ಮತ್ತೊಂದು ಪೋಸ್ಟ್‌ನಲ್ಲಿ ವಿಘ್ನೇಶ್ ಅವರು ನಯನತಾರಾ ತಮ್ಮ ಮಕ್ಕಳನ್ನು ಮುದ್ದಿಸುತ್ತಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರಗಳನ್ನು ಹಂಚಿಕೊಂಡಿರುವ ಅವರು, 'ಪ್ರೀತಿಯ ನಯನ' ತಾಯಿಯಾಗಿ ನೀವು ಸಹ 10 ರಲ್ಲಿ 10 ಎಂದು ಕ್ಯಾಪ್ಶನ್ ಬರೆದಿದ್ದಾರೆ. ನನ್ನ ಚಿನ್ನ, ನಿನಗೆ ಬಹಳಷ್ಟು ಪ್ರೀತಿ ಮತ್ತು ಶಕ್ತಿ! ನಿಮ್ಮ ಮೊದಲ ತಾಯಂದಿರ ದಿನ ಮತ್ತು ನಮ್ಮೆ ಕನಸು ನನಸಾಗಿದೆ ಎಂದಿದ್ದಾರೆ.