ನವರಾತ್ರಿ ವಿಶೇಷ: ದೇವಿಯ ಅವತಾರ ತಾಳಿದ ನಟಿ Shwetha Srivatsav
ಎಲ್ಲೆಡೆ ನವರಾತ್ರಿ (Navaratri) ಹಬ್ಬದ ಸಂಭ್ರಮ ಮನೆ ಮಾಡಿದೆ. ಹಬ್ಬ ಆಚರಿಸಲು ಮನೆಗಳಲ್ಲಿ ತಯಾರಿ ಜೋರಾಗಿ ನಡೆದಿದೆ. ಇನ್ನು ಸಿನಿ ಸೆಲೆಬ್ರಿಟಿಗಳ ಕೊಂಚ ವಿಭಿನ್ನವಾಗಿ ಈ ಹಬ್ಬವನ್ನುಆಚರಿಸಲು ಮುಂದಾಗಿದ್ದಾರೆ. ಹೌದು, ನಟಿ ಶ್ವೇತಾ ಶ್ರೀವಾತ್ಸವ(Shwetha Srivatsav) ಅವರು ಎಂದಿನಂತೆ ಈ ಸಲವೂ ನವರಾತ್ರಿಗೆಂದು ವಿಶೇಷ ಫೋಟೋಶೂಟ್ಗೆ ಪೋಸ್ ಕೊಟ್ಟಿದ್ದಾರೆ. (ಚಿತ್ರಗಳು ಕೃಪೆ: ಶ್ವೇತಾ ಶ್ರೀವಾತ್ಸವ ಇನ್ಸ್ಟಾಗ್ರಾಂ ಖಾತೆ)
ಸದಾ ವಿಭಿನ್ನವಾದ ಹಾಗೂ ಆಯಾ ಸಂದರ್ಭಕ್ಕೆ ತಕ್ಕಂತೆ ಫೋಟೋಶೂಟ್ ಮಾಡುವುಕ್ಕೆ ಖ್ಯಾತರಾಗಿರುವ ನಟಿ ಶ್ವೇತಾ ಶ್ರೀವಾತ್ಸವ. ಈ ಸಲ ನವರಾತ್ರಿಯ ಪ್ರಯುಕ್ತ ವಿಶೇಷವಾಗಿ ಫೋಟೋಶೂಟ್ಗೆ ಪೋಸ್ ಕೊಟ್ಟಿದ್ದಾರೆ.
2/ 6
ದಸರಾ ಹಬ್ಬಕ್ಕೆಂದು ಮಾಡಿರುವ ಫೋಟೋಶೂಟ್ನಲ್ಲಿ ಶ್ವೇತಾ ಶ್ರೀವಾತ್ಸವ ಅವರು ದುರ್ಗೆಯ ಅವತಾರ ತಾಳಿದ್ದಾರೆ. ಮಗಳ ಜತೆ ದೇವಿಯ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
3/ 6
ಹಬ್ಬದ ನಿಮಿತ್ತ ದೇವಿಯ ಉಡುಗೆ ತೊಟ್ಟು, ಥೇಟ್ ದೇವಿಯ ರೂಪದಲ್ಲಿಯೇ ಫೋಟೋಶೂಟ್ಗೆ ಪೋಸ್ ಕೊಟ್ಟಿದ್ದಾರೆ. ಆ ಚಿತ್ರಗಳನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
4/ 6
ಶ್ವೇತಾ ಶ್ರೀವಾತ್ಸವರು ಆಧುನಿಕ ಮಹಿಳೆ ಏನೆಲ್ಲ ಕೆಲಸಗಳನ್ನು ಮಾಡುತ್ತಾಳೆ ಎಂಬುದನ್ನು ಈ ಫೋಟೋಶೂಟ್ನಲ್ಲಿ ತೋರಿಸಿದ್ದಾರೆ. ಒಂದು ಮಗಳ ಆರೈಕೆಯ ತಾಯಿಯಾಗಿ ಕಾಣಿಸಿಕೊಂಡಿದ್ದಾರೆ.
5/ 6
ಒಂದು ಕೈಯಲ್ಲಿ ಭಗವದ್ಗೀತೆ, ಚಾಕು, ಲ್ಯಾಪ್ಟಾಪ್, ಪೆನ್ನು, ಯೋಗ ಮ್ಯಾಟ್, ಗಿಡದ ಪಾಟ್, ಗ್ಯಾಸ್ ಲೈಟರ್, ಮೊಬೈಲ್ ಜೊತೆಗೆ ಮಗಳನ್ನು ಎತ್ತಿಕೊಂಡಿದ್ದಾರೆ. ಶ್ವೇತಾ ಅವರ ಈ ಫೋಟೋಗೆ ನೆಟ್ಟಿಗರು ಸಖತ್ತಾಗಿ ಕಮೆಂಟ್ ಮಾಡುತ್ತಿದ್ದಾರೆ.
6/ 6
ಮಗಳು ಅಶ್ಮಿತಾಳಿಗೂ ಸೀರೆಯುಡಿಸಿ, ಆಭರಣಗಳನ್ನು ಧರಿಸಿ, ಕೈಗೆ ತ್ರಿಶೂಲ ಕೊಟ್ಟು ಕ್ಯೂಟ್ ಪೋಟೋಶೂಟ್ ಮಾಡಿಸಿದ್ದಾರೆ ಶ್ವೇತಾ ಶ್ರೀವಾತ್ಸವ. ಇನ್ನು ಸಿಂಪಲ್ ನಟಿಯ ಸಿನಿಮಾ ವಿಷಯಕ್ಕೆ ಬಂದರೆ ಹೋಪ್ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ.