Nayanthara Is Back To Shooting: ನಯನತಾರಾ, ವಿಘ್ನೇಶ್ ಶಿವನ್ ಹನಿಮೂನ್ ಟೂರ್ ಮುಗಿಸಿ ಬಂದಿದ್ದಾರೆ. ಆದರೆ, ಹನಿಮೂನ್ ಬಳಿಕ ನಯನತಾರಾ ಶೂಟಿಂಗ್ ಸೆಟ್ ಗೆ ಕಾಲಿಟ್ಟಿದ್ದಾರೆ. ನಯನತಾರಾ ಜವಾನ್ ಚಿತ್ರದ ಮೂಲಕ ಶಾರುಖ್ ಖಾನ್ ಜೊತೆ ಬಾಲಿವುಡ್ ಗೆ ಪಾದಾರ್ಪಣೆ ಮಾಡುತ್ತಿರುವುದು ಗೊತ್ತೇ ಇದೆ. ತಮಿಳು ನಿರ್ದೇಶಕ ಅಟ್ಲಿ ನಿರ್ದೇಶನದ ಮತ್ತು ಬಾಲಿವುಡ್ ಬಾದ್ ಶಾ ಶಾರುಖ್ ಅಭಿನಯದ ಪ್ಯಾನ್ ಇಂಡಿಯಾ ಚಿತ್ರ ಜವಾನ್ ಶೂಟಿಂಗ್ ಮುಂಬೈನಲ್ಲಿ ನಡೆಯುತ್ತಿದೆ.
ಸೌತ್ ಇಂಡಸ್ಟ್ರಿ ಲೇಡಿ ಸೂಪರ್ ಸ್ಟಾರ್ ನಯನತಾರಾ ಅವರನ್ನು ಮದುವೆಯಾಗಿರುವುದು ಗೊತ್ತೇ ಇದೆ. ಖ್ಯಾತ ಕಾಲಿವುಡ್ ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಸುಮಾರು ಏಳು ವರ್ಷಗಳಿಂದ ಇಬ್ಬರೂ ಡೇಟಿಂಗ್ ನಡೆಸುತ್ತಿದ್ದ ವಿಚಾರ ಸಹ ಎಲ್ಲರಿಗೂ ಗೊತ್ತು. ನಯನತಾರಾ ಅವರ ಕ್ರೇಜ್ ಏನೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
2/ 8
ಇನ್ನೂ ಸರಣಿ ಸಿನಿಮಾಗಳಲ್ಲಿ ಈ ಜೋಡಿ ಬ್ಯುಸಿ ಇದೆ. ನಯನತಾರಾ ಪತಿಯೊಂದಿಗೆ ಥಾಯ್ಲೆಂಡ್ಗೆ ತೆರಳಿದ್ದಾರೆ. ಹನಿಮೂನ್ ಅನ್ನು ಪೂರ್ತಿಯಾಗಿ ಎಂಜಾಯ್ ಮಾಡಿದ ಈ ಸುಂದರಿ, ಮರಳಿ ಬಂದ ತಕ್ಷಣ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
3/ 8
ನಯನತಾರಾ ಮದುವೆಯಾದ ನಂತರ ಕನಿಷ್ಠ ಎರಡು ಮೂರು ತಿಂಗಳ ಗ್ಯಾಪ್ ತೆಗೆದುಕೊಂಡು ಎಂಜಾಯ್ ಮಾಡುತ್ತಾರೆ ಎಂದು ಜನ ತಿಳಿದಿದ್ದರು. ಆದರೆ ಒಂದೇ ತಿಂಗಳಲ್ಲಿ ನಯನತಾರಾ ಶೂಟಿಂಗ್ ಗೆ ಬಂದು ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.
4/ 8
ನಯನತಾರಾ ಶಾರುಖ್ ಖಾನ್ ನಾಯಕನಾಗಿ ನಟಿಸುತ್ತಿರುವ ಜವಾನ್ ಹಿಂದಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದಲ್ಲದೇ ಮಲಯಾಳಂ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ತೆಲುಗಿನಲ್ಲಿ ಚಿರಂಜೀವಿ ಅಭಿನಯದ ಗಾಡ್ ಫಾದರ್ ಚಿತ್ರೀಕರಣ ಮುಗಿದಿದೆ.
5/ 8
ಹನಿಮೂನ್ ಮುಗಿಸಿ ನಯನತಾರಾ ನೇರವಾಗಿ ಶಾರುಖ್ ಖಾನ್ ಸಿನಿಮಾ ಲೊಕೇಶನ್ ಗೆ ತೆರಳಿದ್ದಾರೆ. ಮುಂಬೈ ಫಿಲಂ ಸಿಟಿಯಲ್ಲಿ ನಡೆಯುತ್ತಿರುವ ಜವಾನ್ ಚಿತ್ರದ ಸೆಟ್ನತ್ತ ಹೆಜ್ಜೆ ಹಾಕಿದ್ದಾರೆ.
6/ 8
ನಯನತಾರಾ ಜವಾನ್ ಚಿತ್ರದ ಮೂಲಕ ಶಾರುಖ್ ಖಾನ್ ಜೊತೆ ಬಾಲಿವುಡ್ ಗೆ ಪಾದಾರ್ಪಣೆ ಮಾಡುತ್ತಿರುವುದು ಗೊತ್ತೇ ಇದೆ. ತಮಿಳಿನ ನಿರ್ದೇಶಕ ಅಟ್ಲಿ ಮತ್ತು ಬಾಲಿವುಡ್ ಬಾದ್ಶಾ ಶಾರುಖ್ ಕಾಂಬಿನೇಷನ್ನ ಪ್ಯಾನ್ ಇಂಡಿಯಾ ಚಿತ್ರ ಜವಾನ್ ಶೂಟಿಂಗ್ ಮುಂಬೈನಲ್ಲಿ ಆಗುತ್ತಿದೆ.
7/ 8
ಜವಾನ್ ಸಿನಿಮಾ ಶೂಟಿಂಗ್ ನಲ್ಲಿ ಒಂಬತ್ತು ಶೆಡ್ಯೂಲ್ ಗಳಿದ್ದ ಕಾರಣ ಹನಿಮೂನ್ ಮುಗಿಸಿ ವಾಪಸ್ ಬಂದ ತಕ್ಷಣ ಶೂಟಿಂಗ್ ಗಾಗಿ ಮುಂಬೈಗೆ ತೆರಳಿದ್ದಾರೆ. ಕೆಲಸದಲ್ಲಿ ನಯನತಾರಾ ಅವರ ಆಸಕ್ತಿಗೆ ಮೆಚ್ಚುಗೆ ವ್ಯಕ್ತವಾಗಿದೆ.
8/ 8
ಕಳೆದ ಕೆಲವು ವರ್ಷಗಳಿಂದ ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ಪ್ರೀತಿಸುತ್ತಿದ್ದ ನಯನತಾರಾ ಇತ್ತೀಚೆಗೆ ಜೂನ್ 9 ರಂದು ವಿವಾಹವಾಗಿದ್ದಾರೆ. ಮದುವೆಯ ನಂತರ ಮೊದಲು ತಿರುಮಲಕ್ಕೆ ಹೋಗಿ ವೆಂಕಟೇಶ್ವರಸ್ವಾಮಿಯ ದರ್ಶನ ಪಡೆದ ದಂಪತಿಗಳು ಹನಿಮೂನ್ಗಾಗಿ ಥಾಯ್ಲೆಂಡ್ಗೆ ತೆರಳಿದ್ದರು.