೆ. ಸಿನಿಮಾ ಪ್ರಮೋಷನ್ ವೇಳೆ ನಯನತಾರಾ ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಸಂದರ್ಶನವೊಂದರಲ್ಲಿ ಕನೆಕ್ಟ್ ಸಿನಿಮಾ ಬಗ್ಗೆ ಮಾತಾಡಿದ ನಯನತಾರಾ, ಪತಿ ವಿಘ್ನೇಶ್ ಶಿವನ್ ಬಗ್ಗೆ ಕೂಡ ಅನೇಕ ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
2/ 8
ಆ್ಯಂಕರ್ ಕೇಳಿದ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದ ನಯನತಾರಾ, ಹಾರ್ಟ್ ಚಿತ್ರ ತೋರಿಸುತ್ತಿದ್ದಂತೆ ಹಾರ್ಟ್ ಅಂದ್ರೆ ನನಗೆ ನನ್ನ ಗಂಡ ಶಿವನ್ ಎಂದಿದ್ದಾರೆ.
3/ 8
ನನ್ನ ಪ್ರೀತಿ ಎಂದ್ರೆ ನನ್ನ ಗಂಡ. ಪ್ರೀತಿ ಎಂದು ಭಾವಿಸಿದ್ದೆಲ್ಲಾ ಅವನೇ ಎಂದಿದ್ದಾರೆ. ನಾವು ಡೇಟಿಂಗ್ ಶುರು ಮಾಡಿದಾಗಿನಿಂದ ನನ್ನ ಲವ್ ವಿಕ್ಕಿ ಎಂದ್ರು.
4/ 8
ಪ್ರೀತಿ ಪದದ ಅರ್ಥವೇ ವಿಕ್ಕಿ ಎಂದು ನಯನತಾರಾ ಹೇಳಿದ್ದಾರೆ. ವಿಘ್ನೇಶ್ ಪ್ರೀತಿ ನನ್ನನ್ನು ತುಂಬಾ ಕೂಲ್ ಮಾಡಿದೆ. ಜೀವನದಲ್ಲಿ ಎಂಥಾ ಪರಿಸ್ಥಿತಿ ಬಂದರೂ, ನಮ್ಮ ಬಗ್ಗೆ ಯಾರು ಏನೇ ಹೇಳಿದರೂ ಚಿಂತೆ ಪಡುವ ಅಗತ್ಯವಿಲ್ಲ ಎಂದ್ರು.
5/ 8
ವಿಘ್ನೇಶ್ ನನ್ನನ್ನು ನೋಡಿಕೊಳ್ಳುವ ರೀತಿ ಮತ್ತು ನನ್ನ ಕೆಲಸದಲ್ಲಿ ಅವರು ನೀಡುವ ಬೆಂಬಲ ನನಗೆ ತುಂಬಾ ಇಷ್ಟವಾಗಿದೆ ಎಂದು ನಯನತಾರಾ ಹೇಳಿದ್ದಾರೆ.
6/ 8
ಏನೇ ಆಗಲಿ ವಿಘ್ನೇಶ್ ನಮ್ಮೊಂದಿಗೆ ಇರುತ್ತಾರೆ. ಅವ್ರು ನನ್ನ ಜೊತೆ ಇದ್ರೆ ನನಗೆ ಅದೇ ಖುಷಿ, ವಿಕ್ಕಿ ನನಗೆ ಸಾಕಷ್ಟು ಉಡುಗೊರೆ ನೀಡಿದ್ದಾರೆ. ಇದೆಲ್ಲವೂ ನನಗೆ ತುಂಬಾ ವಿಶೇಷವಾಗಿದೆ ಎಂದು ನಯನತಾರ ಹೇಳಿದ್ದಾರೆ
7/ 8
ಇದೇ ವೇಳೆ ಮೇಕಪ್ ಬಗ್ಗೆ ಮಾತಾಡಿದ ನಯನತಾರಾ, ಇದು ನನ್ನ ಲೈಫ್ ಎಂದಿದ್ದಾರೆ. ನಿತ್ಯ ನಾನು ಮೇಕಪ್ ಹಾಕುತ್ತೇನೆ. ಮೇಕಪ್ ನನಗೆ ದೇವರಿದ್ದಂತೆ ಎಂದು ಹೇಳಿದ್ದಾರೆ.
8/ 8
ಮೇಕಪ್ ಹಾಕಲು ಶುರುಮಾಡಿದಾಗ ದೇವರಿಗೆ ಕೈ ಮುಗಿದು ಹಾಕಿಕೊಳ್ತೇನೆ. ಮೇಕಪ್ ವಸ್ತುಗಳನ್ನು ಮುಟ್ಟಿ ನಮಸ್ಕರಿಸುವುದಾಗು ನಯನತಾರ ಹೇಳಿದ್ದಾರೆ.