The Kerala Story: ಕೇರಳ ಸ್ಟೋರಿ ವಿರೋಧಿಸಿದ್ರಾ ನಟ ನವಾಜುದ್ದೀನ್? ಹೇಳಿದ್ದೇನು?

Nawazuddin: ನಟ ನವಾಜುದ್ದೀನ್ ಸಿದ್ದಿಕಿ ಕೂಡಾ ದಿ ಕೇರಳ ಸ್ಟೋರಿ ಸಿನಿಮಾ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಏನಂದಿದ್ದಾರೆ ಗೊತ್ತೇ?

First published:

  • 18

    The Kerala Story: ಕೇರಳ ಸ್ಟೋರಿ ವಿರೋಧಿಸಿದ್ರಾ ನಟ ನವಾಜುದ್ದೀನ್? ಹೇಳಿದ್ದೇನು?

    ಬಾಕ್ಸ್ ಆಫೀಸ್​ನಲ್ಲಿ ದಿ ಕೇರಳ ಸ್ಟೋರಿ ಸಿನಿಮಾದ ಓಟ ಮುಂದುವರಿದಿದೆ. ಸಿನಿಮಾ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಲೇ ಪ್ರಶಂಸೆಗೂ ಪಾತ್ರವಾಗಿದೆ. ಒಂದಷ್ಟು ಜನರು ಸಿನಿಮಾ ಹೊಗಳಿದರೆ ಇನ್ನೊಂದಷ್ಟು ಜನರು ಸಿನಿಮಾಗೆ ಟೀಕೆ ವ್ಯಕ್ತಪಡಿಸಿದ್ದಾರೆ. ಇದೀಗ ಬಾಲಿವುಡ್ ನಟನೂ ಸಿನಿಮಾ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

    MORE
    GALLERIES

  • 28

    The Kerala Story: ಕೇರಳ ಸ್ಟೋರಿ ವಿರೋಧಿಸಿದ್ರಾ ನಟ ನವಾಜುದ್ದೀನ್? ಹೇಳಿದ್ದೇನು?

    ಹಿಂದೂ ಯುವತಿಯರು ಮುಸ್ಲಿಂ ಸಮುದಾಯಕ್ಕೆ ಮತಾಂತರವಾಗುವ ಕಥೆ ಹೇಳುವ ಈ ಸಿನಿಮಾ ಸೂಪರ್​​ಹಿಟ್ ಆಗಿದೆ. ಈಗಾಗಲೇ 200 ಕೋಟಿಯ ಕ್ಲಬ್ ಸೇರಿರುವ ಸಿನಿಮಾ ಬಾಲಿವುಡ್​ನಲ್ಲಿ 2023ರಲ್ಲಿ ಅತ್ಯಧಿಕ ಗಳಿಸಿದ ಎರಡನೇ ಸಿನಿಮಾ ಆಗಿ ಹೊರಹೊಮ್ಮಿದೆ.

    MORE
    GALLERIES

  • 38

    The Kerala Story: ಕೇರಳ ಸ್ಟೋರಿ ವಿರೋಧಿಸಿದ್ರಾ ನಟ ನವಾಜುದ್ದೀನ್? ಹೇಳಿದ್ದೇನು?

    ಇತ್ತೀಚೆಗೆ ನಿರ್ದೇಶಕ, ನಟ ಅನುರಾಗ್ ಕಷ್ಯಪ್ ಅವರು ಸಿನಿಮಾ ಸಂಬಂಧ ಪ್ರತಿಕ್ರಿಯಿಸಿ ಅದನ್ನು ಬ್ಯಾನ್ ಮಾಡುವ ಬೇಡಿಕೆ ಬಗ್ಗೆ ಪ್ರತಿಕ್ರಿಯಿಸಿದರು. ನೀವು ಸಿನಿಮಾವನ್ನು ಒಪ್ಪುತ್ತೀರೋ, ಇಲ್ಲವೋ, ಅದು ಪ್ರೊಪಗಾಂಡ ಸಿನಿಮಾವೇ ಆಗಿರಲಿ. ಅಥವಾ ಕೌಂಟರ್ ಪ್ರೊಪಗಾಂಡವೇ ಆಗಿರಲಿ, ಅಫೆನ್ಸಿವ್ ಅಥವಾ ಅಲ್ಲದೆಯೂ ಇರಲಿ. ಆದರೆ ಒಂದು ಸಿನಿಮಾವನ್ನು ಬ್ಯಾನ್ ಮಾಡುವುದು ತಪ್ಪು ಎಂದು ಬರೆದಿದ್ದರು.

    MORE
    GALLERIES

  • 48

    The Kerala Story: ಕೇರಳ ಸ್ಟೋರಿ ವಿರೋಧಿಸಿದ್ರಾ ನಟ ನವಾಜುದ್ದೀನ್? ಹೇಳಿದ್ದೇನು?

    ಈಗ ನ್ಯೂಸ್ 18 ಜೊತೆಗಿನ ಎಕ್ಸ್​ಕ್ಲೂಸಿವ್ ಚಿಟ್​ಚಾಟ್​ನಲ್ಲಿ ಮಾತನಾಡಿದ ನಟ ನವಾಜುದ್ದೀನ್ ಸಿದ್ದಿಕಿ ಕೂಡಾ ದಿ ಕೇರಳ ಸ್ಟೋರಿ ಸಿನಿಮಾ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

    MORE
    GALLERIES

  • 58

    The Kerala Story: ಕೇರಳ ಸ್ಟೋರಿ ವಿರೋಧಿಸಿದ್ರಾ ನಟ ನವಾಜುದ್ದೀನ್? ಹೇಳಿದ್ದೇನು?

    ಅನುರಾಗ್ ಅವರ ಪೋಸ್ಟ್ ಬಗ್ಗೆ ಪ್ರತಿಕ್ರಿಯಿಸಿ ನಾನು ಅದನ್ನು ಒಪ್ಪುತ್ತೇನೆ ಎಂದಿದ್ದಾರೆ. ಆದರೆ ಒಂದು ಸಿನಿಮಾ ಅಥವಾ ಕಾದಂಬರಿ ಯಾರಿಗಾದರೂ ನೋವು ನೀಡುತ್ತಿದ್ದರೆ ಅದು ತಪ್ಪು. ನಾವು ಜನರು ಅಥವಾ ಅವರ ಭಾವನೆಗಳನ್ನು ನೋಯಿಸಲು ಸಿನಿಮಾ ಮಾಡುವುದಿಲ್ಲ ಎಂದಿದ್ದಾರೆ.

    MORE
    GALLERIES

  • 68

    The Kerala Story: ಕೇರಳ ಸ್ಟೋರಿ ವಿರೋಧಿಸಿದ್ರಾ ನಟ ನವಾಜುದ್ದೀನ್? ಹೇಳಿದ್ದೇನು?

    ಯಾವುದೇ ಕಲೆಯು ಜನರನ್ನು ಒಟ್ಟುಗೂಡಿಸಬೇಕು. ಅವರಲ್ಲಿಯೇ ಗುಂಪುಗಳನ್ನು ಸೃಷ್ಟಿಸಬಾರದು. ನಾವು ಸಮಾಜದ ಸಾಮರಸ್ಯ ಉಳಿಸುವ ಸಿನಿಮಾ ಮಾಡಬೇಕು. ಜನರ ಮಧ್ಯೆ ಪ್ರೀತಿ ಹಂಚುವ ಸಿನಿಮಾ ಮಾಡಬೇಕು ಎಂದಿದ್ದಾರೆ.

    MORE
    GALLERIES

  • 78

    The Kerala Story: ಕೇರಳ ಸ್ಟೋರಿ ವಿರೋಧಿಸಿದ್ರಾ ನಟ ನವಾಜುದ್ದೀನ್? ಹೇಳಿದ್ದೇನು?

    ಪ್ರೀತಿಯನ್ನು ಸಾರುವುದು ನಮ್ಮ ಜವಾಬ್ದಾರಿಯೂ ಆಗಿದೆ. ಈ ಜಗತ್ತಿನಲ್ಲಿ ಯಾವುದೂ ಕೂಡಾ ನಿಷೇಧಿಸಲ್ಪಡಲು ಅರ್ಹವಲ್ಲ. ಆದರೆ ಒಂದು ಸಿನಿಮಾಗೆ ಜನರನ್ನು ಒಡೆಯಲು, ಸಮಾಜದ ಸಾಮರಸ್ಯ ಕೆಡಿಸುವ ಶಕ್ತಿ ಇದ್ದರೆ ಅದು ಖಂಡಿತಾ ತಪ್ಪು ಎಂದಿದ್ದಾರೆ.

    MORE
    GALLERIES

  • 88

    The Kerala Story: ಕೇರಳ ಸ್ಟೋರಿ ವಿರೋಧಿಸಿದ್ರಾ ನಟ ನವಾಜುದ್ದೀನ್? ಹೇಳಿದ್ದೇನು?

    ನವಾಜುದ್ದೀನ್ ಅವರು ಜೋಗೀರಾ ಸಾರಾ ರಾ ರಾ ಸಿನಿಮಾ ಮೇ 12ರಂದು ರಿಲೀಸ್ ಆಗಬೇಕಿತ್ತು. ಆದರೆ ಈಗ ಸಿನಿಮಾ ರಿಲೀಸ್ ಮೇ 26ಕ್ಕೆ ಮುಂದೂಡಲಾಗಿದೆ. ಕೇರಳ ಸ್ಟೋರಿ ಬಾಕ್ಸ್ ಆಫೀಸ್ ರನ್ ಮುಗಿಯದ ಕಾರಣ ಈ ಸಿನಿಮಾ ರಿಲೀಸ್ ಮುಂದೂಡಲಾಗಿದೆ.

    MORE
    GALLERIES