Rishab Shetty: ರಿಷಬ್ ಜೊತೆ ನವಾಜುದ್ದೀನ್ ಸಿದ್ದಿಕಿ ಸಿನಿಮಾ! ಬಾಲಿವುಡ್ ನಟ ಕೊಟ್ರು ಹಿಂಟ್

Rishab Shetty: ರಿಷಬ್ ಶೆಟ್ಟಿ ಹಾಗೂ ನವಾಜುದ್ದೀನ್ ಸಿದ್ದಿಕಿ ಸಿನಿಮಾ ಮಾಡ್ತಾರಾ? ಬಾಲಿವುಡ್ ನಟ ಹಾಗೂ ಸ್ಯಾಂಡಲ್​ವುಡ್ ಡಿವೈನ್ ಸ್ಟಾರ್ ಒಂದಾಗ್ತಾರಾ?

First published:

  • 17

    Rishab Shetty: ರಿಷಬ್ ಜೊತೆ ನವಾಜುದ್ದೀನ್ ಸಿದ್ದಿಕಿ ಸಿನಿಮಾ! ಬಾಲಿವುಡ್ ನಟ ಕೊಟ್ರು ಹಿಂಟ್

    ಕಾಂತಾರ ಸಿನಿಮಾ ರಿಲೀಸ್ ಆಗಿ ತಿಂಗಳುಗಳೇ ಕಳೆದರೂ ನಿರ್ದೇಶಕ, ನಟ ರಿಷಬ್ ಶೆಟ್ಟಿ ಅವರಿಗೆ ಪ್ರಶಂಸೆ ವ್ಯಕ್ತವಾಗುತ್ತಲೇ ಇದೆ. ಸ್ಯಾಂಡಲ್​ವುಡ್​ನಲ್ಲಿ ಹೊಸ ಅಲೆ ಸೃಷ್ಟಿಸಿದ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಕಾಂತಾರಕ್ಕೆ ವ್ಯಾಪಕ ಮೆಚ್ಚುಗೆ ಹರಿದುಬಂತು. ಇತ್ತೀಚೆಗೆ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಅವರು ಕಾಂತಾರ ನಟ ರಿಷಬ್ ಶೆಟ್ಟಿ ಕುರಿತು ಮಾತನಾಡಿದ್ದಾರೆ.

    MORE
    GALLERIES

  • 27

    Rishab Shetty: ರಿಷಬ್ ಜೊತೆ ನವಾಜುದ್ದೀನ್ ಸಿದ್ದಿಕಿ ಸಿನಿಮಾ! ಬಾಲಿವುಡ್ ನಟ ಕೊಟ್ರು ಹಿಂಟ್

    ಡಿಸೆಂಬರ್​ನಲ್ಲಿ ರಿಷಬ್ ಶೆಟ್ಟಿ ಅವರನ್ನು ಭೇಟಿಯಾದ ಸಮಯದ ಕುರಿತು ನವಾಜುದ್ದೀನ್ ಪ್ರತಿಕ್ರಿಯಿಸಿದ್ದಾರೆ. ನಟ ಅವರ ಭೇಟಿಯ ಫೋಟೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿದ್ದಾರೆ.

    MORE
    GALLERIES

  • 37

    Rishab Shetty: ರಿಷಬ್ ಜೊತೆ ನವಾಜುದ್ದೀನ್ ಸಿದ್ದಿಕಿ ಸಿನಿಮಾ! ಬಾಲಿವುಡ್ ನಟ ಕೊಟ್ರು ಹಿಂಟ್

    ಇತ್ತೀಚೆಗೆ ಪಿಂಕ್ವಿಲ್ಲಾ ಜೊತೆ ಮಾತನಾಡಿದ ನಟ ಈ ಬಗ್ಗೆ ಇನ್ನಷ್ಟು ವಿವರಗಳನ್ನು ಶೇರ್ ಮಾಡಿದ್ದಾರೆ. ರಿಷಬ್ ಹಾಗು ಅವರ ಸ್ನೇಹಿತರು ಥಿಯೇಟರ್​ಗೆ ಬೇಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ನಮ್ಮ ಗುರುಗಳು ಸೇಮ್ ಎನ್ನುವುದು ವಿಶೇಷವಾದ ಸಂಗತಿ ಎಂದಿದ್ದಾರೆ ನವಾಜುದ್ದೀನ್ ಸಿದ್ದಿಕಿ.

    MORE
    GALLERIES

  • 47

    Rishab Shetty: ರಿಷಬ್ ಜೊತೆ ನವಾಜುದ್ದೀನ್ ಸಿದ್ದಿಕಿ ಸಿನಿಮಾ! ಬಾಲಿವುಡ್ ನಟ ಕೊಟ್ರು ಹಿಂಟ್

    ನಿಮ್ಮೊಂದಿಗೆ ನಮ್ಮ ಮನೆಯಲ್ಲಿ ಸ್ವಲ್ಪ ಕ್ವಾಲಿಟಿ ಸಮಯ ಕಳೆಯಲು ಖುಷಿಯಾಗಿದೆ. ವಿಶೇಷ ಏನೆಂದರೆ ನನ್ನಲ್ಲೂ ರಿಷಬ್ ಶೆಟ್ಟಿ ಅವರಲ್ಲೂ ಬಹಳಷ್ಟು ವಿಚಾರಗಳು ಒಂದೇ ರೀತಿ ಇದೆ. ಇದರ ಬಗ್ಗೆ ನಾವು ಮಾತನಾಡುತ್ತಲೇ ಇರಬಹುದು ಎಂದಿದ್ದಾರೆ.

    MORE
    GALLERIES

  • 57

    Rishab Shetty: ರಿಷಬ್ ಜೊತೆ ನವಾಜುದ್ದೀನ್ ಸಿದ್ದಿಕಿ ಸಿನಿಮಾ! ಬಾಲಿವುಡ್ ನಟ ಕೊಟ್ರು ಹಿಂಟ್

    ಅವರು ಈಗಲೂ ಥಿಯೇಟರ್​ ಜೊತೆ ಸಂಬಂಧ ಉಳಿಸಿಕೊಂಡಿದ್ದು ಅವರಿನ್ನೂ ಅವರು ನಡೆದುಬಂದ ಹಾದಿಗೆ ಆತ್ಮೀಯವಾಗಿದ್ದಾರೆ. ಅವರ ಸಂಸ್ಕೃತಿಗೆ ಹೆಚ್ಚು ಕನೆಕ್ಟ್ ಆಗಿದ್ದಾರೆ. ಅದರ ಕುರಿತು ಸಿನಿಮಾ ಕೂಡಾ ಮಾಡಿದ್ದಾರೆ. ನಮ್ಮ ಗುರುಗಳು ಒಂದೇ ಆಗಿರುವುದರಿಂದ ನಮ್ಮ ಸಂಬಂಧ ವಿಶೇಷವಾಗಿದೆ. ಈಗ ನಾವು ಸ್ನೇಹಿತರು ಎಂದಿದ್ದಾರೆ.

    MORE
    GALLERIES

  • 67

    Rishab Shetty: ರಿಷಬ್ ಜೊತೆ ನವಾಜುದ್ದೀನ್ ಸಿದ್ದಿಕಿ ಸಿನಿಮಾ! ಬಾಲಿವುಡ್ ನಟ ಕೊಟ್ರು ಹಿಂಟ್

    ಅವರು ತಮ್ಮ ಭೇಟಿಯಲ್ಲಿ ಒಟ್ಟಿಗೆ ಕೆಲಸ ಮಾಡುವ ಬಗ್ಗೆಯೂ ಮಾತನಾಡಿದ್ದಾರೆ. ಕಾಂತಾರ 2ಗೆ ನವಾಜುದ್ದೀನ್ ಸಿದ್ದಿಕಿ ರಿಷಬ್ ಶೆಟ್ಟಿ ಜೊತೆ ಕೆಲಸ ಮಾಡುತ್ತಾರಾ? ನಟರ ಅಭಿಮಾನಿಗಳು ಈ ರೀತಿಯೂ ನಿರೀಕ್ಷಿಸುತ್ತಿದ್ದಾರೆ.

    MORE
    GALLERIES

  • 77

    Rishab Shetty: ರಿಷಬ್ ಜೊತೆ ನವಾಜುದ್ದೀನ್ ಸಿದ್ದಿಕಿ ಸಿನಿಮಾ! ಬಾಲಿವುಡ್ ನಟ ಕೊಟ್ರು ಹಿಂಟ್

    ನಾನ್ಯಾಕೆ ಅವರೊಂದಿಗೆ ಕೆಲಸ ಮಾಡಲು ಬಯಸಬಾರದು? ಅವರು ಅದ್ಭುತ ನಟ, ನಿರ್ದೇಶಕ, ರಾಜ್ ಶೆಟ್ಟಿ ಅವರನ್ನು ಒಳಗೊಂಡಂತೆ ಇಡೀ ತಂಡವೇ ತುಂಬಾ ಟ್ಯಾಲೆಂಟೆಡ್ ಆಗಿದೆ ಎಂದಿದ್ದಾರೆ ಬಾಲಿವುಡ್ ನಟ.

    MORE
    GALLERIES